News

ಕತ್ತೆಯ ಹಾಲಿನ ಡೈರಿ ಶೀಘ್ರ ಆರಂಭ- 1 ಲೀಟರ್ ಹಾಲಿಗೆ 7 ಸಾವಿರ ರೂಪಾಯಿ

26 August, 2020 9:11 AM IST By:

ನೀವು ಆಕಳು, ಆಡು ಅಥವಾ ಎಮ್ಮೆಯ ಹಾಲಿನ ಡೈರಿ ಕೇಳಿದ್ದೀರಿ ಮತ್ತು ನೋಡಿದ್ದೀರಿ. ಕತ್ತೆಯ ಹಾಲಿಗೂ ಬಂಗಾರದ ಬೇಡಿಕೆ ಅಷ್ಟೇ ಅಲ್ಲ, ಕತ್ತೆಯ ಡೈರಿಯೂ ಅತೀ ಶೀಘ್ರದಲ್ಲಿ ಆರಂಭವಾಗಲಿದೆ. ಹರಿಯಾಣದ ಹಿಸ್ಸಾರನಲ್ಲಿ ಕತ್ತೆಯ ಹಾಲಿನ ಡೈರಿ ಆರಂಭವಾಗಲಿದೆ.

ಹೌದು, ಇದನ್ನು ನೀವು ನಂಬಲೇ ಬೇಕು.ದೇಶದಲ್ಲಿಯೇ ಮೊದಲ ಬಾರಿಗೆ ಕತ್ತೆ ಹಾಲಿನ ಡೈರಿ ಇದಾಗಿದ್ದು, ಒಂದು ಲೀಟರ್  ಕತ್ತೆ ಹಾಲಿಗೆ ಏಳು ಸಾವಿರ ರೂಪಾಯಿ ಫಿಕ್ಸ್ ಮಾಡಲಾಗಿದೆ.

ಕತ್ತೆಯ ಹಾಲು ಮನುಷ್ಯರಿಗೆತುಂಬಾ ಪ್ರಯೋಜನಕಾರಿಯಾಗಿದೆ. ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು  ಕತ್ತೆಯ ಹಾಲು ಸಾಕಷ್ಟುಅನುಕೂಲ ಮಾಡಿಕೊಡುತ್ತದೆ. ಅಲ್ಲದೆ ಕತ್ತೆಯ ಹಾಲಿನಲ್ಲಿ ಸೌಂದರ್ಯವರ್ಧಕ ಉತ್ಪನ್ನಗಳನ್ನು ಸಹ ತಯಾರಿಸಲಾಗುತ್ತದೆ. National Horse Research Centre) ಎನ್.ಆರ್.ಸಿ.ಐ ಈ ಡೈರಿಯನ್ನು ತೆರೆಯಲು ಸಿದ್ದತೆ ನಡೆಯುತ್ತಿದೆ. ವಿಶೇಷ  ಜಾತಿಯ 10 ಕತ್ತೆಗಳನ್ನು ಮೊದಲ ಹಂತದಲ್ಲಿ ಸಾಕಲು ನಿರ್ಧರಿಸಲಾಗಿದೆ. ಇದರ ಹಾಲನ್ನು ಕ್ಯಾನ್ಸರ್, ಬೊಜ್ಜು, ಅಲರ್ಜಿಯಂತಹ ರೋಗಗಳಿಗೆ ಔಷಧಿ ರೂಪದಲ್ಲಿ ಬಳಸಲಾಗುತ್ತದೆ.

ಹಲಾರಿ ತಳಿಯ ಮಹತ್ವ:

ಕತ್ತೆಯ ಈ ತಳಿ ಗುಜರಾತಿನಲ್ಲಿ ಕಂಡುಬರುತ್ತದೆ. ಮತ್ತು ಅದರ ಹಾಲನ್ನು  ಔಷಧಿಗಳ ನಿಧಿ ಎಂದೇ ಕರೆಯಲಾಗುತ್ತದೆ. ಹಲಾರಿ ತಳಿಯ ಕತ್ತೆ ಕ್ಯಾನ್ಸರ್ (Cancer), ಬೊಜ್ಜು (obesity), ಅಲರ್ಜಿ (Allergic diseases)  ಮುಂತಾದ ಕಾಯಿಲೆಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ.