News

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸ್ಪಂದಿಸದ ಕಾರಣ ರೈತರ ಆತ್ಮಹತ್ಯೆಗಳು ದ್ವಿಗುಣ-ಪ್ರಿಯಾಂಕ್‌ ಖರ್ಗೆ

15 December, 2022 9:53 AM IST By: Maltesh

ಸಂಕಷ್ಟದಲ್ಲಿರುವ ರೈತರಿಗೆ ಕೂಡಲೇ ಪರಿಹಾರ ಒದಗಿಸುವಂತೆ ಆಗ್ರಹಿಸಿ ರೈತರು  ಮತ್ತು ಕಾಂಗ್ರೆಸ್ ವತಿಯಿಂದ ಕಲಬುರಗಿಯಲ್ಲಿ  ಪ್ರತಿಭಟನೆ ನಡೆಸಲಾಯಿತು.

ನೆಟೆರೋಗದಿಂದ ತೊಗರಿಬೆಳೆ ಸಂಪೂರ್ಣವಾಗಿ ನಾಶವಾಗಿದ್ದು ಸಂಕಷ್ಟದಲ್ಲಿ ಇರುವ ರೈತರಿಗೆ ಪರಿಹಾರಕ್ಕೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಕಛೇರಿಯಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೆ “ಬೃಹತ್ ರೈತ ಪ್ರತಿಭಟನಾ ಜಾಥಾಕೈಗೊಳ್ಳಲಾಯಿತು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ತೊಗರಿ ಬೆಳೆ ನೆಟೆರೋಗದಿಂದ ಸಂಪೂರ್ಣ ಹಾಳಾಗಿದೆ ಆದರೆ ಈ 40% ಕಮಿಷನ್ ಸರ್ಕಾರ ಇದುವರೆಗೂ ಯಾವುದೇ ಸಮೀಕ್ಷೆಯನ್ನು ನಡೆಸದೆ, ಪರಿಹಾರವನ್ನು ನೀಡದೆ ದ್ರೋಹ ಬಗೆಯುತ್ತಿದೆ.

ಇದು ಬಿಜೆಪಿ ಸರ್ಕಾರ ನಷ್ಟದಲ್ಲಿ ಇರುವ ರೈತರಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ಈ ಸರ್ಕಾರದಲ್ಲಿ ನಮ್ಮ ರೈತರ ಗೋಳು ಕೇಳುವವರು ಯಾರು ಇಲ್ಲ. ಇದೇ ಸಮಸ್ಯೆ ಬೆಂಗಳೂರು ಭಾಗದ ಯಾವುದೇ ಜಿಲ್ಲೆಯಲ್ಲಿ ನಡೆದಿದ್ದರೆ ಸಚಿವರು ಓಡೋಡಿ ಬರುತ್ತಿದ್ದರು. ರಾಜ್ಯ ಮತ್ತು ಕೇಂದ್ರ ಸರ್ಕಾರ ರಾಜ್ಯದ ರೈತರ ಸಂಕಷ್ಟಗಳಿಗೆ ಸ್ಪಂದಿಸದೇ ಇರುವುದರಿಂದ ರೈತರ ಆತ್ಮಹತ್ಯೆ ದುಪ್ಪಟ್ಟಾಗುತ್ತಿವೆ ಎಂದು ಪ್ರಿಯಾಂಖ್‌ ಖರ್ಗೆ ಆರೋಪ ಮಾಡಿದ್ದಾರೆ.

Top News : ಇನ್ಮುಂದೆ 4 ಕಂತುಗಳಲ್ಲಿ ಪಿಎಂ ಕಿಸಾನ್‌ ಹಣ?