News

ಗ್ರಾಸಿಂ ಜನ ಸೇವಾ ಟ್ರಸ್ಟ್ ವತಿಯಿಂದ ಉಚಿತ ಕೃತಕ ಕಾಲು ಜೋಡಣಾ ಶಿಬಿರ

30 October, 2020 8:19 AM IST By:

ಹುಬ್ಬಳ್ಳಿಯ  ಗ್ರಾಸಿಂ ಜನ ಸೇವಾ ಟ್ರಸ್ಟ್ ವತಿಯಿಂದ ಆದಿತ್ಯ ವಿಕ್ರಮ್ ಬಿರ್ಲಾಜಿಯವರ ಜನ್ಮ ದಿನದ ಜ್ಞಾಪಕಾರ್ಥವಾಗಿ 2020ನೇ ನವಂಬರ್ 19 ರಂದು ಹರಿಹರದ ಸಮೀಪದಲ್ಲಿರುವ ಕುಮಾರಪಟ್ಟಣದ ಗ್ರಾಸಿಂ ಸಭಾಂಗಣದಲ್ಲಿ ಉಚಿತ ಕೃತಕ ಕಾಲು ಜೋಡಣಾ ಶಿಬಿರವನ್ನು ಹಮ್ಮಿಕೊಂಡಿದೆ. ಫಲಾನುಭವಿಗಳು ಯೋಜನೆಯ ಲಾಭ ಪಡೆಯಬೇಕೆಂದು ಗ್ರಾಸಿಂ ಜನ ಸೇವಾ ಟ್ರಸ್ಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಕೊವಿಡ್-19 ರ ಮುಂಜಾಗೃತಾ ಕ್ರಮವಾಗಿ ಕಡ್ಡಾಯವಾಗಿ ಪ್ರತಿಯೊಬ್ಬರು ಮಾಸ್ಕ್‍ನ್ನು ಧರಿಸಬೇಕು, ಬೆಂಗಳೂರಿನ ಕರ್ನಾಟಕ ಮಾರವಾಡಿ ಯೂಥ್ ಫೆಡರೇಶನ್ ಇವರ ಸಹಕಾರದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕೇವಲ ಹೊಸ ಕಾಲುಗಳ ಜೋಡಣೆಗೆ ಮಾತ್ರ ಅವಕಾಶ ವಿರುತ್ತದೆ. ಹಳೆಯ ಕಾಲುಗಳ ರಿಪೇರಿಗೆ ಅವಕಾಶ ವಿರುವುದಿಲ್ಲ. ಆಸಕ್ತ ಫಲಾನುಭವಿಗಳು 2020ನೇ ನವಂಬರ್ 7ನೆ ತಾರಿಖಿನೊಳಗಾಗಿ ತಮ್ಮ ಹೆಸರನ್ನು, ಆಧಾರ ಕಾರ್ಡ್‍ನ್ನು ವಾಟ್ಸಾಪ್ ನಂ 9964348288 ಗೆ ಕಳುಹಿಸಿ ನೊಂದಾಯಿಸಿಕೊಳ್ಳಬೇಕು.

ಪ್ರಥಮವಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡ 150 ಫಲಾನುಭವಿಗಳಿಗೆ ಮಾತ್ರ ಕೃತಕ ಕಾಲು ಜೋಡಣೆಯನ್ನು ಮಾಡಲಾಗುತ್ತದೆ.  ಮೌಕಿಕವಾಗಿ ಸಂಪರ್ಕಿಸಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳುವುದಾದರೆ ಪ್ರತಿ ದಿನ ಬೆಳಿಗ್ಗೆ 8-30 ರಿಂದ ಸಂಜೆ 5-30 ರೊಳಗಾಗಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅವಶ್ಯ ವಿದ್ದಲ್ಲಿ ಒಬ್ಬ ವಿಕಲಚೇತನರ ಜೊತೆಯಲ್ಲಿ ಒಬ್ಬ ಸಹಾಯಕರಿಗೆ ಮಾತ್ರ ಅವಕಾಶ ವಿರುತ್ತದೆ. ಕೊವಿಡ್ 19ಕ್ಕೆ ತುತ್ತಾಗಿದ್ದರೆ ಪ್ರಮಾಣ ಪತ್ರ ಹಾಜರ್ ಪಡಿಸಿದಲ್ಲಿ ಚಿಕಿತ್ಸೆಗೆ ಸಹಕಾರಿಯಾಗುತ್ತದೆ. ಕೆಮ್ಮು, ಜ್ವರಾ, ಕಫಾ ಇದ್ದರೆ ಅವಕಾಶ ವಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಗ್ರಾಸಿಂ ಜನ ಸೇವಾ ಟ್ರಸ್ಟ್‍ನ ಗ್ರಾಮೀಣಾಭಿವೃದ್ಧಿ ವಿಭಾಗದ ಸಹಾಯಕ ವ್ಯವಸ್ಥಾಪಕರಾದ ರೇಣುಕಾ ಹೆಚ್ ನಾಗನೂರು 9964348288, ಮಂಜುನಾಥ ಎನ್ 8722429611ಗೆ ಸಂಪರ್ಕಿಸಲು ಪತ್ರಿಕಾ ಪ್ರಕಟಣೆ ತಿಳಿಸಿದೆ.