News

ಚಿರತೆ ಹಾವಳಿ ತಡೆಗೆ ವಿಶೇಷ ತಂಡ ರಚನೆ, ಮೃತಪಟ್ಟವರ ಕುಟುಂಬದವರಿಗೆ 15 ಲಕ್ಷ ಪರಿಹಾರ: ಸಿ.ಎಂ ಬೊಮ್ಮಾಯಿ

04 December, 2022 12:31 PM IST By: Hitesh
Formation of a special team to prevent leopard menace, 15 lakhs compensation to the families of the deceased: CM Bommai

ಇತ್ತೀಚಿನ ದಿನಗಳಲ್ಲಿ ಕಾಡಂಚಿನ ಗ್ರಾಮಗಳಲ್ಲಿ ಚಿರತೆಯ ಹಾವಳಿ ಹೆಚ್ಚಾಗಿದೆ. ಕಾಡಂಚಿನ ಗ್ರಾಮಗಳಲ್ಲಿ ವಾಸಿಸುವ ಜನ ಜೀವಭಯದಲ್ಲೇ ಓಡಾಡುವಂತಾಗಿದೆ.  

ಚಿರತೆ ಹಾವಳಿಯಿಂದ ಮೃತಪಟ್ಟ ಕುಟುಂಬದವರಿಗೆ 15 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಹಾಗೂ ಚಿರತೆ ಹಾವಳಿಯನ್ನು

ನಿಯಂತ್ರಿಸಲು ವಿಶೇಷ ತಂಡವನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರಿನ ಆರ್‌.ಟಿ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕಬ್ಬನ್‌ ಪಾರ್ಕ್‌ನಲ್ಲಿ ಬರಲಿದೆ ಸುರಂಗ ಅಕ್ವೇರಿಯಂ! ಸುರಂಗ ಅಕ್ವೇರಿಯಂನ ವಿಶೇಷತೆಗಳೇನು ಗೊತ್ತೆ ?

ಆನೆ ದಾಳಿಯಿಂದ ಮೃತಪಟ್ಟ ಕುಟುಂಬದವರಿಗೆ 15 ಲಕ್ಷ ರೂಪಾಯಿ ಪರಿಹಾರ ನೀಡಿದಂತೆ ಚಿರತೆ ದಾಳಿಯಲ್ಲಿ

ಮೃತಪಟ್ಟ ಕುಟುಂಬದವರಿಗೂ ಪರಿಹಾರ ನೀಡಲಾಗುವುದು. ಈ ಮೊದಲು ಕಾಡು ಪಕ್ಕದಲ್ಲಿ ಚಿರತೆ ಹಾವಳಿ ಇತ್ತು.

ಈಗ ಬೆಂಗಳೂರು ಆಸುಪಾಸಿನಲ್ಲೂ ಚಿರತೆ ಹಾವಳಿಯಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು,

ಚಿರತೆಯನ್ನು ಜೀವಂತವಾಗಿ ಹಿಡಿದು ಕಾಡಿಗೆ ಬಿಡುವಂತೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ.

ಚಿರತೆ ಹಾವಳಿ ತಡೆಗೆ ವಿಶೇಷ ತಂಡ ರಚನೆ

ಬೆಂಗಳೂರು ಹಾಗೂ ಮೈಸೂರು ವಲಯದ ಆನೆ ಕಾರಿಡಾರ್ ಸುತ್ತಮುತ್ತಲಿ ಪ್ರದೇಶದಲ್ಲಿ  ಚಿರತೆಗಳಿವೆ.

ಚಿರತೆ ದಾಳಿಯನ್ನು ತಡೆಯಲು ವಿಶೇಷ ತಂಡ ರಚಿಸಲಾಗಿತ್ತು. ಕಾಡು ಬಿಟ್ಟು ಆಚೆ ಬಂದಿರುವ ಚಿರತೆಗಳನ್ನು

ಹಿಡಿಯಲು ಈ ತಂಡ ಕಾರ್ಯಾಚರಣೆ ಮಾಡಲಿದೆ ಎಂದು ಹೇಳಿದರು.  

Formation of a special team to prevent leopard menace, 15 lakhs compensation to the families of the deceased: CM Bommai

ಕಾಡಿನಿಂದ ಆಚೆ ಬಂದಿರುವ ಚಿರತೆಗಳನ್ನು ಹಿಡಿದು ಮತ್ತೆ ಕಾಡಿಗೆ ಬಿಡಲು ಅರಣ್ಯಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಹಾಗೆಯೇ ಚಿರತೆ ಹಾವಳಿ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಸೂಚಿಸಲಾಗಿದೆ ಎಂದರು.

ಚಿರತೆ ದಾಳಿಯನ್ನು ತಡೆಯಲು ರಚಿಸಲಾಗಿರುವ ವಿಶೇಷ ತಂಡ ಸಮರ್ಪಣಾಭಾವದಿಂದ ಕಾರ್ಯನಿರ್ವಹಿಸಲಿದೆ.

ಚಿರತೆ ಹಾವಳಿಯನ್ನು ತಡೆಯಲು ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.

ಚಿರತೆ ಹಾವಳಿಯಿಂದ ಮೈಸೂರು ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದರು. ಹಾಗೆಯೇ ಬೆಂಗಳೂರಿನ ಕೆಂಗೇರಿ ಹಾಗೂ ಕುಂಬಳಗೋಡು

ಸುತ್ತಮುತ್ತ ಚಿರತೆ ಕಾಣಿಸಿಕೊಂಡು ಆತಂಕ ಮೂಡಿಸಿದೆ. ಎರಡು ದಿನಗಳ ಹಿಂದೆ ಕೆಂಗೇರಿ ಬಳಿಯ ಕೋಡಿಪಾಳ್ಯದಲ್ಲಿ

ಜಿಂಕೆಯೊಂದು ಚಿರತೆ ದಾಳಿಗೆ ಮೃತಪಟ್ಟಿರುವುದು ವರದಿ ಆಗಿತ್ತು.  

Formation of a special team to prevent leopard menace, 15 lakhs compensation to the families of the deceased: CM Bommai

ಏರ್‌ಪೋರ್ಟ್ ರಸ್ತೆಯಲ್ಲೂ ಚಿರತೆ ಪ್ರತ್ಯಕ್ಷ!

ಕಾಡಂಚಿನ ಗ್ರಾಮಗಳೊಂದಿಗೆ ಇದೀಗ ಬೆಂಗಳೂರಿನ ವಿಮಾನ ನಿಲ್ದಾಣದ ರಸ್ತೆಯಲ್ಲೂ

ಚಿರತೆಯ ಚಲನವನ ಕಾಣಿಸಿಕೊಂಡಿರುವುದು ಮತ್ತಷ್ಟು ಆತಂಕವನ್ನು ಸೃಷ್ಟಿಸಿದೆ.

ಬೆಂಗಳೂರಿನ ಕೆಂಗೇರಿ ಆಸುಪಾಸಿನಲ್ಲಿ ಚಿರತೆ ಕಾಣಿಸಿಕೊಂಡಿದ್ದ ಬೆನ್ನಲ್ಲೇ

ವಿಮಾನ ನಿಲ್ದಾಣ ರಸ್ತೆಯಲ್ಲೂ ಚಿರತೆ ಪ್ರತ್ಯಕ್ಷವಾಗಿರುವುದು ವರದಿ ಆಗಿದೆ.   

ಬೆಂಗಳೂರಿನ ವಿಮಾನ ನಿಲ್ದಾಣ ರಸ್ತೆಯ ಐಟಿಸಿ ಫ್ಯಾಕ್ಟರಿಯ ಸಿಸಿಟಿವಿ ಕ್ಯಾಮರದಲ್ಲಿಯೂ ಚಿರತೆಯ ಚಲನವನ ಸೆರೆ ಆಗಿದೆ.

ಐಟಿಸಿ ಫ್ಯಾಕ್ಟರಿ ಕಾಂಪೌಂಡ್‌ಗೆ ಹೊಂದಿಕೊಂಡಂತಿರುವ ತೋಟದಲ್ಲಿ ಚಿರತೆ ಹೆಜ್ಜೆ ಗುರುತು ಕಾಣಿಸಿಕೊಂಡಿದೆ.