News

Sivananda Patil ರೈತರು ಬರ ಬರಲಿ ಅಂತಲೇ ಕಾಯ್ತಾರೆ: ಸಚಿವ ಶಿವಾನಂದ ಪಾಟೀಲ!

26 December, 2023 2:26 PM IST By: Hitesh
ರೈತರು ಬರ ಬರ್ಲಿ ಅಂತ ಕಾಯ್ತಾರೆ

ರೈತರು ಬರ ಬರಲಿ ಅಂತಲೇ ಕಾಯ್ತಿರ್ತಾರೆ ಅಂತ ಸಚಿವ ಶಿವಾನಂದ ಪಾಟೀಲ ಹೇಳಿದ್ದಾರೆ.

ಸಚಿವರ ಈ ಹೇಳಿಕೆಗೆ ರೈತರು ಸೇರಿದಂತೆ ವಿರೋಧ ಪಕ್ಷದಿಂದ ಭಾರೀ ಟೀಕೆ ಬರ್ತಿದೆ.

ರಾಜ್ಯದಲ್ಲಿ ಈಗಾಗಲೇ ತೀವ್ರ ಭರವಿದೆ. ರೈತರು ತೀವ್ರ ಸಂಕಷ್ಟದಲ್ಲಿ ಇದ್ದಾರೆ.

ಈ ಸಂದರ್ಭದಲ್ಲಿ ಸಚಿವರು ಆಡಿರುವ ಮಾತಿಗೆ ಸಾಕಷ್ಟು ವಿರೋಧ ವ್ಯಕ್ತವಾಗ್ತಿದೆ.

ಸಚಿವ ಶಿವಾನಂದ ಪಾಟೀಲ ಅವರು ಹೇಳಿದ್ದೇನು ?

ರಾಜ್ಯದಲ್ಲಿ ಪದೇ ಪದೇ ಬರ ಬರಲಿ, ಇದರಿಂದ ರೈತರ (Farmers' loans) ಸಾಲ ಮನ್ನಾ ಆಗ್ತದೆ.

ಸಾಲ ಮನ್ನಾ ಆಗಲು ಬರ ಬರಲಿ ಅಂತ ರೈತರು ಬಯಸ್ತಾರೆ ಎನ್ನುವರ್ಥದಲ್ಲಿ ಸಕ್ಕರೆ, ಕೃಷಿ ಮಾರುಕಟ್ಟೆ

ಸಚಿವ ಶಿವಾನಂದ ಪಾಟೀಲ (Minister Sivananda Patil) ಹೇಳಿದ್ದಾರೆ.

ರೈತರು ಬರ ಬರಲಿ ಅಂತ ಬಯಸಬಾರ್ದು. ಅವರು ಬಯಸದೇ ಇದ್ರೂ, ಆಗ್ಗಾಗ್ಗೆ ಬರ ಬರ್ತಿರುತ್ತೆ ಅಂದಿದ್ದಾರೆ.

ರೈತರಿಗೆ ನೀರು, ವಿದ್ಯುತ್‌ ಪುಕ್ಸಟ್ಟೆ ಸಿಗುತ್ತೆ !

ರೈತರಿಗೆ ಪುಕ್ಸಟ್ಟೆ ನೀರು, ವಿದ್ಯುತ್‌ ಸಿಗುತ್ತೆ ಅಂತಲೂ ಸಚಿವರು ಹೇಳಿದ್ದಾರೆ.

ಕೃಷ್ಣಾ ನದಿಯಿಂದ ಪುಕ್ಸಟ್ಟೆ ನೀರು, ವಿದ್ಯುತ್‌ ಸಿಗುತ್ತೆ ಎಂದೂ ಅವರು ಹೇಳಿದ್ದಾರೆ.

ಈ ಮಾತುಗಳು ರೈತರನ್ನು ಕೆರಳಿಸಿವೆ.

ಈಗಾಗಲ್ಲೇ ರಾಜ್ಯದ ಎಲ್ಲ ಮುಖ್ಯಮಂತ್ರಿಗಳೂ ರೈತರಿಗೆ ಬೀಜ ಹಾಗೂ ರಸಗೊಬ್ಬರ ಕೊಟ್ಟಿದ್ದಾರೆ.

ಈಗ ರೈತರ ಆಸೆ, ಬಯಕೆ ಎಲ್ಲ ಬರ ಬರ್ಲಿ ಅನ್ನೋದಷ್ಟೇ ಅಂದಿದ್ದಾರೆ.

ರೈತರು ಬಯಸಲ್ಲಿ ಇಲ್ಲ ಬಯಸದೇ ಇರ್ಲಿ ಮೂರ್ನಾಲ್ಕು ವರ್ಷಕ್ಕೊಮ್ಮೆ ಬರ ಬರ್ತದೆ.

ಹಳೇ ಸರ್ಕಾರಗಳು ಸಾಲ ಮನ್ನಾ (Farmers loan waiver) ಮಾಡಿವೆ.

ಈಗ ಮುಖ್ಯಮಂತ್ರಿ (Chief Minister Siddaramaiah) ಸಿದ್ದರಾಮಯ್ಯ ಅವರೂ ರೈತರ

ಬಡ್ಡಿ ಮನ್ನಾ (Waiver of farmers' interest) ಮಾಡುವುದಾಗಿ ಹೇಳಿದ್ದಾರೆ ಎಂದಿದ್ದಾರೆ.   

ವಿರೋಧ ಪಕ್ಷಗಳಿಂದ ತೀವ್ರ ವಿರೋಧ

ಶಿವಾನಂದ ಪಾಟೀಲ ಅವರ ಹೇಳಿಕೆಗೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ಈಗಾಗಲೇ ರಾಜ್ಯದ ಜನ ಬರಗಾಲದ ಸಂಕಷ್ಟದಲ್ಲಿದ್ದಾರೆ.

ಇಂತಹ ಸಂದರ್ಭದಲ್ಲಿ ರೈತರ ಬಗ್ಗೆ ಸಚಿವರು ಈ ರೀತಿ ಮಾತನಾಡಬಾರದು.

ಅವರು ರೈತರ ಕ್ಷಮೆ ಕೇಳಬೇಕು. ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿವೆ.

ಸಚಿವರ ಈ ಹೇಳಿಕೆಗೆ ರಾಜ್ಯದ ಜನರೂ ಸಹ ಸೋಶಿಯಲ್‌ ಮೀಡಿಯಾಗಳಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.

ಮಿನಿಸ್ಟರ್‌ ಈ ರೀತಿ ಸ್ಟೇಟ್‌ಮೆಂಟ್ಸ್‌ ನೀಡುವುದು ಅವರಿಗೆ ಸರಿಹೊಂದುವುದಿಲ್ಲ ಎಂದಿದ್ದಾರೆ.

ವಿವಿಧೆಡೆ ರೈತರ ಪ್ರತಿಭಟನೆ

ಸಚಿವರ ಹೇಳಿಕೆಯನ್ನು ಖಂಡಿಸಿ, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ.

ಈ ಬೆಳವಣಿಗೆಗೆ ರಾಜ್ಯದ ಜನರೂ ಸಹ ವಿರೋಧ ವ್ಯಕ್ತಪಡಿಸಿದ್ದಾರೆ.