News

ಮೀನುಗಾರರಿಗೆ ಆರ್ಥಿಕ ನೆರವು ನೀಡಲಾಗುವುದು- ಸಚಿವ ಎಸ್. ಅಂಗಾರ

20 April, 2022 3:51 PM IST By: Kalmesh T
Fishermen to be provided financial assistance Organs

ಸ್ಥಳೀಯವಾಗಿ ದೊರೆಯುವ ಉತ್ತಮ ನೀರು ಬಳಸಿಕೊಂಡು ಭತ್ತ ಹಾಗೂ ಮೀನು ಕೃಷಿ ಮಾಡಿ ರೈತರು ಆರ್ಥಿಕವಾಗಿ ಸದೃಢರಾಗಬೇಕು. ಆತ್ಮ ನಿರ್ಭರ ಯೋಜನೆಯಡಿ ಮೀನುಗಾರರಿಗೆ ಆರ್ಥಿಕ ನೆರವು ನೀಡಲಾಗುವುದು ಎಂದು ಸಚಿವ ಎಸ್. ಅಂಗಾರ (Minister S Angara) ಹೇಳಿದರು.

ಜಿಲ್ಲೆಯಲ್ಲಿ ದೊರೆಯುವ ಉತ್ತಮ ನೀರು ಬಳಸಿಕೊಂಡು ಭತ್ತ ಹಾಗೂ ಮೀನು ಕೃಷಿ (Fish farming) ಮಾಡಿ ರೈತರು ಆರ್ಥಿಕವಾಗಿ ಸದೃಢರಾಗಬೇಕು. ಅಲ್ಲದೆ ಮೀನು ಒಂದು ಪೌಷ್ಟಿಕ ಆಹಾರವಾಗಿದ್ದು, ಇದರಿಂದ ಸುಮಾರು 19 ವಿವಿಧ ಆಹಾರ ಉತ್ಪಾದನೆಗಳನ್ನು ಮಾಡಬಹುದಾಗಿದೆಂದು ಮೀನುಗಾರಿಕೆ, ಬಂದರು, ಒಳನಾಡು ಜಲ ಸಾರಿಗೆ ಸಚಿವ (Minister of Ports and Inland Transport Department) ಎಸ್. ಅಂಗಾರ (S Angara) ಅವರು ಹೇಳಿದರು.    

ಇದನ್ನೂ ಓದಿರಿ:

NAFED ಮಹಾರಾಷ್ಟ್ರದಲ್ಲಿ ಈರುಳ್ಳಿ ಖರೀದಿಯನ್ನು ಪ್ರಾರಂಭಿಸಿದೆ

ಭರ್ಜರಿ ಸುದ್ದಿ: ಈ ಯೋಜನೆಯಲ್ಲಿ ಟ್ರ್ಯಾಕ್ಟರ್‌ ಕೊಳ್ಳಲು ಸರ್ಕಾರವೇ ದುಡ್ಡು ನೀಡುತ್ತೆ

ರಾಯಚೂರು ನಗರದ ಹೊರವಲಯದ ಸರ್ಕ್ಯೂಟ್ ಹೌಸ್‌ನಲ್ಲಿ ಮೀನುಗಾರಿಕೆಯ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದ ಅವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಇತ್ತೀಚೆಗೆ ಸಿರಗುಪ್ಪ ತಾಲೂಕಿನಲ್ಲಿ ಮೊದಲ ಮೀನು ಮಾರುಕಟ್ಟೆ ಪ್ರಾರಂಭಿಸಿದ್ದು, ಕೃಷಿ ಹೊಂಡ, ಮೀನಿನ ಕೆರೆ, ಬಂಜರು ಭೂಮಿ, ಸವಳು ಭೂಮಿಯಲ್ಲಿ ಭತ್ತದ ಬೆಳೆ ಜತೆ ಮೀನುಗಾರಿಕೆ ಕೃಷಿ ಅಳವಡಿಸಿಕೊಂಡರೆ ರೈತರು ಹೆಚ್ಚಿನ ಲಾಭಗಳಿಸಬಹುದಾಗಿದೆ ಎಂದರು.

ಪಿಎಂ ಕಿಸಾನ್: 11ನೇ ಕಂತು ಶೀಘ್ರದಲ್ಲೆ ಬಿಡುಗಡೆ! ಫಲಾನುಭವಿಗಳ ಪಟ್ಟಿಯಲ್ಲಿ ಈಗಲೇ ನಿಮ್ಮ ಹೆಸರು ಪರಿಶೀಲಿಸಿ

7th Pay Commision: ಈ ತಿಂಗಳ ಅಂತ್ಯದೊಳಗೆ ಹೆಚ್ಚುತ್ತಾ ಕೇಂದ್ರ ಸರ್ಕಾರಿ ನೌಕರರ HRA..?

ಪ್ರಧಾನಮಂತ್ರಿ ನರೇಂದ್ರ ಮೋದಿ ಯವರು ಆತ್ಮ ನಿರ್ಭರ ಯೋಜನೆ ( Atmanirbhar scheme ) ಮೂಲಕ ಆನೇಕ ಗುಂಪು ರಚಿಸಿ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವು ನೀಡುತ್ತಿದ್ದಾರೆ. ಯುವಕರು ಸ್ವಯಂ ಉದ್ಯೋಗ ಕೈಗೊಳ್ಳಬೇಕು, ಕರಾವಳಿ ಭಾಗದ 327ಕಿ.ಮೀ, ಒಳನಾಡಿನ ಭಾಗದ ಮೀನುಗಾರರ ಸಮಸ್ಯೆ ಪರಿಶೀಲಿಸಿ ಇಲಾಖೆಯಿಂದ ಮತ್ತು ನಿಗಮದಿಂದ ಆನೇಕ ಸೌಲಭ್ಯಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.  

ಜಿಲ್ಲೆಯಲ್ಲಿ 244 ಸಣ್ಣ ಕೆರೆಗಳು: ಜಿಲ್ಲೆಯಲ್ಲಿ ಒಟ್ಟು 244 ಸಣ್ಣ ಕೆರೆಗಳಿದ್ದು, ಈ ಕೆರೆಗಳ ಜಲವಿಸ್ತೀರ್ಣ 1135.12 ಹೊಂದಿದೆ. ಕೆರೆಗಳ ಭರ್ತಿಯನ್ನು ನೋಡಿ ಮೀನುಗಾರಿಕೆ ಅಭಿವೃದ್ಧಿ ಮಾಡಲಾಗುತ್ತಿದೆ. ಮೀನು ಸಾಕಾಣಿಕೆಗಾಗಿ ದೊಡ್ಡ ಕೆರೆಗಳಲ್ಲಿ ನೀರು ಅನುಕೂಲವಾಗಿರುತ್ತದೆ. ಇನ್ನುಳಿದ ಸಣ್ಣ ಕೆರೆಗಳಲ್ಲಿ ಆರು ತಿಂಗಳ ಒಳಗಾಗಿ ನೀರಿನ ಅಭಾವದಿಂದ ಕೆರೆಗಳು ಒಣಗಿ ಹೊಗುತ್ತಿವೆ ಎಂದು ಹೇಳಿದರು.

ಪಿಎಂ ಕಿಸಾನ್: 11ನೇ ಕಂತು ಶೀಘ್ರದಲ್ಲೆ ಬಿಡುಗಡೆ! ಫಲಾನುಭವಿಗಳ ಪಟ್ಟಿಯಲ್ಲಿ ಈಗಲೇ ನಿಮ್ಮ ಹೆಸರು ಪರಿಶೀಲಿಸಿ

7th Pay Commision: ಈ ತಿಂಗಳ ಅಂತ್ಯದೊಳಗೆ ಹೆಚ್ಚುತ್ತಾ ಕೇಂದ್ರ ಸರ್ಕಾರಿ ನೌಕರರ HRA..?

ಇದೇ ಸಂದರ್ಭದಲ್ಲಿ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿಖಿಲ್, ಮೀನುಗಾರಿಕೆ ಇಲಾಖೆಯ ಅಪರ ನಿರ್ದೇಶಕ ಎಮ್.ಎಲ್.ದೊಡ್ಡಮನಿ, ಮೀನುಗಾರಿಕೆ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಗಿರೀಶ್, ಮೀನುಗಾರಿಕೆ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕಿ ಸುಮಾ, ಸಚಿವರ ವಿಶೇಷ ಅಧಿಕಾರಿ ಎಮ್.ಮಲ್ಲಿಕಾರ್ಜುನ ಸೇರಿದಂತೆ ಇತರರು.

WPI Inflation: ಗರಿಷ್ಠ ಮಟ್ಟಕ್ಕೆ ಸಗಟು ಹಣದುಬ್ಬರ..ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ..

ಈ ತಪ್ಪುಗಳನ್ನ ಮಾಡಿದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಕ್ಲೋಸ್ ಆಗೋದು ಫಿಕ್ಸ್..!