News

ಈ ಹೂವುಗಳನ್ನು ಬೆಳೆದ್ರೆ ರೈತರಿಗೆ ಶೇ 50ರಷ್ಟು ಸಬ್ಸಿಡಿ!

30 January, 2024 5:11 PM IST By: Hitesh
ಈ ಹೂವುಗಳನ್ನು ಬೆಳೆಯುವ ರೈತರಿಗೆ ಸಿಗಲಿದೆ ಬಂಪರ್‌ ಲಾಭಗಳು

ರೈತರಿಗೆ ಪ್ರಮುಖ ಸುದ್ದಿಗಳನ್ನು ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಕನ್ನಡ ಅಗ್ರಿನ್ಯೂಸ್‌ ಪರಿಚಯಿಸಿದೆ.

ಇಂದಿನ ಪ್ರಮುಖ ಸುದ್ದಿಗಳನ್ನು ನೋಡುವುದಾದರೆ, ಹಲವು ಮಹತ್ವದ ಬೆಳವಣಿಗೆಗಳು ಇಂದು ನಡೆದಿವೆ.  

ಮುಖ್ಯಾಂಶಗಳು

1. ರೈತರಿಗೆ ಪರಿಹಾರ: ಬಿಜೆಪಿ- ಕಾಂಗ್ರೆಸ್‌ ಜಿದ್ದಾಜಿದ್ದಿ!
2. ಕೇರಳದ ಕನ್ನಡಿಗರಿಗೂ ಉದ್ಯೋಗವಕಾಶ
3. ತೆಲಂಗಾಣದಲ್ಲಿ ಭಿನ್ನ ರಾಜಕೀಯ ವಿದ್ಯಾಮಾನ್ಯ
4. ವಿರೂಪಾಕ್ಷ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿ
5. ಅಧಿಕ ಇಳುವರಿ ಕೊಡುವ ನಾಲ್ಕು ಹೊಸ ಅಲಂಕಾರಿಕ ಹೂವಿನ ತಳಿ ಅಭಿವೃದ್ಧಿ
6. ಪಾವಗಡದಲ್ಲಿ ಭಾರೀ ಸೋಲಾರ್‌ ಉತ್ಪಾದನೆ: ಡಿ ಸಿ.ಎಂ

ಸುದ್ದಿಗಳ ವಿವರ ಈ ರೀತಿ ಇದೆ.

1. ರಾಜ್ಯದಲ್ಲಿ ಬರ ಪರಿಹಾರ ನೀಡುವ ಸಂಬಂಧ ಕಾಂಗ್ರೆಸ್‌ ಹಾಗೂ ಬಿಜೆಪಿಯ ನಡುವೆ ವಾಕ್ಸಮರ ಮುಂದುವರಿದೆ.

ರಾಜ್ಯದಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ಬರ ಕಾಣಿಸಿಕೊಂಡರೂ ಇಲ್ಲಿಯವರೆಗೆ ರಾಜ್ಯದ ರೈತರಿಗೆ ಸಮರ್ಪಕವಾಗಿ ಬರ ಪರಿಹಾರ ಸಿಕ್ಕಿಲ್ಲ.

ರೈತರಿಗೆ ಬರ ಪರಿಹಾರ ಕೊಡಿ ಇಲ್ಲವೇ ಕುರ್ಚಿ ಬಿಡಿ ಎಂದು ಬಿಜೆಪಿ ಅಭಿಯಾನ ಪ್ರಾರಂಭಿಸಿದೆ.

ಈ ಸಂಬಂಧ ಮಾತನಾಡಿರುವ ವಿರೋಧ ಪಕ್ಷದ ನಾಯಕ ಆರ್.‌ ಅಶೋಕ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದ ಅವಧಿಯಲ್ಲಿ

ಬರ, ನೆರೆ ಸಂದರ್ಭದಲ್ಲಿ ರೈತರಿಗೆ ಮೂರು, ನಾಲ್ಕು ಪಟ್ಟು ನೆರವು ನೀಡಿದ್ದೇವೆ.

ಅದೇ ಮಾದರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೆರವು ನೀಡಲಿ ಎಂದು ಆಗ್ರಹಿಸಿದ್ದಾರೆ.

ಇನ್ನು ಬರ ಪರಿಹಾರದ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕರ್ನಾಟಕದಲ್ಲಿ ಭೀಕರ ಬರಗಾಲವಿದ್ದರೂ

ಕೇಂದ್ರದಿಂದ ಇಲ್ಲಿಯವರೆಗೆ ರಾಜ್ಯದ ಪಾಲಿನ ಪರಿಹಾರ ಸಿಕ್ಕಿಲ್ಲ. ಕೇಂದ್ರದ ನೆರವು ಬರುವ

ಮುನ್ನವೇ ರಾಜ್ಯ ಸರ್ಕಾರ 29 ಲಕ್ಷದ 28 ಸಾವಿರದ 910 ರೈತರ ಖಾತೆಗೆ ಬರ ಪರಿಹಾರ ಹಣ ಜಮೆ ಮಾಡಿದೆ ಎಂದಿದ್ದಾರೆ.  
---------------------------
2. ಕೇರಳದ ಕಾಸರಗೋಡಿನಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಉದ್ಯೋಗ ಮೀಸಲಾತಿ ನೀಡಲು ಸರ್ಕಾರ ಮುಂದಾಗಿದೆ.

ಮುಂದಿನ ತಿಂಗಳು 5ರಿಂದ ನಡೆಯುವ ಕರ್ನಾಟಕ ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗುವುದು

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೂ ಚರ್ಚಿಸಲಾಗುವುದು ಎಂದು  

ಸಚಿವ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವರಾಜ್‌ ಎಸ್‌. ತಂಗಡಗಿ ತಿಳಿಸಿದ್ದಾರೆ.
----------------------------
3. ಈಚೆಗಷ್ಟೇ ಚುನಾವಣೆ ನಡೆದ ತೆಲಂಗಾಣದಲ್ಲಿ ಇದೀಗ ಯಾರೂ ಅಂದಾಜಿಸದ ರಾಜಕೀಯ ವಿದ್ಯಾಮಾನ್ಯವೊಂದು ನಡೆದಿದೆ.

ತೆಲಂಗಾಣದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ 24 ಚುನಾಯಿತ

ಶಾಸಕರ ವಿರುದ್ಧ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲಾಗಿದೆ.

ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಈ ಪ್ರಕರಣ ದಾಖಲಿಸಿದ್ದು ಇದರಲ್ಲಿ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ ತಾರಕ್

ರಾಮರಾವ್, ಮಾಜಿ ಸಚಿವ ಹರೀಶ್ ರಾವ್ ಸೇರಿದಂತೆ 24 ಶಾಸಕರ ವಿರುದ್ಧ 30 ದೂರುಗಳು ದಾಖಲಾಗಿರುವುದು ವರದಿಯಾಗಿದೆ.  
-------------------------

4. ಹಂಪಿಯ ವಿರೂಪಾಕ್ಷ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿ ಮಾಡಲಾಗಿದೆ. ಬರ್ಮುಡ ಚಡ್ಡಿ, ಜೀನ್ಸ್‌ ಧರಿಸಿ ಬರುವವರು

ಇನ್ಮುಂದೆ ಪಂಚೆ ತೊಡುವುದು ಕಡ್ಡಾಯವಾಗಿದ್ದು, ಮಹಿಳೆಯರು ತುಂಡುಡುಗೆಯಲ್ಲಿ ಬಂದರೆ ಅದರ ಮೇಲೆ ಶಲ್ಯ ತೊಡಬೇಕು ಎಂದು ಸೂಚಿಸಲಾಗಿದೆ.  
------------------
5.  ರಫ್ತಿಗೆ ಸೂಕ್ತವಾಗಿರುವ ಹಾಗೂ ಅಧಿಕ ಇಳುವರಿ ಕೊಡುವ ನಾಲ್ಕು ಹೊಸ ಅಲಂಕಾರಿಕ ಹೂವಿನ ತಳಿಗಳನ್ನು ಕರ್ನಾಟಕ

ತೋಟಗಾರಿಕೆ ಇಲಾಖೆ ರೈತರಿಗೆ ಪರಿಚಯಿಸಿದೆ. ಹಾಲೆಂಡ್‌ ಮೂಲದ ಹೈಡ್ರ್ಯಾಂಜಿಯಾ, ಲಿಸಿಯಾಂಥಸ್‌, ಸ್ನ್ಯಾಪ್‌ಡ್ರ್ಯಾಗನ್‌,

ಸ್ಟೇಟಿಸ್‌ ತಳಿಗಳನ್ನು ರಾಜ್ಯ ತೋಟಗಾರಿಕೆ ಇಲಾಖೆ ಶಿಫಾರಸು ಮಾಡಿದೆ.

ಹೂಗುಚ್ಛದ ಮಾದರಿಯಲ್ಲಿರುವ ಈ ಹೂವುಗಳು ನಾನಾ ಬಣ್ಣಗಳೊಂದಿಗೆ ಆಕರ್ಷಕವಾಗಿರಲಿದೆ.

ಕೊಯ್ಲು ಮಾಡಿದ ನಂತರ 8-10 ದಿನಗಳ ಕಾಲ ತಾಜಾ ಆಗಿರುವುದು ಇವುಗಳ ವಿಶೇಷವಾಗಿದೆ.

ಈ ತಳಿಗಳನ್ನು ಬೆಳೆಯಲು ರೈತರಿಗೆ ಸರ್ಕಾರದಿಂದ ಶೇ.50 ರಷ್ಟು ಸಬ್ಸಿಡಿ ಕೂಡ ಸಿಗಲಿದೆ.
------------------

6. ಪಾವಗಡದ 10 ಸಾವಿರ ಎಕರೆಯಲ್ಲಿ 2 ಸಾವಿರದ 500 ಮೆಗಾ ವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆ

ಮಾಡಲು ಯೋಜನೆ ರೂಪಿಸುತ್ತಿರುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.  
------------------