News

ಕೃಷಿ ಪಂಪ್ ಸೆಟ್‌ಗಳಿಗೆ ಮೀಟರ್ ಅಳವಡಿಕೆ ನಿಷೇಧಿಸಿ ರೈತ ಸಮಾವೇಶ !

19 September, 2022 6:02 PM IST By: Kalmesh T
Farmer's convention bans installation of meters for agricultural pump sets!

ಕೃಷಿ ಪಂಪ್ ಸೆಟ್‌ಗಳಿಗೆ ಮೀಟರ್ ಅಳವಡಿಕೆಯನ್ನು ನಿಷೇಧ ಮಾಡಿ ಎಂದು ಬೃಹತ್ ರೈತ ಸಮಾವೇಶವನ್ನು ಮಂಡ್ಯ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಹಮ್ಮಿಕೊಳ್ಳಲಾಯಿತು.

ಇದನ್ನೂ ಓದಿರಿ: Dharwad Krishi Mela: ಟ್ರ್ಯಾಕ್ಟರ್‌ ಬಳಸುವ ರೈತರಿಗೆ ಡೀಸೆಲ್‌ ಸಬ್ಸಿಡಿ- ಸಚಿವ ಬಿ.ಸಿ.ಪಾಟೀಲ

ಪ್ರತಿ ಟನ್ ಕಬ್ಬಿಗೆ 4,500 ರೂ ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಸರ್ಕಾರ ಗಮನಸೆಳೆಯುವ ನಿಟ್ಟಿನಲ್ಲಿ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಇಂದು ಬೃಹತ್ ರೈತ ಸಮಾವೇಶ ನಡೆಯಿತು.

ಕೂಡಲೇ ಬೇಡಿಕೆ ಈಡೇರಿಸದಿದ್ದರೆ ದಸರಾ ಹಬ್ಬದಂದು ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರಕ್ಕೆ ತಡೆಯೊಡ್ಡಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ತಿಳಿಸಿದರು.

ಬೆಳಗ್ಗೆ 10 ಗಂಟೆಯಿಂದ ಸರ್‌ಎಂವಿ ಪ್ರತಿಮೆಯಿಂದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ವರೆಗೆ ಮೆರವಣಿಗೆ ನಡೆಯಿತು. ಮಂಡ್ಯ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದ ಸುಮಾರು 10 ಸಾವಿರ ರೈತರನ್ನು ಸೇರಿಸಲಾಗುತ್ತಿದೆ.

ಕಾರ್ಯಕ್ರಮವನ್ನು ಸಂಯುಕ್ತ ಕಿಸಾನ್ ಮೋರ್ಚಾ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್‌ ಉದ್ಘಾಟಿಸಿದರು. ಎ.ಎಲ್.ಕೆಂಪೂಗೌಡ ಅಧ್ಯಕ್ಷತೆ ವಹಿಸಿದ್ದರು.

ಕೆಆರ್‌ನ್ ಸುತ್ತಮುತ್ತ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಧಿಸಬೇಕು. ಕೃಷಿ ಪಂಪ್‌ಸೆಟ್, ಭಾಗ್ಯಜ್ಯೋತಿ, ಕುಟೀರಜ್ಯೋತಿ ಮನೆಗಳಿಗೆ ರಿಜಿಟಲ್ ಮೀಟರ್ ಅಳವಡಿಸಬಾರದು. ಅಂತೆಯೇ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ನಡೆದಿರುವ ಹಗರಣದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸಮಾವೇಶದ ಮೂಲಕ ಆಗ್ರಹಿಸಲಾಯಿತು.

ಪ್ರಮುಖ ಬೇಡಿಕೆಗಳು

* ಪ್ರತಿ ಟನ್ ಕಬ್ಬಿಗೆ 4500 ಸಾವಿರ ರೂಪಾಯಿ.

* ಪ್ರತಿ ಲೀಟರ್ ಹಾಲಿನ ದರ 40 ರೂಪಾಯಿ.

* ಕೆ ಆರ್ ಎಸ್ ಸುತ್ತಮುತ್ತ ಇಪ್ಪತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧ.