News

12ನೇ ವಯಸ್ಸಿಗೆ ಗಿನ್ನೆಸ್‌ ದಾಖಲೆ ಮಾಡಿದ ರೈತನ ಮಗ..ಈ ಪ್ರಚಂಡ ಪೋರನ ಸಾಧನೆಯೇನು ಗೊತ್ತಾ..?

09 August, 2022 10:16 AM IST By: Maltesh
Farmer's 12-year-old son created Guinness world record

Youtube ನೋಡಿ ಕೆಲವರು ಕೆಟ್ಟದ್ದನ್ನು ಕಲಿಯುತ್ತಿದ್ದಾರೆ. ಕೆಲವರು ಅದನ್ನು ಒಳ್ಳೆಯದಕ್ಕಾಗಿ ಬಳಸುತ್ತಾರೆ. ಹನ್ನೆರಡು ವರ್ಷದ ಬಾಲಕನೊಬ್ಬ ಯೂಟ್ಯೂಬ್ ನೋಡಿಕೊಂಡು ಗಿನ್ನಿಸ್‌ ದಾಖಲೆಯಲ್ಲಿ ಹೆಸರು ನಿರ್ಮಿಸಿದ್ದಾನೆ. ಹೌದು ಹರಿಯಾಣ ಮೂಲದ ಕಾರ್ತಿಕೇಯ ಜಖರ್ ಮೂರು ಆಪ್‌ಗಳನ್ನು ರಚಿಸಿ  ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ.  ಆ ಹುಡುಗನ ಪ್ರತಿಭೆಗೆ ಎಲ್ಲರೂ ಬೆರಗಾಗಿದ್ದಾರೆ. ಹುಡುಗನ ಹೆತ್ತವರ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ರಾಜ್ಯದ ಸಿಎಂ ಕೂಡ ಮಗುವಿನ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ.

ಕಾರ್ತಿಕೇಯ ಝಖರ್. ವಿಶ್ವದ ಅತ್ಯಂತ ಕಿರಿಯ ಅಪ್ಲಿಕೇಶನ್ ಡೆವಲಪರ್ ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನು ಹೊಂದಿರುವವರು. ಕಾರ್ತಿಕೇಯ ಜಾಖರ್ ಜಜ್ಜರ್ ನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿದ್ದಾನೆ.

ಆದರೆ ಅವರು ಯೂಟ್ಯೂಬ್ ನೋಡಿಕೊಂಡು ಮೂರು ಅಪ್ಲಿಕೇಶನ್‌ಗಳನ್ನು ರಚಿಸಿದ್ದಾರೆ. ಆದರೆ ಜಖರ್ ಆಕಸ್ಮಿಕವಾಗಿ ಆಪ್‌ಗಳನ್ನು ತಯಾರಿಸಿದ್ದಾರೆ. ಕರೋನಾ ಲಾಕ್‌ಡೌನ್ ಸಮಯದಲ್ಲಿ ಎಲ್ಲರಿಗೂ ಆನ್‌ಲೈನ್ ತರಗತಿಗಳು ಪ್ರಾರಂಭವಾಗಿವೆ. ಆಗ ಕಾರ್ತಿಕೇಯ ಜಖರ್ ತಂದೆ ರೈತರಾಗಿದ್ದು ಮಗನಿಗೆ 10 ಸಾವಿರ ರೂಪಾಯಿಯ  ಫೋನ್ ಖರೀದಿಸಿದ್ದರುಮ ಕಷ್ಟ ಪಟ್ಟು ಖರೀದಿಸಿದ್ದ ಫೊನ್‌ ಕೂಡ ಕೆಲ ದಿನಗಳ ಬಳಿಕ ಕೆಟಿತ್ತು.

ಆಗ ಫೋನ್ ರಿಪೇರಿ ಮಾಡಲು ಯೂಟ್ಯೂಬ್ ಮೊರೆ ಹೋಗಿದ್ದಾರೆ. ಅವರು ಯೂಟ್ಯೂಬ್‌ನಲ್ಲಿ ಕೋಡಿಂಗ್ ಕಲಿತರು. ಅಲ್ಲದೇ ಮೊಬೈಲ್ ನಲ್ಲಿ ಉಂಟಾಗುತ್ತಿದ್ದ ಸಮಸ್ಯೆಗಳನ್ನು ಪರಿಹರಿಸಿದ್ದಾರೆ. "ಕೋಡಿಂಗ್ ಸಮಸ್ಯೆಯಿಂದ ಮೊಬೈಲ್ ಫೋನ್ ಹಲವು ಬಾರಿ ಸಮಸ್ಯೆ ಮಾಡುತ್ತಿತ್ತು.

ಯೂಟ್ಯೂಬ್ ಸಹಾಯದಿಂದ ನಾನು ಫೋನ್ ಅನ್ನು ಸರಿಪಡಿಸಿದೆ ಮತ್ತು ನನ್ನ ಅಧ್ಯಯನವನ್ನು ಮುಂದುವರೆಸಿದೆ." ಜಖರ್ ಹೇಳಿದರು. ನಂತರ ಯೂಟ್ಯೂಬ್ ಮೂಲಕ ಕೆಲವು ವಿಷಯಗಳನ್ನು ಕಲಿತು ಸಾಮಾನ್ಯ ಜ್ಞಾನ, ಕೋಡಿಂಗ್, ಗ್ರಾಫಿಕ್ ಡಿಸೈನಿಂಗ್, ಡಿಜಿಟಲ್ ಶಿಕ್ಷಣಕ್ಕೆ ಸಂಬಂಧಿಸಿದ ಆಪ್ ಗಳನ್ನು ರಚಿಸಿದರು.

ಇದನ್ನೂ ಮಿಸ್‌ ಮಾಡ್ದೇ ಓದಿ:

ಕೋಟ್ಯಾಂತರ ಕಬ್ಬು ಬೆಳೆಗಾರರಿಗೆ ಭರ್ಜರಿ ಗಿಫ್ಟ್‌ ನೀಡಿದ ಕೇಂದ್ರ ಸರ್ಕಾರ!

ನಾನು ಮೂರು ಅಪ್ಲಿಕೇಶನ್‌ಗಳನ್ನು ಮಾಡಿದ್ದೇನೆ. ಮೊದಲನೆಯದು ಸಾಮಾನ್ಯ ಜ್ಞಾನಕ್ಕಾಗಿ ಲ್ಯೂಸೆಂಟ್ ಜಿಕೆ ಆನ್‌ಲೈನ್. ಎರಡನೆಯದು ಕೋಡಿಂಗ್ ಮತ್ತು ಗ್ರಾಫಿಕ್ ಡಿಸೈನಿಂಗ್ ಕಲಿಸುವ ರಾಮ್ ಕಾರ್ತಿಕ್ ಲರ್ನಿಂಗ್ ಸೆಂಟರ್. ಮೂರನೆಯದು ಶ್ರೀ ರಾಮ್ ಕಾರ್ತಿಕ್ ಡಿಜಿಟಲ್ ಎಜುಕೇಶನ್.

ಈಗ ಈ ಅಪ್ಲಿಕೇಶನ್‌ಗಳು 45,000 ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುತ್ತಿದೆ. ಕಾರ್ತಿಕೇಯ ಜಖರ್ ಹೇಳಿದರು. ಮೇಲಾಗಿ, ತಾನು ಪ್ರಧಾನಿ ನರೇಂದ್ರ ಮೋದಿಯವರಿಂದ ಸ್ಫೂರ್ತಿ ಪಡೆದಿದ್ದೇನೆ ಮತ್ತು ಮುಂದೊಂದು ದಿನ ದೇಶಕ್ಕಾಗಿ ಸೇವೆ ಸಲ್ಲಿಸಲು ಬಯಸುತ್ತೇನೆ ಎಂದು ಜಖರ್ ಹೇಳುತ್ತಾರೆ. ಅಲ್ಲದೆ ಜಖರ್ ಹಾರ್ವರ್ಡ್ ನಿಂದ ಸ್ಕಾಲರ್ ಶಿಪ್ ಪಡೆದಿದ್ದಾರೆ.

ಪಾಲಕರ ಸಂತಸ...

ಕಾರ್ತಿಕೇಯ  ಸಾಧನೆಗೆ ಬಾಲಕನ ಪೋಷಕರಿಗೆ ತುಂಬಾ ಖುಷಿಯಾಗಿದೆ.ಕಾರ್ತಿಕೇಯ ಅವರ ತಂದೆ ಅಜಿತ್ ಜಖರ್ ವೃತ್ತಿಯಲ್ಲಿ ಕೃಷಿಕರು. ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದಿಂದ ಮಗ ಯಶಸ್ಸು ಸಾಧಿಸಿದ್ದಾನೆ ಎಂದು ಅಜಿತ್ ಜಖರ್ ಹೇಳಿದ್ದಾರೆ. ಈ ಸಂದರ್ಭದಲ್ಲಿ ಅವರು ಮಾತನಾಡಿ, "ನನ್ನ ಮಗನಿಗೆ ಇತರ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಲು ನಾನು ಸರ್ಕಾರವನ್ನು ವಿನಂತಿಸುತ್ತೇನೆ ಎಂದರು.