ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ವಿರುದ್ಧ ಪ್ರತಿಭಟನೆ ನಡೆಸಲು ರೈತರು ಜಂತರ್ ಮಂತರ್ ಮಹಾಪಂಚಾಯತ್ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಭಾರೀ ಸಂಖ್ಯೆಯಲ್ಲಿ ರೈತರು ಜಂತ್ ಮಂತರ್‌ಗೆ ಆಗಮಿಸ್ದು, ದೆಹಲಿಯ ಪ್ರಮುಖ ಬಾಗಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ತಮ್ಮ ಉತ್ಪನ್ನಗಳಿಗೆ ಎಂಎಸ್‌ಪಿಯನ್ನು ಖಾತರಿಪಡಿಸುವ ಕಾನೂನು ಸೇರಿದಂತೆ ಬೇಡಿಕೆಗಳನ್ನು ಒತ್ತಾಯಿಸಲು ರಾಷ್ಟ್ರದಾದ್ಯಂತದ ರೈತರು 'ಮಹಾಪಂಚಾಯತ್' ನಲ್ಲಿ ಭಾಗವಹಿಸಲಿದ್ದಾರೆ. ಇನ್ನು ರಾಷ್ಟ್ರ ರಾಜಧಾನಿಯಲ್ಲಿ 'ಮಹಾಪಂಚಾಯತ್' ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳನ್ನು ತಪ್ಪಿಸಲು ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿಮ್ಮ ಅಕೌಂಟ್‌ನಲ್ಲಿ ಮಿನಿಮಮ್ ಬ್ಯಾಲೆನ್ಸ್ ಎಷ್ಟು ಇರಬೇಕು ತಿಳಿದುಕೊಳ್ಳಿ, ಇಲ್ಲದಿದ್ದರೆ ಬ್ಯಾಂಕ್ ದಂಡ ವಿಧಿಸುತ್ತದೆ
ಪ್ರತಿಭಟನೆಯ ಪರಿಣಾಮವಾಗಿ ದೆಹಲು ಗಡಿ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ಸಂಘಟಿಸಿದೆ ಮತ್ತು ಬ್ಯಾರಿಕೇಡ್‌ಗಳನ್ನು ಹಾಕಿದೆ. ರೈತರು ಹಿಂತಿರುಗುವಂತೆ ಮನವಿ ಮಾಡಿದ್ದೇವೆ ಎಂದು ಕಾನೂನು ಮತ್ತು ಸುವ್ಯವಸ್ಥೆಯ ವಿಶೇಷ ಪೊಲೀಸ್ ಆಯುಕ್ತ ದೇಪೇಂದ್ರ ಪಾಠಕ್ ಹೇಳಿದ್ದಾರೆ.
ಮಾಹಿತಿಯ ಪ್ರಕಾರ, ರೈತ ಮುಖಂಡ ರಾಕೇಶ್ ಟಿಕತ್ ಅವರು ಜಂತರ್ ಮಂತರ್ ಕಡೆಗೆ ಬರುತ್ತಿದ್ದಾಗ ಗಾಜಿಪುರ ಗಡಿಯಲ್ಲಿ ಪೊಲೀಸ್ ಅಧಿಕಾರಿಗಳು ಹಿಂತಿರುಗುವಂತೆ ಮನವಿ ಮಾಡಿದರು . ಅದಕ್ಕೆ ಅವರು ಒಪ್ಪದಿದ್ದಾಗ ಅವರನ್ನು ವಶಕ್ಕೆ ಪಡೆದು ಮಧು ವಿಹಾರ್ ಠಾಣೆಗೆ ಕರೆದೊಯ್ಯಲಾಯಿತು.
ಕೋಪಗೊಂಡ ಟಿಕಾಯತ್ ಅವರು ಕೇಂದ್ರವನ್ನು ಟೀಕಿಸಿದರು, "ಸರ್ಕಾರವು ದೆಹಲಿ ಪೊಲೀಸರ ಸಹಾಯದಿಂದ ರೈತರ ಧ್ವನಿಯನ್ನು ಮೌನಗೊಳಿಸಲು ಸಾಧ್ಯವಿಲ್ಲ. ಈ ಬಂಧನದಿಂದ ಅದು ಹೊಸ ಕ್ರಾಂತಿಯನ್ನು ಪ್ರಾರಂಭಿಸುತ್ತದೆ. ಕೊನೆಯ ಉಸಿರು ಇರುವವರೆಗೂ ಹೋರಾಟ ಮುಂದುವರಿಯುತ್ತದೆ ಎಂದು ಗುಡುಗಿದ್ದಾರೆ.
LIC ನೇಮಕಾತಿ: 80 ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ..80 ಸಾವಿರ ಸಂಬಳ
ಕೇಂದ್ರವು ದೇಶದ ನಿರುದ್ಯೋಗಿಗಳು, ಯುವಕರು, ರೈತರು ಮತ್ತು ಕಾರ್ಮಿಕರ ಮೇಲೆ ದಬ್ಬಾಳಿಕೆ ಮಾಡುತ್ತಿದೆ ಎಂದು ಆರೋಪಿಸಿದರು. "ಮೋದಿ ಸರಕಾರವು ನಿರುದ್ಯೋಗಿಗಳು, ಯುವಕರು, ರೈತರು ಮತ್ತು ಕಾರ್ಮಿಕರ ನೆರವಿಗೆ ಧಾವಿಸಿಲ್ಲ. ಈ ಹಕ್ಕುಗಳ ಹೋರಾಟದಲ್ಲಿ ಸುದೀರ್ಘ ಹೋರಾಟಕ್ಕೆ ಸಿದ್ಧರಾಗಿರಿ. ಕೇಂದ್ರದ ಆದೇಶದ ಮೇರೆಗೆ ದೆಹಲಿ ಪೊಲೀಸರು (ನನಗೆ) ಅವಕಾಶ ನೀಡಲಿಲ್ಲ ಎಂದು ಟಿಕಾಯತ್ ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ದೆಹಲಿ ಸಚಿವ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಗೋಪಾಲ್ ರೈ ಅವರು ಟಿಕಾಯತ್ ಬಂಧನವನ್ನು ಖಂಡಿಸಿದ್ದಾರೆ.