News

ಮಿಶ್ರಬೆಳೆಯಲ್ಲಿ ಕೈತುಂಬಾ ಆದಾಯ ಪಡೆವ ಯವ ರೈತ ಸಚಿನ್

11 December, 2023 6:09 PM IST By: Hitesh
ಮಿಶ್ರ ಬೆಳೆಯಲ್ಲಿ ಸೈ ಎನಿಸಿಕೊಂಡ ಯುವ ರೈತ ಸಚಿನ್‌ ಕೆ.ಬಿ

ಸಣ್ಣ ಪ್ರಮಾಣದ ಹೊಲವಿದ್ದರೂ, ಅದರಲ್ಲಿ ಮಿಶ್ರಬೆಳೆಗಳನ್ನು ಬೆಳೆಯುವ ಮೂಲಕ ಲಕ್ಷಾಂತರ ರೂಪಾಯಿ ಆದಾಯವನ್ನು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ನರಹಳ್ಳಿಯ ಸಚಿನ್ ಕೆ. ಬಿ.

ದೊಡ್ಡ ಮಟ್ಟದಲ್ಲಿ ಜಮೀನು ಹೊಂದಿರುವ ರೈತರು ಮಾತ್ರ ದೊಡ್ಡ ಸಾಧನೆ ಮಾಡುತ್ತಾರೆ ಎನ್ನುವುದು ಸುಳ್ಳು ಎನ್ನುವಂತೆ ಮಂಡ್ಯ ಜಿಲ್ಲೆಯ

ಪಾಂಡವಪುರ ತಾಲ್ಲೂಕಿನ ನರಹಳ್ಳಿಯ ಸಚಿನ್ ಕೆ. ಬಿ. ಅವರು ಇರುವ ಹೊಲದಲ್ಲಿಯೇ ಮಿಶ್ರಬೆಳೆಗಳನ್ನು ಬೆಳೆಯುವ ಮೂಲಕ ಕೈತುಂಬಾ ಆದಾಯ ಗಳಿಸುತ್ತಿದ್ದಾರೆ.

ನರಹಳ್ಳಿ ಹಾಗೂ ಕಾಡೇನಹಳ್ಳಿಯಲ್ಲಿ ಇವರು ಜಮೀನು ಹೊಂದಿದ್ದು, ಎರಡೂ ಭಾಗದಲ್ಲಿಯೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಅವರು ಮಳೆಯಾಶ್ರಿತ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಉತ್ತಮ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ನರಹಳ್ಳಿಯಲ್ಲಿ ಇರುವ

ಕೃಷಿ ಭೂಮಿಗೆ ನಮ್ಮ ಮಾವನವರ ಹೊಲದ ಬೋರ್‌ವೆಲ್‌ನ ಮೂಲಕ ನೀರು ಸರಬರಾಜು ಮಾಡಿಕೊಂಡು ವ್ಯವಸಾಯ ಮಾಡುತ್ತಿದ್ದಾವೆ ಎನ್ನುತ್ತಾರೆ ಸಚಿನ್‌.

ರಾಗಿ, ಮಿಶ್ರ ತರಕಾರಿ ಬೆಳೆ
ಸಚಿನ್‌ ಅವರು ಅವರ ಹೊಲದಲ್ಲಿ ರಾಗಿ ಬೆಳೆ ಬೆಳೆಯುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಅಲ್ಲದೇ ಒಂದೇ ಹಂತದಲ್ಲಿ

ಹಲವು ಮಿಶ್ರ ತರಕಾರಿಗಳನ್ನು ಬೆಳೆಯುತ್ತಿರುವುದರಿಂದ ಉತ್ತಮ ಆದಾಯ ಬರುತ್ತಿದೆ.

ಟೊಮೆಟೋ, ಬೀನ್ಸ್‌ ಸೇರಿದಂತೆ ವಿವಿಧ ಮೂರು ತಳಿಗಳನ್ನು ಒಂದೇ ಹಂತದಲ್ಲಿ ಬೆಳೆಯುತ್ತಿದ್ದು, ಇದರಿಂದ ಒಮ್ಮೆಗೆ ವಿವಿಧ

ಬೆಳೆಗಳಿಂದ ಲಾಭ ಮಾಡುತ್ತಿದ್ದಾರೆ. ಜನವರಿಯಲ್ಲಿ ಟೊಮೆಟೋ ಬೆಳೆ ಬೆಳೆದಿದ್ದರು.   

ತೆಂಗು, ಅಡಿಕೆ ಗಿಡಗಳ ಮೂಲಕ ಆದಾಯ

ಸಚಿನ್‌ ಅವರು ತೆಂಗು ಹಾಗೂ ಅಡಿಕೆ ಗಿಡಗಳನ್ನು ಬೆಳೆದಿದ್ದು, ಇದರಿಂದ ಅವರಿಗೆ ನಿರಂತರವಾಗಿ ಆದಾಯ ಗಳಿಸುತ್ತಿದ್ದಾರೆ.

ಜಾಗ ಇರುವ ಪ್ರದೇಶದಲ್ಲೆಲ್ಲ ಅವರು ತೆಂಗು ಹಾಗೂ ಅಡಿಕೆ ಗಿಡಗಳನ್ನು ನೆಡುವ ಮೂಲಕ ಉಪ ಆದಾಯವನ್ನು ಸೃಷ್ಟಿ

ಮಾಡಿಕೊಳ್ಳುವ ಮೂಲಕ ಎಲ್ಲ ರೈತರಿಗೂ ಮಾದರಿಯಾಗಿದ್ದಾರೆ.

ಮಿಶ್ರಬೆಳೆ ಬೆಳೆಯಲು ಯೋಜನೆ  

ಬಾಳೆ ಗಿಡಗಳು, ಪರಂಗಿ ಸೇರಿದಂತೆ ತಿಂಗಳು ಅಥವಾ ಎರಡು ತಿಂಗಳಿಗೆ ಆದಾಯ ಬರುವ ರೀತಿಯಲ್ಲಿ ಬೆಳೆಗಳನ್ನು ಬೆಳೆಯುವುದಕ್ಕೂ ಸಚಿನ್‌ ಅವರು ಯೋಜನೆ ರೂಪಿಸಿಕೊಳ್ಳುತ್ತಿದ್ದಾರೆ.

ಇದರಿಂದ ಆಗಾಗ್ಗೇ ಆದಾಯ ಬರುವಂತೆ ಯೋಜನೆ ಮಾಡಿಕೊಳ್ಳಲಾಗುತ್ತಿದೆ.

ಈ ರೀತಿ ಮಾಡುವುದರಿಂದ ನಿರಂತರ ಆದಾಯ ಬರಲಿದೆ ಎನ್ನುತ್ತಾರೆ ಸಚಿನ್‌. ಬೋರ್‌ವೆಲ್‌ ಕೊರೆಯುವುದಕ್ಕೂ ಸಿದ್ಧತೆ ಮಾಡಿಕೊಳ್ಳುತ್ತಿದ್ದು,

ಸಾವಯವ ಗೊಬ್ಬರ ಬಳಸುವುದಕ್ಕೆ ಆದ್ಯತೆ ನೀಡುತ್ತಿದ್ದಾರೆ. ಇರುವ ಆರು ಎಕರೆ ಭೂಮಿಯಲ್ಲಿ ಮಿಶ್ರ ಬೆಳೆಯಲ್ಲಿ

ನಿರಂತರ ಆದಾಯ ಗಳಿಸುವ ಮೂಲಕ ಸಚಿನ್‌ ಎಲ್ಲರಿಗೂ ಮಾದರಿಯಾಗಿದ್ದಾರೆ.