News

ಬೆಳೆ ದರ್ಶಕ ಆ್ಯಪ್ ಮೂಲಕ ನ. 16 ರೊಳಗೆ ಬೆಳೆ ಸಮೀಕ್ಷೆ ಆಕ್ಷೇಪಣೆ ಸಲ್ಲಿಸಿ

13 November, 2020 9:40 AM IST By:

ಪ್ರಸಕ್ತ 2020-21 ನೇ ಮುಂಗಾರು ಹಂಗಾಮು ಬೆಳೆ ಸಮೀಕ್ಷೆ ಪೂರ್ಣಗೊಂಡಿದ್ದು, ರೈತರು ತಮ್ಮ ಜಮೀನುಗಳಲ್ಲಿ ನಮೂದಾಗಿರುವ ಬೆಳೆಗಳ ಕುರಿತು ಬೆಳೆ ದರ್ಶಕ  ಆ್ಯಪ್ ಪರಿಶೀಲಿಸಿ ಆಕ್ಷೇಪಣೆಗಳಿದ್ದಲ್ಲಿ ದಾಖಲಿಸಲು 2020ರ ನವೆಂಬರ್ 16ರೊಳಗಾಗಿ ಅವಕಾಶ ಕಲ್ಪಿಸಲಾಗಿದೆ.

ರೈತರು ತಮ್ಮ ಸ್ಮಾರ್ಟ್ ಪೋನ್‍ನಲ್ಲಿ ಬೆಳೆ ದರ್ಶಕ-2020 ಆಪ್ ಡೌನ್‍ಲೋಡ್ ಮಾಡಿಕೊಂಡು ಬೆಳೆ ಮಾಹಿತಿ ಪರಿಶೀಲಿಸಿಕೊಳ್ಳಬೇಕು. ಈ ಸಮೀಕ್ಷೆಯಲ್ಲಿ ನಮೂದಾಗಿರುವ ಬೆಳೆಗಳ ಕುರಿತು ಆಕ್ಷೇಪಣೆಗಳಿದ್ದಲ್ಲಿ ಬೆಳೆ ದರ್ಶಕ್ ಆ್ಯಪ್ ನಲ್ಲಿ ಸಲ್ಲಿಸಬಹುದು. ಅವಧಿ ಮುಗಿದ ನಂತರ ಆಕ್ಷೇಪಣೆ ಸಲ್ಲಿಸಲು ಅವಕಾಶವಿರುವುದಿಲ್ಲ.

ಬೆಳೆ ಸಮೀಕ್ಷೆಯಲ್ಲಿ ಸಂಗ್ರಹಿಸಿರುವ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಬೆಳೆ ವಿಮೆ, ಬೆಳೆ ಪರಿಹಾರ, ಕನಿಷ್ಟ ಬೆಂಬಲ ಬೆಲೆ, ವಿಪತ್ತು ನಿರ್ವಹಣೆ ಮತ್ತು ಇತರೆ ಸರ್ಕಾರದ ಸಹಾಯಧನ ನೀಡುವ ಯೋಜನೆಗೆ ಬಳಸಿಕೊಳ್ಳಲಾಗುವುದರಿಂದ ರೈತರುಗಳು ತಮ್ಮ ಒಪ್ಪಿಗೆ ಪತ್ರದ ಜೊತೆಗೆ, ಆಧಾರ ಕಾಡ್ ವಿವರಗಳನ್ನು ಸಂಗ್ರಹಿಸುವುದು ಕಡ್ಡಾಯವಾಗಿದೆ.

 ರೈತರು ತಮ್ಮ ಆಧಾರ ಕಾರ್ಡ ಪ್ರತಿಯನ್ನು ಬೆಳೆ ಸಮೀಕ್ಷೆ ಕೈಗೊಂಡ ಗ್ರಾಮದ ಖಾಸಗಿ ನಿವಾಸಿ (ಪಿ ಆರ್ ಗೆ) 2020ರ ನವಂಬರ 16 ರೊಳಗಾಗಿ ಸಲ್ಲಿಸಬೇಕು. ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯಕ್ಕೆ ಸಂಪರ್ಕಿಸಲು ಕೋರಲಾಗಿದೆ.