News

ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ವಿತರಣೆ!

18 February, 2023 11:25 AM IST By: Kalmesh T
Free bus pass distribution for school and college students!

ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ನೀಡಲಾಗುವುದು ಎಂದು ಬಜೆಟ್‌ ಮಂಡನೆಯಲ್ಲಿ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಸರ್ಕಾರಿ ನೌಕರರಿಗೆ ಸಿಹಿಸುದ್ದಿ: 7ನೇ ವೇತನ ಆಯೋಗ ವರದಿ ಅನುಷ್ಠಾನಕ್ಕೆ 6 ಸಾವಿರ ಕೋಟಿ ಮೀಸಲು -ಸಿಎಂ

ಹಳ್ಳಿಗಾಡಿನ ಶಾಲಾ ಮಕ್ಕಳಿಗೆ 1000 ಬಸ್ 

ಹಳ್ಳಿಗಾಡಿನಲ್ಲಿ ಶಾಲಾ‌ಮಕ್ಕಳಿಗೆ 1000 ಶಾಲಾ ಬಸ್ ಓಡಿಸಲು ತೀರ್ಮಾನ ಮಾಡಲಾಗಿದೆ. ಬಸ್ ಲಭ್ಯತೆಗನುಗುಣವಾಗಿ ಕೆ.ಎಸ್.ಆರ್.ಟಿ.ಸಿ  ಅಥವಾ ಖಾಸಗಿ ಬಸ್ ಸೇವೆಯನ್ನು ಈ ಉದ್ದೇಶಕ್ಕೆ ಬಳಸಲಾಗುವುದು.

ಶಾಲಾ ಬಸ್ ಗಳ ಸಮಸ್ಯೆಯನ್ನು ನೀಗಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್‌ನಲ್ಲಿ ರೈತರಿಗೆ ಬಂಪರ್‌ ಗಿಫ್ಟ್‌!

ಘೋಷಿತ ಕಾರ್ಯಕ್ರಮಗಳ ಅನುಷ್ಠಾನ

100 ಎಸ್.ಸಿ-ಎಸ್.ಟಿ ಹಾಸ್ಟೆಲ್ ಗಳು, 50 ಓಬಿಸಿ  ಹಾಸ್ಟೆಲ್, 5 ಮೆಗಾ ಹಾಸ್ಟೆಲ್ ಗಳಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ವಸತಿ ಶಾಲೆಗಳ ಅಭಿವೃದ್ದಿ, ಹೊಸ ಶಾಲೆಗಳ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಲಾಗುವುದು.

ಹಿಂದುಳಿದ ವರ್ಗದ ಮಕ್ಕಳಿಗೆ ಹೆಚ್ಚವರಿಯಾಗಿ ವಿದ್ಯಾ ಸಿರಿ ಯೋಜನೆ ನೀಡಲಾಗುತ್ತಿದೆ. ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಾರ್ಷಿಕ 15000 ನೀಡಲಾಗುತ್ತಿದೆ. ಕಳೆದ ಬಾರಿ ಬಜೆಟ್ ನಲ್ಲಿ ಮೀಸಲಿಟ್ಟಿದ್ದಕ್ಕಿಂತ ಹೆಚ್ಚಿನ ಹಣ ಖರ್ಚು ಮಾಡಿದ್ದೇವೆ.

ಹಣ ಮೀಸಲಿಡುವುದಷ್ಟೆ ಅಲ್ಲ. ಅನುಷ್ಠಾನ ಮಾಡುವ ಕೆಲಸವನ್ನೂ ನಾವು ಮಾಡುತ್ತಿದ್ದೇವೆ.  ಕೇವಲ ಬಜೆಟ್ ಘೋಷಣೆಯಲ್ಲಿ, ಘೋಷಣೆಗಳನ್ನು ವಾಸ್ತವದಲ್ಲಿ ಅನುಷ್ಠಾನಗೊಳಿಸುತ್ತಿರುವ ಸರ್ಕಾರ ನಮ್ಮದು ಎಂದರು.

ಕಿಸಾನ್‌ ಕಾರ್ಡ್‌ದಾರರಿಗೆ ಸಿಗಲಿದೆ ಬರೋಬ್ಬರಿ 10,000 ಸಾವಿರ ರೂ!

ಅಸಂಘಟಿತ ಕಾರ್ಮಿಕರ ಬಗ್ಗೆ ವಿಶೇಷ ಕಾಳಜಿ :

ಕುರಿಗಾರರ ಅಭಿವೃಧ್ಧಿಗೆ 355 ಕೋಟಿ ರೂ.ಗಳ ಯೋಜನೆ, ಬಡಿಗೇರ, ಕಂಬಾರ, ಕುಂಬಾರ ಸೇರಿದಂತೆ ಕುಶಲಕರ್ಮಿಗಳಿಗೆ ಕಾಯಕ ಯೋಜನೆ ಅಡಿ 50 ಸಾವಿರ ರೂ ನೀಡಲಾಗುವುದು.

ಕಾರ್ಮಿಕ ವರ್ಗದ ಏಳಿಗೆಗೆ ವಿದ್ಯಾನಿಧಿ, ಆಸ್ಪತ್ರೆ ನಿರ್ಮಿಸಲಾಗುತ್ತಿದೆ.  ಎಲ್ಲ ಕಸುಬುಗಳಿಗೆ ಸೇರಿದ ಸುಮಾರು 70 ಲಕ್ಷವಿರುವ ಅಸಂಘಟಿತ ಕಾರ್ಮಿಕರಿಗೆ ನಿಗಮ ಸ್ಥಾಪನೆ ಮಾಡಲಾಗುವುದು.

ಎಲ್ಲ ಉದ್ಯೋಗ, ಆರೋಗ್ಯ, ಶಿಕ್ಷಣಗಳಲ್ಲಿ ಅಸಂಘಟಿತ ಕಾರ್ಮಿಕರ ಬಗ್ಗೆ ನಮ್ಮ ಸರ್ಕಾರ ವಿಶೇಷ ಕಾಳಜಿ ವಹಿಸಲಾಗಿದೆ ಎಂದರು.