News

ನಿರಂತರವಾಗಿ ಹೆಚ್ಚುತ್ತಿರುವ ರಸಗೊಬ್ಬರ ಖರೀದಿ ವಹಿವಾಟು

05 June, 2020 5:06 PM IST By:

ಕೊರೋನಾ ವೈರಸ್‌ ತಡೆತಯಲು ಹೇರಲಾದ ಲಾಕ್ ಡೌನ್ ನಡುವೆಯೂ ಕಳೆದ ಬಾರಿಗಿಂತ ಈ ವರ್ಷ ರಸಗೊಬ್ಬರ ಮಾರಾಟದಲ್ಲಿ ಹೆಚ್ಚಳವಾಗಿದೆ. ಲಾಕ್‌ಡೌನ್‌ನಿಂದ ವ್ಯಾಪಾರ ವ್ಯವಹಾರ ತಳಕಚ್ಚಿದೆ.  ಕಳೆದ ಬಾರಿಗಿಂತ ಈ ವರ್ಷ ಗಣನೀಯವಾಗಿ ರಸಗೊಬ್ಬರ ಖರೀದಿ ವಹಿವಾಟು ಅಧಿಕ ನಡೆದಿದೆ.

ಇದರಿಂದಾಗಿ ಕಡೆಗೂ ಕೃಷಿ ವಲಯ ನಸುನಕ್ಕಿದೆ. ಮೇನಲ್ಲಿ ದೇಶಾದ್ಯಂತ ರಸಗೊಬ್ಬರ ಮಾರಾಟ ಪ್ರಮಾಣ ಶೇ.98ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ಮೇಗೆ ಹೋಲಿಸಿದರೆ ಮಾರಾಟ ಪ್ರಮಾಣ ದುಪ್ಪಟ್ಟಾಗಿದೆ. ಅಷ್ಟೇ ಅಲ್ಲ, ನಿರಂತರ ಏಳನೇ ತಿಂಗಳು ರಸಗೊಬ್ಬರ ಮಾರಾಟ ಎರಡಂಕಿ (ಟನ್‌ ಲೆಕ್ಕ) ಬೆಳವಣಿಗೆ ದಾಖಲಿಸಿದೆ. ಇದರೊಂದಿಗೆ ಕೃಷಿ ಕ್ಷೇತ್ರದ ಪ್ರಗತಿ ಕೂಡ ಉತ್ತಮವಾಗಿದೆ  ಎಂದು ರಸಗೊಬ್ಬರ ಇಲಾಖೆ ಹೇಳಿದೆ.

ಬೇಡಿಕೆ ಹೆಚ್ಚಲು ಕಾರಣವೇನು?

ಚಳಿಗಾಲದ ಬೆಳೆ ಅವಧಿಯಿಂದಲೂ ರಸಗೊಬ್ಬರಕ್ಕೆ ಭಾರೀ ಬೇಡಿಕೆಯಿದೆ. ಇದಕ್ಕೆ ಕಾರಣ ಕಳೆದ ವರ್ಷ ಉತ್ತಮ ಮುಂಗಾರು ಮಳೆಯಾಗಿತ್ತು. ದೇಶದ ಬಹುತೇಕ ಎಲ್ಲಾ ಕಡೆ ಉತ್ತಮ ಮಳೆಯಾಗಿದ್ದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿತ್ತು.. ಕೆರೆ-ಕಟ್ಟೆ, ಬಾವಿ, ಅಣೆಕಟ್ಟೆಗಳೂ ತುಂಬಿದ್ದವು. ಪರಿಣಾಮ ಕೃಷಿಕರು ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ, ನಾಟಿ ಮಾಡಿದ್ದಾರೆ. ಬಿತ್ತನೆ ಹೆಚ್ಚಿದ್ದರಿಂದ ಸಹಜವಾಗೇ ರಸಗೊಬ್ಬರಕ್ಕೂ ಬೇಡಿಕೆ ಹೆಚ್ಚಿದೆ. ಪ್ರಸಕ್ತ ಮುಂಗಾರುವಿನಲ್ಲಿಯೂ ಉತ್ತಮ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ. ಅದರಂತೆ ಈಗಾಗಲೇ ಮುಂಗಾರು ಕೇರಳ ಪ್ರವೇಶಿಸಿದೆ.

ಪ್ರತಿವರ್ಷ ಮಮೇ ತಿಂಗಳಲ್ಲಿ ಮಾರಾಟವಾದ ರಸಗೊಬ್ಬರ:

  1. 40.02 ಲಕ್ಷ ಟನ್‌2020ರ ಮೇನಲ್ಲಿ ಮಾರಾಟವಾದ ರಸಗೊಬ್ಬರ.

  2. 20.24 ಲಕ್ಷ ಟನ್‌ 2019ರ ಮೇನಲ್ಲಿ ಮಾರಾಟವಾದ ರಸಗೊಬ್ಬರ.

  3. 20.24 ಲಕ್ಷ ಟನ್‌2019ರ ಮೇನಲ್ಲಿ ಮಾರಾಟವಾದ ರಸಗೊಬ್ಬರ.

  4. 22.61 ಲಕ್ಷ ಟನ್‌ 2018ರ ಮೇನಲ್ಲಿ ಮಾರಾಟವಾದ ರಸಗೊಬ್ಬರ.