News

ರೈತರಿಗೆ ದೊಡ್ಡ ಆಘಾತ! ಮತ್ತೆ ದುಬಾರಿ ಆಯಿತು ಗೊಬ್ಬರ?

08 December, 2021 1:56 PM IST By: Ashok Jotawar
Agriculture minister Narendra Singh Tomar

ರೈತರೇ ಮತ್ತೆ ರೆಡಿ ಆಗಿ ದುಬಾರಿಯಾಗಿ ಬೆಳೆ ಬೆಳೆದು ಮಂಡಿಗಳಿಗೆ ಬಂದು ಕಡಿಮೆ ಬೆಲೆಗೆ ಮಾರಾಟ ಮಾಡಲು! ಏಕೆಂದರೆ 12 :32 :16 ಗೊಬ್ಬರ 285 ರೂ.ಗಳಷ್ಟು ದುಬಾರಿಯಾಗಲಿದೆ ಯಂದು ಹಿಂಫ್ಯಾಡ್ (ಕುಲ್ಲು) ಮಂಡಿಯ ಪ್ರಭಾರಿ ಕಿಶನ್ ಭಾರದ್ವಾಜ್ ಸ್ಪಷ್ಟ ಮಾಡಿದ್ದಾರೆ. 15  :15 :15  ಗೊಬ್ಬರವು ಕೂಡ 170 ರೂ. ಗಳಷ್ಟು ದುಬಾರಿ ಯಾಗಿದೆ. ಕಳೆದ ವಾರ ಕೃಷಿ ಮಂತ್ರಿ ನರೇಂದ್ರ ಸಿಂಗ್ ತೋಮರ್ ರವರು ಹೇಳಿದ್ದರು 'ಭಾರತದಲ್ಲಿ ಗೊಬ್ಬರದ ಕೊರತೆ ಇಲ್ಲ ಮತ್ತು ರೈತರಿಗೆ ಅವಶ್ಯಕ್ಕಿಂತ ಹೆಚ್ಚು ಗೊಬ್ಬರ ಸಿಗುತ್ತಿದೆ' ಯಂದು ಕೃಷಿ ಮಂತ್ರಿಗಳು ಹೇಳಿದ್ದರು.

ಆದರೆ ಈಗ ಗೊಬ್ಬರಗಳ ಮೇಲೆ GST (ಗೂಡ್ಸ್ ಸರ್ವಿಸ್ ಟ್ಯಾಕ್ಸ್) ಹಾಕಿ ದೇಶದ ಬೆನ್ನೆಲುಬಾದ ರೈತನ ಬೆನ್ನನ್ನೇ ಮುರಿಯುವ ಕೆಲಸ ಮಾಡುತ್ತಿದ್ದಾರೆ. ಇಷ್ಟೊಂದು ಹೂಡಿಕೆ ಮಾಡಿ, ಶ್ರಮ ಪಟ್ಟು ರೈತ ತನ್ನ ಬೆಳೆಯನ್ನು ಮಾರುಕಟ್ಟೆಗೆ ತಂದಾಗ ಅದಕ್ಕೆ ಒಳ್ಳೆಯ ಬೆಲೆ ಸಿಗುವುದೇ? ಏಕೆಂದರೆ MSP ಕೂಡ ಇದೆ ಯಂದು ಹೇಳಿರುವ ಕೃಷಿ ಮಂತ್ರಿಗಳು ಗೊಬ್ಬರದ ವಿಷಯದಲ್ಲಿ ಹೇಳಿದಹಾಗೆ MSP  ಖರೀದಿಯಲ್ಲೂ ರೈತನಿಗೆ ಮೋಸ ಆಗುವುದಿಲ್ಲಯಂಬ ಗ್ಯಾರೆಂಟಿ ಯಾರು ಕೊಡುತ್ತಾರೆ?

ರಸ ಗೊಬ್ಬರದಲ್ಲುಕೂಡ ಬೆಲೆ ಏರಿಕೆ ಯಾಗಿದೆ. ಕಳೆದ ದಿನಗಳಲ್ಲಿ ಕೇಂದ್ರ ಸರ್ಕಾರವು ಗೊಬ್ಬರದಲ್ಲಿ ಆದ ಹೊಸ ಬೆಲೆಯನ್ನು ಎಲ್ಲ ರಾಜ್ಯ ಸರ್ಕಾರಗಳಿಗೆ ಕಳುಸಿತ್ತು. ಅದರ ಹಿನ್ನಲೆಯಲ್ಲೇ ಎಲ್ಲ ರಾಜ್ಯ ಸರ್ಕಾರಗಳು ಗೊಬ್ಬರದ ಹೊಸ ರೇಟ್ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಇದರಲ್ಲಿ 12  :32 :16  ರಸ ಗೊಬ್ಬರ ಕೂಡ ತುಟ್ಟಿ ಯಾಗಿದೆ. ಸುಮಾರು 285  ರೂ. ಗಳಷ್ಟು ತುಟ್ಟಿ ಯಾಗಿದೆ. ಇದೆಲ್ಲ ನೋಡಿದರೆ ಪ್ರಧಾನ ಮಂತ್ರಿಗಳು ಮತ್ತು ಕೃಷಿ ಮಂತ್ರಿಗಳು ರೈತರ ಜೊತೆಗೆ ಅನ್ಯಾಯ  ಮಾಡುತ್ತಿದ್ದಾರೆಂದು ಸ್ಪಷ್ಟ ವಾಗಿ ಕಂಡು ಬರುತ್ತಿದೆ. ಯಾಕೆಂದರೆ ಪ್ರಧಾನ ಮಂತ್ರಿ ಗಳು ಕಳೆದ ವಾರ ಸಂಸದ್ ನಲ್ಲಿ ಹೇಳಿದರು. ನಾನು MSP ಪರವಾಗಿ ಇದ್ದೇನೆಂದು ಮತ್ತು ರೈತರ ಏಳಿಗೆಗಾಗಿ ಶ್ರಮ ಪಡುತ್ತೇನೆಂದು. ಆದರೆ ಮತ್ತೆ ರೈತರ ಪಾಲಿಗೆ ಕಷ್ಟ ಗಳನ್ನೇ ಕೊಡುತ್ತಿದ್ದಾರೆ.

ಮ್ಯೂರೇಟ್ ಆಫ್ ಪೊಟ್ಯಾಶ್ ಬೆಲೆಯಲ್ಲಿಯೂ 190 ರೂಪಾಯಿ ಏರಿಕೆಯಾಗಿದೆ. 850ರೂ.ಗೆ ದೊರೆಯುವ ಈ ಗೊಬ್ಬರ ಈಗ 1040 ರೂ.ಗಳಿಗೆ ದೊರೆಯಲಿದೆ.

ಹೀಗೇ ನಡೆದರೆ ರೈತ ತನ್ನ ಬೆಳೆಗೆ ಎಲ್ಲಿಂದ ಹಣವನ್ನು ಹೊಂದಿಸುತ್ತಾನೆ? ಮತ್ತು ಎಷ್ಟೇ ಶ್ರಮ ಪಟ್ಟರು ಅವನಿಗೆ ತನ್ನ ಶ್ರಮದ ದುಡ್ಡು ಸಿಗುವುದೇ? ಯಂಬುದು ಒಂದು ಯಕ್ಷ ಪ್ರಶ್ನೆ. ನಾವು ಮಾರುಕಟ್ಟೆಗೆ ಹೋದಾಗ ತರಕಾರಿ, ಧಾನ್ಯ ಗಳ ಬೆಲೆ ಕಂಡು ರೈತನಿಗೆ ಬೈದು ಅವನಿಂದ ಆ ಒಂದು ಪದಾರ್ಥವನ್ನು  ಕಡಿಮೆ ಮಾಡಿಸಿ ತಗೆದುಕೊಂಡು ಬರುತ್ತೇವೆ ಮತ್ತು ಅದೇ ದೊಡ್ಡ ದೊಡ್ಡ ಹೋಟೆಲ್ಗಳು, ಮಾಲ್ ಗಳಲ್ಲಿ ಏನು ಚೌಕಾಸಿ ಮಾಡದೇ ಅವರು ಹೇಳಿದಷ್ಟು ಹಣ ಕೊಟ್ಟು ಖರೀದಿಸುತ್ತೇವೆ. ಹೀಗೇ ಯಾದರೆ ರೈತ ತನ್ನ ಜೀವನ ಹೇಗೆ ನಡೆಸುತ್ತಾನೆಂಬುದು ಕಾದು ನೋಡಬೇಕು.

ಇನ್ನಷ್ಟು ಓದಿರಿ: ಹನಿ ಮತ್ತು ತುಂತುರು ನೀರಾವರಿಗೆ ಶೇ. 90 ರಷ್ಟು ಸಹಾಯಧನ ನೀಡಲು ರೈತರಿಂದ ಅರ್ಜಿ ಆಹ್ವಾನ

40,000 ರೂ.ನಲ್ಲಿ 66ಕಿಮೀ ಮೈಲೇಜ್ ನೀಡುವ ಯಮಹಾ ಸ್ಕೂಟರ್!