News

ಶೀಘ್ರದಲ್ಲಿಯೇ ಕೃಷಿ ಸಂಜೀವಿನಿ ಯೋಜನೆ ಜಾರಿ

14 November, 2020 10:14 AM IST By:
ರಾಜ್ಯಮಟ್ಟದ ಅತ್ಯುತ್ತ ರೈತ ಮತ್ತು ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ ಪುರಸ್ಕೃತರಾದ ಎಚ್.ಡಿ.ದೇವೇಗೌಡ ಅತ್ಯುತ್ತಮ ರೈತ ಪ್ರಶಸ್ತಿಗೆ ಸಿ.ಎಂ.ನವೀನ್ ಕುಮಾರ್ (ಹಾಸನ), ಸಿ.ಬೈರೇಗೌಡ ಅತ್ಯುತ್ತಮ ರೈತ ಪ್ರಶಸ್ತಿಗೆ ಎಂ.ಎನ್.ರವಿಶಂಕರ್ (ಕೋಲಾರ), ಎಂ.ಎಚ್.ಮರಿಗೌಡ ಅತ್ಯುತ್ತಮ ತೋಟಗಾರಿಕಾ ಪ್ರಶಸ್ತಿಗೆ ಎಂ.ಆನಂದ್ (ಹೊಸಕೋಟೆ), ಆರ್.ದ್ವಾರಕೀನಾಥ್ ಅತ್ಯುತ್ತಮ ರೈತ ಪ್ರಶಸ್ತಿಗೆ ಕೆ.ಎಂ.ರಾಮಣ್ಣ (ಕೋಲಾರ), ಕೆನರಾ ಬ್ಯಾಂಕ್ ಅತ್ಯುತ್ತಮ ರೈತ ಪ್ರಶಸ್ತಿಗೆ ಎಚ್.ಕೆ.ಸುರೇಶ್ , ಆರ್.ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿಗೆ ಆಯ್ಕೆಯಾದ ಕೃಷಿ ವಿಶ್ವವಿದ್ಯಾಲಯದ ಕೆ.ಶಿವರಾಮು ರವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಬೆಂಗಳೂರಿನ ಹೆಬ್ಬಾಳದ ಜಿಕೆವಿಕೆಯಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಕೃಷಿ ಮೇಳ ಶುಕ್ರವಾರ ತೆರೆಬಿದ್ದಿತ್ತು.

ಪ್ರತಿವರ್ಷದಂತೆ ಲಕ್ಷಾಂತರ ಜನರಿಗೆ ಸಾಕ್ಷಿಯಾಗುತ್ತಿದ್ದ ರೈತರ ಸಂತೆ ಈ ವರ್ಷ ಕಾಣಲಿಲ್ಲ. ಕೊರೋನಾ ರೈತರ ಸಂತೆಗೆ ತಡೆಹಾಕಿತ್ತು. ಲಕ್ಷಾಂತರ ಸಂಖ್ಯೆಯಲ್ಲಿ ಸೇರುತ್ತಿದ್ದ ಕೃಷಿ ಮೇಳ ಕೇವಲ ಸಾವಿರಾರು ರೈತರು ಸೇರುವಂತೆ ಮಾಡಿತು. ಮೊದಲ ದಿನ ತಲಾ ಸುಮಾರು 1500 ಜನ ಭೇಟಿ ನೀಡಿದರೆ ಕೊನೆಯ ದಿನ ಈ ಸಂಖ್ಯೆ ದುಪ್ಪಟ್ಟಾಗಿತ್ತು.ಭೌತಿಕ ಮತ್ತು ಡಿಜಿಟಲ್ ಎರಡೂ ಅವಕಾಶ ಇತ್ತು. ಪ್ರದರ್ಶನ ಮತ್ತು ವಿಜ್ಞಾನಿಗಳೊಂದಿಗೆ ಮಾತ್ರ  ಸಂವಾದಕ್ಕೆ ಅವಕಾಶವಿತ್ತು.

ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದಕ್ಕಾಗಿ ಶೀಘ್ರವೇ ಕೃಷಿ ಸಂಜೀವಿನ ಹಾಗೂ ಗುರುತಿನ ಚೀಟಿ ವಿತರಣೆ ಯೋಜನೆಯನ್ನು ಸರ್ಕಾರ ಜಾರಿಗೆ ತರಲಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.

ಅವರು ಕೃಷಿ ಮೇಳದ ಮೂರನೇ ದಿನ ಸಮಾರೋಪ ಸಮಾರಂಭದಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನಿಸಿ ಮಾತನಾಡಿದರು.

ಯೋಜನೆಯಡಿ ಮಣ್ಣು ಪರೀಕ್ಷೆಗಾಗಿ 20 ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಯೋಗಾಲಯ ಹೊಂದಿರುವ 20ಕೃಷಿ ಸಂಜೀವಿನ ವಾಹನ ಇರಲಿದೆ. ವಾಹನದ ಮೇಲೆ ನೀಡಿರುವ ಸಂಖ್ಯೆಗೆ ರೈತರು ಕರೆ ಮಾಡಿದರೆ  ತಜ್ಞರು ಬಂದು ಮಣ್ಣು ಪರೀಕ್ಷೆ ಮಾಡಿ ಯಾವ ಕಾಲಕ್ಕೆ ಯಾವ ಬೆಳೆಗಳನ್ನು ಬೆಳೆಯಬೇಕು ಹಾಗೂ ಕೃಷಿ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಪರಿಹಾರ ನೀಡಲಿದ್ದಾರೆ. ಕೊಪ್ಪಳದಲ್ಲಿ ಈ ಯೋಜನೆ ಜಾರಿಗೆ ಬರಲಿದೆ ನಂತರ ಹಂತ ಹಂತವಾಗಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದರು.

ರಾಜ್ಯಮಟ್ಟದ ಅತ್ಯುತ್ತ ರೈತ ಮತ್ತು ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ ಪುರಸ್ಕೃತರಾದ ಎಚ್.ಡಿ.ದೇವೇಗೌಡ ಅತ್ಯುತ್ತಮ ರೈತ ಪ್ರಶಸ್ತಿಗೆ ಸಿ.ಎಂ.ನವೀನ್ ಕುಮಾರ್ (ಹಾಸನ), ಸಿ.ಬೈರೇಗೌಡ ಅತ್ಯುತ್ತಮ ರೈತ ಪ್ರಶಸ್ತಿಗೆ ಎಂ.ಎನ್.ರವಿಶಂಕರ್ (ಕೋಲಾರ), ಎಂ.ಎಚ್.ಮರಿಗೌಡ ಅತ್ಯುತ್ತಮ ತೋಟಗಾರಿಕಾ ಪ್ರಶಸ್ತಿಗೆ ಎಂ.ಆನಂದ್ (ಹೊಸಕೋಟೆ), ಆರ್.ದ್ವಾರಕೀನಾಥ್ ಅತ್ಯುತ್ತಮ ರೈತ ಪ್ರಶಸ್ತಿಗೆ ಕೆ.ಎಂ.ರಾಮಣ್ಣ (ಕೋಲಾರ), ಕೆನರಾ ಬ್ಯಾಂಕ್ ಅತ್ಯುತ್ತಮ ರೈತ ಪ್ರಶಸ್ತಿಗೆ ಎಚ್.ಕೆ.ಸುರೇಶ್ , ಆರ್.ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿಗೆ ಆಯ್ಕೆಯಾದ ಕೃಷಿ ವಿಶ್ವವಿದ್ಯಾಲಯದ ಕೆ.ಶಿವರಾಮು ರವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

 ಈ ಸಂದರ್ಭದಲ್ಲಿ ಸಚಿವ ನಾರಾಯಣಗೌಡ, ಕುಲಪತಿ ಡಾ. ಎಸ್. ರಾಜೇಂದ್ರಪ್ರಸಾದ್ ಇದ್ದರು.