News

ಎಫ್.ಎಂ.ಸಿ.ಜಿ ಕ್ಲಸ್ಟರ್ - ಹೂಡಿಕೆದಾರರ ಸಮಾವೇಶ; 1200 ಕೋಟಿ ಬಂಡವಾಳ, ಲಕ್ಷಾಂತರ ಜನರಿಗೆ ಉದ್ಯೋಗ!

29 October, 2022 10:21 AM IST By: Hitesh
basavaraj bommai

ಎಫ್.ಎಂ.ಸಿ.ಜಿ ಕ್ಲಸ್ಟರ್ನ ಮೂಲಕ 1200 ಕೋಟಿ ಬಂಡವಾಳ ಹಾಗೂ ಲಕ್ಷಾಂತರ ಜನರಿಗೆ ಉದ್ಯೋಗ ಅವಕಾಶ ಸೃಷ್ಟಿಯಾಗಿದೆ.   

ಇದನ್ನೂ ಓದಿರಿ: ಕುಲಾಂತರಿ ಸಾಸಿವೆಗೆ ಅನುಮತಿ; ರೈತರಿಗೆ ಆಗುವ ಲಾಭಗಳೇನು? 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಫ್.ಎಂ.ಸಿ.ಜಿ ಕ್ಲಸ್ಟರ್ - ಹುಬ್ಬಳ್ಳಿ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಉದ್ಘಾಟಿದ್ದು, ಎಫ್.ಎಂ.ಸಿ.ಜಿ ರಾಜ್ಯದಲ್ಲಿ ಅಭಿವೃದ್ಧಿ ಪರ್ವ ತರಲಿದೆ ಎಂದಿದ್ದಾರೆ.

ಅಲ್ಲದೇ ಎಫ್.ಎಂ.ಸಿ.ಜಿ ಕ್ಲಸ್ಟರ್ 1200 ಕೋಟಿ ಬಂಡವಾಳ ಹಾಗೂ ಲಕ್ಷಾಂತರ ಜನರಿಗೆ ಉದ್ಯೋಗ ನೀಡುವ ಕಾರ್ಯ ದಕ್ಷಿಣ ಭಾರತಕ್ಕೆ ಮಾದರಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

"ಐಟಮ್‌" ಎಂದು ಚುಡಾಯಿಸಿದವನಿಗೆ ಜೈಲು ಸಜೆ! 

ಹುಬ್ಬಳ್ಳಿಯ ಡೆನಿಸನ್ಸ್‌ ಹೊಟೇಲ್‌ನಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾಡಳಿತ ಹಾಗೂ ಎಫ್.ಐ.ಸಿ.ಸಿ.ಐ ಸಹಯೋಗದಲ್ಲಿ ಆಯೋಜಿಸಿದ್ದ ಎಫ್.ಎಂ.ಸಿ.ಜಿ ಕ್ಲಸ್ಟರ್ ಹುಬ್ಬಳ್ಳಿ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಸಿ.ಎಂ ಬೊಮ್ಮಾಯಿ ಅವರು ಮಾತನಾಡಿದರು.

ಆರ್ಥಿಕ ಹಾಗೂ ಸಾಮಾಜಿಕ ಮೌಲ್ಯ ಬೆಳೆದರೆ ದೇಶ ಪ್ರಗತಿಯತ್ತ ಸಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯಾಗಲು ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.

ಧಾರವಾಡ ಸೇರಿದಂತೆ ರಾಜ್ಯದ ನಾಲ್ಕು ಕಡೆ ವಿಶೇಷ ಹೂಡಿಕೆ ಪ್ರದೇಶ ( ಎಸ್.ಐ.ಆರ್ ) ಕರಡು ಸಿದ್ಧಗೊಂಡಿದ್ದು, ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ  ಅನುಮೋದನೆ ಪಡೆದುಕೊಳ್ಳಲಾಗುವುದು.

ರಾಜ್ಯವು ಹಲವಾರು ಕ್ಷೇತ್ರಗಳಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ದೇಶದ 500 ಆರ್ ಆ್ಯಂಡ್ ಡಿ ಕಂಪನಿಗಳ ಪೈಕಿ 400 ಕಂಪನಿಗಳು ನಮ್ಮ ರಾಜ್ಯದಲ್ಲಿವೆ.

ಆರ್ ಆ್ಯಂಡ್ ಡಿ ( ಸಂಶೋಧನೆ ಮತ್ತು ಅಭಿವೃದ್ಧಿ) ನೀತಿ ಸಹ ಪರಿಷ್ಕರಣೆಗೊಳ್ಳುವ ಹಂತದಲ್ಲಿದೆ.

ಉದ್ಯೋಗ ನೀತಿಯನ್ನು ಸಹ ಯುವಕರನ್ನು ಗಮನದಲ್ಲಿಟ್ಟು ಜಾರಿಗೆ ತರಲಾಗಿದೆ. ಕಾಲಕಾಲಕ್ಕೆ ತಕ್ಕಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಸಹ ಬದಲಾವಣೆ ತರಲಾಗುವುದು ಎಂದು ತಿಳಿಸಿದರು.

ಬೆಂಗಳೂರು ಕೃಷಿ ವಿವಿಯಿಂದ 9 ಹೊಸ ತಳಿಗಳ ಶೋಧ ರೈತರಿಗೆ ಅಧಿಕ ಇಳುವರಿ, ತಳಿಗಳಿಗೆ ರೋಗ ನಿರೋಧಕ ಶಕ್ತಿ

ಎಫ್.ಎಂ.ಸಿ.ಜಿ ಈ ಭಾಗದ ಆರ್ಥಿಕ ಅಭಿವೃದ್ಧಿ ಆಗದೇ ಇಡೀ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲಿದೆ.

ಕೃಷಿ ಬೆಳವಣಿಗೆ ಹಾಗೂ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸೇವಾ ಕ್ಷೇತ್ರಕ್ಕೂ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ರಾಜಕೀಯ ಇಚ್ಛಾಶಕ್ತಿ ಮುಖ್ಯ. ಇಚ್ಛಾಶಕ್ತಿ ಇದ್ದಲ್ಲಿ ಮಾತ್ರ ನಿರಂತರ ಅಭಿವೃದ್ಧಿ ಕಾಣಬಹುದಾಗಿದೆ ಎಂದರು.

ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, 14 ಸಾವಿರ ಸ್ಟಾರ್ಟ್ ಅಪ್‌ಗಳು ಭಾರತಕ್ಕೆ ಬಂದಿವೆ.

ಮೊದಲು 400 ಸ್ಟಾರ್ಟ್ ಅಪ್ ಗಳು ಮಾತ್ರ ಇದ್ದವು. 3 ಮಿಲಿಯನ್ ನಿಂದ 60 ಮಿಲಿಯನ್ ಮೊಬೈಲ್ ಉತ್ಪಾದನೆ ಮಾಡುತ್ತಿದ್ದೇವೆ.

ಭಾರತವು ಇಂದು ವಿದ್ಯುತ್ ವಿತರಿಸುತ್ತಿರುವ ರಾಷ್ಟ್ರವಾಗಿದೆ. 3.2 ಟ್ರಿಲಿಯನ್ ಆರ್ಥಿಕತೆ ಹೊಂದಿದ್ದು, ಕರ್ನಾಟಕ 1 ಟ್ರಿಲಿಯನ್ ಆರ್ಥಿಕತೆ ಜೊತೆಗೆ ಭಾರತವು 2047 ರಲ್ಲಿ 32 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಲಿದೆ.

ಬದಲಾವಣೆ ದೇಶದಲ್ಲಿ ಆಗುತ್ತಿದೆ. ಹುಬ್ಬಳ್ಳಿ ಅಂಕೋಲಾ ರೈಲು, ಬೆಲೆಕೇರಿ ಬಂದರು ಅಭಿವೃದ್ಧಿ ಮಾಡಲಾಗುವುದು.

ದೆಹಲಿ, ಅಹ್ಮದಾಬಾದ್ ರೈಲಿನ ಬಗ್ಗೆ ಗಮನಹರಿಸಲಾಗುವುದು. ಹುಬ್ಬಳ್ಳಿಯು ಕೈಗಾರಿಕೆಗಳ ಸ್ಥಾಪನೆಗೆ ಉತ್ತಮ ವಾತಾವರಣ ಹೊಂದಿದೆ ಎಂದು ತಿಳಿಸಿದರು. 

basavaraj bommai

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ. ಮುರುಗೇಶ್ ನಿರಾಣಿ ಮಾತನಾಡಿ, ಕೈಗಾರಿಕೆಗಳಿಗೆ ಶೇ 20 ರಷ್ಟು ಸಬ್ಸಿಡಿ ನೀಡಲಾಗುತ್ತಿದೆ.

ಅಲ್ಲದೇ ಶೇ. 3 ರಷ್ಟು ಜಿಎಸ್ ಟಿ ತೆರಿಗೆ ವಿನಾಯಿತಿ ಒದಗಿಸಲಾಗುತ್ತದೆ. ಸ್ವದೇಶದವರು ಬಂಡವಾಳ ಹೂಡಿಕೆ ಮಾಡಲು ಮುಂದಾಗಬೇಕಾಗಿದೆ ಎಂದರು.

ಮೂರು ದಿನಗಳ ಕಾಲ ಗ್ಲೋಬಲ್ ಇನ್ವೆಸ್ಟ್ ನಡೆಯಲಿದ್ದು, 5 ಲಕ್ಷ ಕೋಟಿ ಬಂಡವಾಳ ಹೂಡಿಕೆ ಆಗಲಿದೆ.‌ 5 ಲಕ್ಷ ಉದ್ಯೋಗಾವಕಾಶ ದೊರೆಯಲಿದೆ.

ವಿಮಾನದ ಬಿಡಿಭಾಗಗಳನ್ನು ಇಲ್ಲಿಯೇ ತಯಾರಿಸಲಾಗುವುದು ಎಂದು ಭರವಸೆ ನೀಡಿದರು.

ಜ್ಯೋತಿ ಲ್ಯಾಬ್ಸ್, ಯುಪ್ಲೆಕ್ಸ್, ಗೋದಾವತ್ ಫುಡ್ಸ್ ಸೇರಿದಂತೆ ಒಟ್ಟು 16 ಕಂಪನಿಗಳ ಜೊತೆ ರೂ. 1275 ಕೋಟಿ ವೆಚ್ಚದ ಒಡಂಬಡಿಕೆಗಳನ್ನು ವಿತರಿಸಲಾಯಿತು.

ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಜಿಲ್ಲಾ ಉಸ್ತುವಾರಿ ಸಚಿವ ಆಚಾರ್ ಹಾಲಪ್ಪ, ಸಣ್ಣ ಕೈಗಾರಿಕೆ ಮತ್ತು ಪೌರಾಡಳಿತ ಸಚಿವ ಎನ್.ನಾಗರಾಜ್,

ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕರಾದ ಬಸವರಾಜ ಹೊರಟ್ಟಿ, ಅಬ್ಬಯ್ಯ ಪ್ರಸಾದ್, ಪ್ರದೀಪ ಶೆಟ್ಟರ್, ಅಮೃತ ದೇಸಾಯಿ,

ಸಿ.ಎಂ. ನಿಂಬಣ್ಣವರ, ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಭುರಾಮ್, ಉದ್ಯಮಿಗಳಾದ ವಿಜಯ ಸಂಕೇಶ್ವರ, ಕೆಎಲ್ ಇ ಸಂಸ್ಥೆಯ ಕುಲಪತಿ ಅಶೋಕ ಶೆಟ್ಟರ್‌ ಇದ್ದರು.    

FMCG Cluster - Investors Conference