News

ಮಾಸ್ಕ್ ಹಾಕದಿದ್ದರೆ 1 ಸಾವಿರ ರೂಪಾಯಿ ದಂಡ

01 October, 2020 8:20 AM IST By:

ಹೆಲ್ಮೆಟ್ ಧರಿಸದಿದ್ದರೆ, ವಾಹನದ ಲೈಸನ್ಸ್ ಇಲ್ಲದಿದ್ದರೆ ದಂಡ ಕಟ್ಟಿದ್ದಾಯಿತು.  ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನೀಲ್ಲಿಸಿದಾಗಲೂ ದಂಡ ಪಾವತಿಸಿದ್ದೀರಿ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದಾಗಲೂ ದಂಡ ಕಟ್ಟೀದೀರೆ. ಈಗ ಮಾಸ್ಕ್ ಧರಿಸದಿದ್ದರೆ ದಂಡ ಕಟ್ಟುವ ಸರದಿ. ದಿನದಿಂದ ದಿನಕ್ಕೆ ಕೊರೋನಾ ಹೆಚ್ಚಾಗುತ್ತಿದ್ದರಿಂದ ಸರ್ಕಾರ ಎಚ್ಚೆತ್ತು ಈ ನಿರ್ಧಾರ ತೆಗೆದುಕೊಂಡಿದೆ.

ಸಾರ್ವಜನಿಕ ಸ್ಥಳಗಳಲ್ಲಿ ‘ಮಾಸ್ಕ್‌ ಧರಿಸದವರಿಗೆ ದಂಡ ಪ್ರಮಾಣವನ್ನು ನಗರ ಪ್ರದೇಶದಲ್ಲಿ  1,000 ಹಾಗೂ ಗ್ರಾಮೀಣ ಪ್ರದೇಶದಲ್ಲಿ  500ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಉನ್ನತಮಟ್ಟದ ಸಭೆಯ ಬಳಿಕ ಮಾತನಾಡಿದ ಅವರು,  ಮಾಸ್ಕ್ ಧರಿಸದೆ ನಿರ್ಲಕ್ಷ ತೋರುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ದಂಡ ಪ್ರಮಾಣ ಹೆಚ್ಚಿಸಲಾಗಿದೆ. ಹಿರಿಯ ಅಧಿಕಾರಿಗಳ ಶಿಫಾರಸಿನ‌ ಮೇರೆಗೆ ಈ ನಿರ್ಧಾರ ಕೈಗೊಂಡಿದ್ದು, ಮುಖ್ಯಮಂತ್ರಿ ಜತೆ ಚರ್ಚಿಸಿ ಗುರುವಾರ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದರು.

ಪೂರ್ತಿ ಮಾಸ್ಕ್ ಧರಿಸದವರಿಗೂ ದಂಡ ವಿಧಿಸಲಾಗುವುದು. ಆಯಾ ಪೊಲೀಸ್‌ ಠಾಣಾ ವ್ಯಾಪ್ತಿಗೆ ಗುರಿ ನಿಗದಿ ಮಾಡಲಾಗುವುದು. ಕೊರೊನಾ ಜಾಗೃತಿ ವಿಶೇಷ ಕಾರ್ಯಯೋಜನೆ ರಚಿಸಲಾಗಿದೆ. ರಾಜಕಾರಣಿಗಳು, ಕ್ರೀಡಾ, ಸಿನಿಮಾ ತಾರೆ ಯರ ಮೂಲಕ ಮಾಸ್ಕ್‌ ಧರಿಸುವ ಬಗ್ಗೆ, ಕೊರೊನಾ ನಿಯಂತ್ರಣ ಕುರಿತು ವಿಡಿಯೊ ತುಣುಕು ಮಾಡಿ ಪ್ರಚಾರಕ್ಕೆ ಬಳಸಲಾಗುವುದು’ ಎಂದರು.

ಮಾಸ್ಕ್ ಇಲ್ಲದೆ ಪ್ರವೇಶವಿಲ್ಲ:

ಸರ್ಕಾರಿ ಖಾಸಗಿ ಸಂಸ್ಥೆಗಳಲ್ಲಿ ಕೆಲಸದ ಮೇಳೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಸರ್ಕಾರಿ ಕಚೇರಿ ಸಿಬ್ಬಂದಿಗೆ ಮಾಸ್ಕ್ ಇಲ್ಲದೆ ಪ್ರವೇಶ ಇರುವುದಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ 5 ಕ್ಕೂ ಹೆಚ್ಚು ಜನ ಗುಂಪುಗೂಡುವಂತಿಲ್ಲ. ಸಾರ್ವಜನಿಕ, ಧಾರ್ಮಿಕ, ರಾಜಕೀಯ ಕಾರ್ಯಕ್ರಮ, ಸಾಂಸ್ಕೃತಿಕ ಸಮಾವೇಶ ಸೇರಿ ಯಾವುದೇ ಕಾರ್ಯಕ್ರಮದಲ್ಲಿ 50 ಜನರಿಗಿಂತ ಹೆಚ್ಚು ಜನರು ,ಸೇರಿದಂತೆ ಅಂತಹ ಆಯೋಜಕರು ಮತ್ತು ಆ ಸಂಸ್ಥೆ ಮಾಲಿಕರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಸಾರಿಗೆ ಸೌಲಭ್ಯದಲ್ಲಿ ಶೇ. 50 ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.