News

ಚಂದ್ರಕಾಂತ ತಾರೆಯವರಿಗೆ ಕೋಟ್ಯಾಧಿಪತಿಯನ್ನಾಗಿ ಮಾಡಿತು ಸಿ ಗೋಲ್ಡ್‌ ಮೀನು

02 September, 2021 8:57 AM IST By:

ಮಹಾರಾಷ್ಟ್ರದ ಪಾಲ್ಗಾರ್‌ನ ಮುರ್ಬೆಯ ಮೀನುಗಾರ ಚಂದ್ರಕಾಂತ್ ತಾರೆ ಎಂಬವರು ಹಿಡಿದಿದ್ದ ಅಪರೂಪದ ಮೀನುಗಳು ಅವರನ್ನು ಕೋಟ್ಯಾಧಿಪತಿಯನ್ನಾಗಿಸಿದೆ, ಹೌದು ಇದು ಸತ್ಯ. ಸೀ ಗೋಲ್ಡ್ ಎಂದೇ ಕರೆಯಲ್ಪಡುವ ಈ ಮೀನು  ಸಮುದ್ರ ಮೀನುಗಳಲ್ಲಿ ಅತ್ಯಂತ ದುಬಾರಿಯಾಗಿದೆ.. ಔಷಧೀಯ ಗುಣಗಳನ್ನು ಹೊಂದಿರುವ ಇದರ ಹೃದಯವನ್ನು 'ಸೀ ಗೋಲ್ಡ್' ಎಂದು ಕರೆಯಲಾಗುತ್ತದೆ. ಇದು ವಿವಿಧ ಔಷಧಿಗಳನ್ನು ತಯಾರಿಸುವ ಪ್ರಮುಖ ಅಂಶವಾಗಿರುವುದರಿಂದ ಇಷ್ಟೊಂದು ದುಬಾರಿಯಾಗಿ ಮಾರಾಟವಾಗುತ್ತದೆ.

ಮಳೆಗಾಲದಲ್ಲಿ ಜೂನ್ ಜುಲೈ ತಿಂಗಳಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯಲು ಬಿಡುವುದಿಲ್ಲ. ಆಗಸ್ಟ್ ತಿಂಗಳಲ್ಲಿ ಮೀನುಗಾರಿಕೆಗೆ ಅನುವು ಮಾಡಿಕೊಡಲಾಗಿತ್ತು. ಆಗಸ್ಟ್ 15 ರಂದು ಚಂದ್ರಕಾಂತ ತಾರೆಯವರು 10 ಸಿಬ್ಬಂದಿಯೊಂದಿಗೆ ಅರೇಬಿಯನ್ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದರು. ಮಹಾರಾಷ್ಟ್ರ-ಗುಜರಾತ್ ಕರಾವಳಿಯ ವಾಧ್ವಾನ್‌ನಿಂದ ಸುಮಾರು 20 ರಿಂದ 25 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ, ತಾರೆ ಮತ್ತು ಅವರ ತಂಡವು 157 ಘೋಲ್ ಮೀನುಗಳು ಬಲೆಗೆ ಬಿದ್ದಿದ್ದವು.

ಮೀನುಗಳನ್ನು ಹಿಡಿದ ಬಳಿಕ ಅವರು ಸಮುದ್ರದಿಂದ ಹೊರಬರುವ ಮುನ್ನವೇ ಈ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತ್ತು. ಆಗಸ್ಟ್ 28 ರಂದು, ಅವರು ಮುರ್ಬೆಗೆ ಮರಳಿದಾಗ ವ್ಯಾಪಾರಿಗಳು ಸಾಲುಗಟ್ಟಿ ನಿಂತಿದ್ದರು.

ತಾವು ಹಿಡಿದಿದ್ದ ಅಪರೂಪದ ಘೋಲ್ ಫಿಶ್‌ಗಳನ್ನು ಹರಾಜು ಮಾಡಿದಾಗ ಸುಮಾರು  1.33 ಕೋಟಿ ರೂಪಾಯಿಗೆ ಬಿಡ್ ಆಗಿವೆ. ಪಾಲ್ಘರ್‌ನ ಮರ್ಬೆ ಮಾರುಕಟ್ಟೆಯಲ್ಲಿ ಬಿಹಾರ ಮತ್ತು ಉತ್ತರ ಪ್ರದೇಶದ ವ್ಯಾಪಾರಿಗಳು 1.33 ಕೋಟಿ ರೂ. ನೀಡಿ ಪೂರ್ಣ ಪ್ರಮಾಣದಲ್ಲಿ ಅದನ್ನು ಖರೀಸಿದ್ದಾರೆ.

ದುಬಾರಿ ಬೆಲೆ ಏಕೆ?

 ಈ ಮೀನನ್ನು ಅತ್ಯಂತ ಸವಿಯಾದ ಪದಾರ್ಥವೆಂದು ಪರಿಗಣಿಸಲಾಗುತ್ತದೆ. ಪೂರ್ವ-ಏಷ್ಯಾದಲ್ಲಿ ಅದರ ಆಂತರಿಕ ಅಂಗಗಳ ಔಷಧೀಯ ಗುಣಗಳಿಗಾಗಿ ಹೆಚ್ಚು ಜನಪ್ರಿಯವಾಗಿದೆ. ಇದರ ರೆಕ್ಕೆಗಳು ಸಹ ಔಷಧೀಯ ಮೌಲ್ಯವನ್ನು ಹೊಂದಿವೆ. ಈ ಮೀನಿನ ಪ್ರತಿಯೊಂದು ಭಾಗವೂ ವಿವಿಧ ರೀತಿಯ ಔಷಧ ತಯಾರಿಕೆಗೆ ಬಳಕೆ ಆಗುತ್ತದೆ. ಸೌಂದರ್ಯ ವರ್ಧ ಕಗಳು, ಶಸ್ತ್ರಚಿಕಿತ್ಸೆಯ ವೇಳೆ ಸ್ಪೀಚ್‌ಗೆ ಬಳಸುವ ದಾರದ ತಯಾರಿಕೆ ಹೀಗೆ ನಾನಾ ಕಾರಣಕ್ಕೆ ಬಳಕೆ ಆಗುತ್ತದೆ.

ಔಷಧೋದ್ಯಮ ಮತ್ತು ವೈದ್ಯಕೀಯ ಲೆಕ್ಕಾಚಾರದಲ್ಲಿ ಹೇಳುವುದಿದ್ದರೆ ಆ ಮೀನು ಮೌಲ್ಯಯುತವೂ ಹೌದು. ಹಾಂಕಾಂಗ್‌, ಮಲೇಷ್ಯಾ, ಥೈಲ್ಯಾಂಡ್‌, ಸಿಂಗಾಪುರ, ಜಪಾನ್‌ಗಳಲ್ಲಿ ಅದಕ್ಕೆ ಭಾರೀ ಬೇಡಿಕೆ ಇದೆ. ಹೆಚ್ಚುತ್ತಿರುವ ಸಮುದ್ರ ಮಾಲಿನ್ಯದಿಂದಾಗಿ ಅವುಗಳ ತಳಿ ನಶಿಸುತ್ತಿದೆ. ಈ ಮೀನಿನ ವೈಜ್ಞಾನಿಕ ಹೆಸರು “ಪ್ರೊಟೋನಿಬಿ ದಯಾಕ್ಯಾಂತಸ್‌’  ಅದರ ಚರ್ಮದಿಂದ ಶಸ್ತ್ರಚಿಕಿತ್ಸೆಯ ಬಳಿಕ ಸ್ವಯಂಚಾಲಿತವಾಗಿ ಕರಗಿ ಹೋಗುವ ಸ್ಟಿಚ್‌ ತಯಾರಿಸುತ್ತಾರೆ.