News

ಮುಂದೂಡಿದ್ದ ಎಫ್.ಡಿ.ಎ ಪರೀಕ್ಷೆ ಫೆಬ್ರವರಿ 28 ರಂದು

03 February, 2021 8:38 AM IST By:
exam

ಪ್ರಶ್ನೆ ಪತ್ರಿಕೆ ಸೋರಿಕೆಗೊಂಡ ಕಾರಣದಿಂದ ಕರ್ನಾಟಕ ಲೋಕಸೇವಾ ಆಯೋಗದ  ಹುದ್ದೆಗಳ ನೇಮಕಾತಿಯ ಸ್ಮರ್ಧಾತ್ಮಕ ಪರೀಕ್ಷೆಯನ್ನು ತಡೆಹಿಡಿಯಲಾಗಿತ್ತು. ಇದೀಗ ಪರೀಕ್ಷಾ ದಿನಾಂಕವನ್ನು ಕೆಪಿಎಸ್ಸಿ ಪ್ರಕಟಿಸಿದೆ . ದಿನಾಂಕ 28-02 2021 ರಂದು ನಡೆಸುವುದಾಗಿ ಕರ್ನಾಟಕ ಲೋಕಸೇವಾ ಆಯೋಗ ಅಧೀಸೂಚನೆ ಹೊರಡಿಸಿದೆ.

ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಜಿ.ಸತ್ಯವತಿ ಸ್ಪಷ್ಟನೆ ನೀಡಿದ್ದು. ಕರ್ನಾಟಕ ಲೋಕಸೇವಾ ಆಯೋಗದ ಸಹಾಯಕ/ ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಿನಾಂಕ 24-01-2021 ರಂದು ನಡೆಯಬೇಕಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮುಂದೂಡಲಾಗಿದೆ

ಮುಂದೂಡಲಾದ FDA  ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ದಿನಾಂಕ 28-02-2021ರಂದು ನಡೆಸಲಾಗುವುದು ಎಂದು ಆಯೋಗವು ತೀರ್ಮಾನಿಸಿದೆ.