ನಾವು-ನೀವೆಲ್ಲ ಡೀಸೆಲ್ ಟ್ರ್ಯಾಕ್ಟರ್ ಅನ್ನ ನೋಡಿದ್ದೇವೆ, ಹಾಗೂ ಇತ್ತೀಚೆಗೆ ಎಲೆಕ್ಟ್ರಿಕ್ ಯುಗದಲ್ಲಿ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಅನ್ನು ಕೂಡ ನಾವು ನೋಡಿದ್ದೇವೆ, ಆದರೆ ಇದೀಗ ಅವೆಲ್ಲವನ್ನು ಮೀರಿ ಮಾರುಕಟ್ಟೆಯಲ್ಲಿ ಸಿಎನ್ ಜಿ ಟ್ರ್ಯಾಕ್ಟರ್ ಗಳು ಬರುತ್ತಿವೆ. ಅದು ಎಲ್ಲಿ ಅಂತ ಯೋಚನೆ ಮಾಡುತ್ತಿದ್ದೀರಾ ಅದು ಬೇರೆಲ್ಲೂ ಇಲ್ಲ ನಮ್ಮ ದೇಶದಲ್ಲಿ ಅದು ಕೂಡ ನಮ್ಮ ಕರ್ನಾಟಕ ರಾಜ್ಯದಲ್ಲಿ ಎನ್ನುವುದು ವಿಶೇಷ.
ನಮ್ಮ ಭಾರತ ದೇಶದ ಪ್ರಪ್ರಥಮ ಸಂಕುಚಿತ ನೈಸರ್ಗಿಕ ಅನಿಲ ಟ್ರ್ಯಾಕ್ಟರ್ ಅನ್ನು ಕೇಂದ್ರದ ಸಾರಿಗೆ ಸಚಿವರಾದಂತಹ ನಿತಿನ್ ಗಡ್ಕರಿ ಅವರು ಅನಾವರಣಗೊಳಿಸಿದರು.ಇಲ್ಲಿ ಡೀಸೆಲ್ ವಾಹನಗಳನ್ನು ಸಿಎನ್ ಜಿ ವಾಹನಗಳನ್ನಾಗಿ ಪರಿವರ್ತಿಸುವ ಅಂತಹ ಪ್ರಯತ್ನ ನಡೆಯುತ್ತಿದೆ. ಹಾಗೂ ಈ ಪ್ರಯತ್ನದಲ್ಲಿ ಕರ್ನಾಟಕದ ಮುರುಗೇಶ್ ನಿರಾಣಿ ನೇತೃತ್ವದ ಎಂ ಆರ್ ಎನ್ ಮೋಟರ್ಸ್ ಸಮೂಹ ಸಂಸ್ಥೆ ಯಶಸ್ಸು ಸಾಧಿಸಿದೆ.
ಎಂ ಆರ್ ಎನ್ ಮೋಟಾರ್ಸ್ ಸಮೂಹ ಸಂಸ್ಥೆ ಯೋಜನೆಗಾಗಿ ರಾಮ್ಯಾಟ್ ಇಂಡಸ್ಟ್ರಿ ಸ್ ಲಿಮಿಟೆಡ್ನೊಂದಿಗೆ ಒಪ್ಪಿಗೆ ಮಾಡಿಕೊಂಡಿದೆ. ಎಂ ಆರ್ ಎನ್ ಸಂಘ ಸಮೂಹ ಸಂಸ್ಥೆಯ ಬಾಗವಾಗಿರುವ ಲಿಫಿನಿಟಿ ಬಯೋ ಎನರ್ಜಿ ಮೊದಲ ಹಂತದಲ್ಲಿ 500 ಡೀಸೆಲ್ ಟ್ರ್ಯಾಕ್ಟರಗಳನ್ನು ಸಿ ಎನ್ ಜಿ ಟ್ರ್ಯಾಕ್ಟರ್ ಗಳನ್ನಾಗಿ ಪರಿವರ್ಥಿಸುವ ಗುರಿಯನ್ನು ಹೊಂದಿದೆ.ವಿಶೇಷವೆಂದರೆ ಈ ಯೋಜನೆಯನ್ನು ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ ಶೀಘ್ರದಲ್ಲೇ ಸ್ಥಾಪಿಸಲು ತೀರ್ಮಾನಿಸಿದೆ.