UP farmers dress up as bear: ಕೃಷಿ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ತಜ್ಞರಿಂದಲೂ ಪರಿಹಾರ ನೀಡಲು ವಿಫಲವಾದಾಗ, ಖುದ್ದು ರೈತರೇ ವಿಜ್ಞಾನಿಗಳಾಗಿ ತಮ್ಮ ಸಮಸ್ಯೆಗೆ ದಾರಿ ಕಂಡುಕೊಂಡ ಉದಾಹರಣೆ ಸಾಕಷ್ಟಿವೆ. ಇಂತಹುದೇ ಇನ್ನೊಂದು ಘಟನೆ ಇಲ್ಲಿದೆ. ಈ ರೈತರ ಐಡಿಯಾ ಹೇಗಿದೆ ನೋಡಿ.
ಕೃಷಿ ಕ್ಷೇತ್ರವು ಸದಾ ಪ್ರಕೃತಿಯೊಂದಿಗೆ ಸೆಣಸುತ್ತ ಹೋರಾಡುವ ಪ್ರಕ್ರಿಯೆಯಾಗಿದೆ. ಹೀಗೆ ಸವಾಲುಗಳೊಂದಿಗೆ ನಿರಂತರ ಹೋರಾಟ ಮಾಡುವ ಸಾಮರ್ಥ್ಯ ರೈತರಿಗಲ್ಲದೇ ಇನ್ಯಾರಿಗೂ ಸಾಧ್ಯವಿಲ್ಲ.
ಉದಾಹರಣೆಗೆ ಗಮನಿಸುವುದಾದರೆ ಕಡಿಮೆ ಮಳೆಯಾದರೆ ತೊಂದರೆ, ಹೆಚ್ಚು ಮಳೆಯಾದರೆ ತೊಂದರೆ, ಪ್ರವಾಹ, ಬರಗಾಲ, ಸುನಾಮಿ-ಸುಂಟರಗಾಳಿ, ತೀವೃ ಬಿಸಿಲು, ಹೆಚ್ಚಿದ ಧಗೆ, ಸೈಕ್ಲೋನ್‌ಗಳ ಪರಿಣಾಮ, ಕಳಪೆ ಬೀಜಗಳ ಹಾವಳಿ, ನಕಲಿ ರಸಗೊಬ್ಬರಗಳ ಮೋಸ ಎದುರಿಸುತ್ತಲೆ ಇರುತ್ತಾರೆ.
ಇನ್ನೂ ಹೆಚ್ಚಿದ ಬೆಲೆಗಳು, ಕೃಷಿ ಕೂಲಿ ಕಾರ್ಮಿಕರ ಕೊರತೆ, ರೋಗ ರುಜಿನಗಳ ಬಾಧೆ, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದೇ ಇರುವುದು, ದಲ್ಲಾಳಿಗಳ ಹಾವಳಿ ಇನ್ನೂ ಸಾಕಷ್ಟು ಸವಾಲುಗಳನ್ನ ರೈತರು ದಿನ ನಿತ್ಯ ಎದುರಿಸುತ್ತಲೇ ಇರುತ್ತಾರೆ.
ಹೀಗಿದ್ದು ಅವರೆಂದು ಇವುಗಳಿಗೆ ಹೆದರಿ ಎದೆಗುಂದಿಲ್ಲ. ಅದೆಷ್ಟೆ ಕಷ್ಟಗಳು ಬಂದರೂ ಕೂಡ ಗಟ್ಟಿಯಾಗಿ ಭೂಮಿತಾಯಿಯನ್ನ ನಂಬಿ ದುಡಿಯುತ್ತಾರೆ. ಇದಕ್ಕೆ ಅಲ್ಲವೇ ರೈತ ದೇಶದ ಬೆನ್ನೆಲುಬು, ರೈತ ಅನ್ನ ನೀಡುವ ದೇವರು ಎಂದೆಲ್ಲ ಹೇಳುವುದು.
ಅದೆ ರೀತಿ ಇಲ್ಲೊಬ್ಬ ರೈತರು ತಮ್ಮ ಜಮೀನಿನಲ್ಲಿ ಹೆಚ್ಚಾದ ಮಂಗಗಳ ಹಾವಳಿಯನ್ನು ತಡೆಗಟ್ಟಲು ಕರಡಿಯ ವೇಷ ತೊಟ್ಟು ತಮ್ಮ ಕಬ್ಬಿನ ಬೆಳೆಯನ್ನು ಸಂರಕ್ಷಣೆ ಮಾಡಿಕೊಂಡಿದ್ದಾರೆ.
ಇದೀಗ ಇವರ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಅಲ್ಲದೇ ಸಾಕಷ್ಟು ಜನ ಇವರ ಉಪಾಯವನ್ನು ಮೆಚ್ಚಿಕೊಂಡಿದ್ದಲ್ಲದೇ ಮಸ್ತ್ ಐಡಿಯಾ ಎನ್ನುತ್ತಿದೆ.
ಉತ್ತರ ಪ್ರದೇಶದ ಲಖಿಂಪುರ ಖೇರಿಯ ಜಹಾನ್ ನಗರ ಗ್ರಾಮದ ರೈತ ಮಂಗಗಳು ತಮ್ಮ ಕಬ್ಬಿನ ಬೆಳೆಗೆ ಹಾನಿಯಾಗದಂತೆ ತಡೆಯಲು ಕರಡಿ ವೇಷಭೂಷಣವನ್ನು ತೊಟ್ಟು ದಿನನಿತ್ಯ ಹೊಲದಲ್ಲಿ ಕಾವಲು ಕಾಯುತ್ತಿದ್ದಾರೆ.
40-45 ಮಂಗಗಳು ಈ ಭಾಗದಲ್ಲಿ ಸಂಚರಿಸಿ ಬೆಳೆ ಹಾನಿ ಮಾಡುತ್ತಿದ್ದವು ಎಂದು ಅವರು ತಿಳಿಸಿದ್ದಾರೆ. ಅಧಿಕಾರಿಗಳಿಗೆ ಮನವಿ ಮಾಡಿದರೂ ಇದರ ಕುರಿತಾಗಿ ಗಮನಹರಿಸಿಲ್ಲ.
ಹೀಗಾಗಿ ರೈತರು ತಾವು ತಾವೇ ಸೇರಿಕೊಂಡು ಹಣ ನೀಡಿ 4,000 ರೂಪಾಯಿಗೆ ಕರಡಿಯ ವೇಷಭೂಷಣವನ್ನು ಖರೀದಿಸಿದ್ದಾರೆ. ಅಲ್ಲದೆ ಅದನ್ನು ತೊಟ್ಟುಕೊಂಡು ಬೆಳೆಗಳನ್ನು ರಕ್ಷಿಸಿಕೊಂಡಿದ್ದಾರೆ.