ಡಾಕ್ಟರ್ ವರ್ಗೀಸ್ ಕುರಿಯನ್ ಅವರು ಭಾರತದಲ್ಲಿ ಶ್ವೇತ ಕ್ರಾಂತಿಯ ಪಿತಾಮಹ ಎಂದೇ ಕರೆಯಲ್ಪಡುತ್ತಾರೆ, , ಇವರ ಬಿಲಿಯನ್ ಲೀಟರ್ ಐಡಿಯಾ, ಆಪರೇಷನ್ ಫ್ಲಡ್ ಭಾರತದಲ್ಲಿ ಅನೇಕ ಯುವಕರಿಗೆ ಉದ್ಯೋಗದ ಕೊರತೆಯನ್ನು ನೀಗಿಸಿದ್ದು, ಹಾಗೂ ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆಯ ಹುಚ್ಚನ್ನು ಜನರಲ್ಲಿ ಹೆಚ್ಚಿಸಿದೆ.
ಡಾಕ್ಟರ್ ವರ್ಗೀಸ್ ಕುರಿಯನ್ ಅವರು ನವಂಬರ್ 26 1921 ರಂದು ಕೊಜ್ಹಿಕೋಡ ಕೇರಳದಲ್ಲಿ ಜನಿಸಿದರು. ಇವರ ಬಿಲಿಯನ್ ಲೀಟರ್ ಐಡಿಯಾ ಹಾಗೂ ಆಪರೇಷನ್ ಫ್ಲಡ್ ಗ್ರಾಮೀಣ ಪ್ರದೇಶದ ಜನರ ಆದಾಯವನ್ನು ಹೆಚ್ಚಿಸಿತು, ಪ್ರತಿಯೊಬ್ಬರಿಗೂ ಲಭ್ಯವಿರುವ ಹಾಲನ್ನು ದ್ವಿಗುಣಗೊಳಿಸಿದೆ, ಹಾಗೂ 30 ವರ್ಷಗಳಲ್ಲಿ ಹಾಲಿನ ಉತ್ಪಾದನೆಯನ್ನು ನಾಲ್ಕು ಪಟ್ಟು ಹೆಚ್ಚಿಸಿದ್ದು ಇವರ ಅತ್ಯಂತ ದೊಡ್ಡ ಸಾಧನೆ.
ಇವರು ಒಬ್ಬ ಮಹಾ ಸಾಧಕರು ಮಾತ್ರವಲ್ಲ ಅದೇ ರೀತಿ ಒಬ್ಬ ಅಪ್ಪಟ ದೇಶಭಕ್ತ, ಇವರ ಸಾಧನೆ ಇಂದಿನ ಯುವಕರಿಗೆ ಸ್ಪೂರ್ತಿಯಾಗಲಿ ಎಂಬುದೇ ನಮ್ಮ ಆಶಯ.
ಅವರು ತಮ್ಮ ಇಂಜಿನಿಯರಿಂಗ್ ಪದವಿಯನ್ನು ಪಡೆದು TATA STEEL ನಲ್ಲಿ ಕೆಲಸ ಮಾಡುತಿದ್ದರು, ಮುಂದೆ ಅಮೇರಿಕಾದಲ್ಲಿ ಉನ್ನತ ಪದವಿ ಪಡೆದು ಒಳ್ಳೆಯ ಹುದ್ದೆಯಲ್ಲಿದ್ದರು, ಮುಂದೆ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಗುಜರಾತಿನ ಕೈರಾ ಜಿಲ್ಲಾ ಸಹಕಾರಿ ಡೈರಿಗೆ ಸೇರಿದರು. ಪೈಪೋಟಿ ನೀಡಲು ಪ್ರಾರಂಭಿಸಿದರು, ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಹಾಲಿನ ಉತ್ಪಾದನೆ ಹಾಗೂ ಗುಣಮಟ್ಟವನ್ನು ಹೆಚ್ಚಿಸಿದರು.ಮುಂದೆ ಇವರು ಭಾರತದಲ್ಲಿ ಹಾಲು ಹೆಚ್ಚಿಗೆ ಆದಾಗ ಅದನ್ನು ಖರೀದಿಸಲು ಯಾವುದೇ ಖರೀದಿಗಾರರು ಇಲ್ಲದಿದ್ದಾಗ ನನಗೆ ಏನು ಮಾಡಬೇಕು ಎಂದು ಅದರ ಮೇಲೆ ಸಂಶೋಧನೆಯನ್ನು ಮಾಡಿ ಹಾಲಿನ ಉತ್ಪನ್ನಗಳಾದ ಹಾಲಿನ ಕೆನೆಯ ಪುಡಿ, ಮೊಸರು, ತುಪ್ಪ, ಹಾಗೂ ಇನ್ನಿತರ ಹಾಲಿನ ಉತ್ಪನ್ನಗಳನ್ನು ತಯಾರಿಸಿದರು, ಹೀಗೆ ಅವರ ನಿರಂತರ ಸಾಧನೆಯಿಂದ ಇಂದು ನಾವು ನೀವೆಲ್ಲ ಬಳಸುವ AMUL-THE TASTE OF INDIA ಎಂಬ ಸಾಮ್ರಾಜ್ಯವನ್ನು ಕಟ್ಟಿದರು. ಇದು ಭಾರತದ ಅತಿ ದೊಡ್ಡ ಉದ್ಯಮ ಹಾಗೂ ಯಶಸ್ವಿ ಉದ್ಯಮವಾಗಿತು, ಇದು ಲಾಲ್ ಬದುರ್ ಶಾಸ್ತ್ರಿಯ ಅವರನ್ನು ರಾಷ್ಟ್ರೀಯ ಡೈರಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಪ್ರೇರೇಪಿಸಿತು, ಹಾಗೂ ವರ್ಗೀಸ್ ಕುರಿಯನ್ ಅವರನ್ನು ಇದರ ಅಧ್ಯಕ್ಷರನ್ನಾಗಿ ನೇಮಿಸಲಾಯಿತು ಇವರ ಸಾಧನೆ ಇವರ ಯಶಸ್ಸನ್ನು ಕಂಡು ಜಗತ್ತೇ ಇವರನ್ನು ಮಿಲ್ಕ್ ಮ್ಯಾನ್ ಆಫ್ ಇಂಡಿಯಾ ಎಂದು ಕರೆಯಲು ಪ್ರಾರಂಭಿಸಿತು.
ಇವರು ನಿರ್ವಹಿಸಿದ ಹುದ್ದೆಗಳು ಯಾವುವೆಂದರೆ ಜನರಲ್ ಮ್ಯಾನೇಜರ್ ಮತ್ತು ನಂತರದ ಅಧ್ಯಕ್ಷರು AMUL,ಅಧ್ಯಕ್ಷರು - ಎನ್‌ಡಿಡಿಬಿ (ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ) ಮತ್ತು ಐಆರ್‌ಎಂಎ (ಇನ್ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್‌ಮೆಂಟ್, ಆನಂದ್, ಬಾಂಬೆ ಪ್ರಾಂತ್ಯ.
ಅವರು ತಮ್ಮ ಜೀವನದುದ್ದಕ್ಕೂ ಹಲವಾರು ಪ್ರಶಸ್ತಿಗಳನ್ನು ಪಡೆದರು ಅವರು ಪಡೆದ ಪ್ರಶಸ್ತಿಗಳು ಯಾವುದೆಂದರೆ
ವಿಶ್ವ ಆಹಾರ ಪ್ರಶಸ್ತಿ (1989)
ಆರ್ಡರ್ ಆಫ್ ಅಗ್ರಿಕಲ್ಚರಲ್ ಮೆರಿಟ್ (1997)
ಪದ್ಮವಿಭೂಷಣ್ (1999)
ಪದ್ಮಭೂಷಣ್ (1966)
ಪದ್ಮಶ್ರೀ (1965)
ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ (1964)
ಕುರಿಯನ್ ಅನಾರೋಗ್ಯದಿಂದ 9 ಸೆಪ್ಟೆಂಬರ್ 2012 ರಂದು ಆನಂದ್ ಬಳಿಯ ನಾಡಿಯಾದ್ ಆಸ್ಪತ್ರೆಯಲ್ಲಿ [54] [55] ನಿಧನರಾದರು .
ಇಂದು ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗವನ್ನು ತಡೆಗಟ್ಟುವಲ್ಲಿ ಹೈನುಗಾರಿಕೆ ಕೊಂಚ ಮಟ್ಟಿಗೆ ಯಶಸ್ವಿಯಾಗಿದೆ ಎಂದು ಹೇಳಬಹುದು, ಆದರೆ ಇಂದು ಸರ್ಕಾರ ನೀಡುತ್ತಿರುವ ಹಲವಾರು ಹೈನುಗಾರಿಕೆ ಹಾಗೂ ಇತರ ಯೋಜನೆಗಳಿಂದ ಜನರು ಹೈನುಗಾರಿಕೆಯತ್ತ ಮುಖ ಮಾಡುತ್ತಿದ್ದಾರೆ. ಹೀಗೆ ವರ್ಗೀಸ್ ಕುರಿಯನ್ ಅವರ ಸಾಧನೆ ಇಂದು ಎಷ್ಟು ಗ್ರಾಮೀಣ ಜನರ ಪಾಲಿಗೆ ವರದಾನವಾಗಿದೆ.
ಲೇಖಕರು: ಚಿನ್ನಪ್ಪ ಎಸ್. ಅಂಗಡಿ