ರಾಜ್ಯ ಕೃಷಿ ಕಾಲೇಜುಗಳಲ್ಲಿನ ಡಿಪ್ಲೋಮಾ ಮತ್ತು ಪದವಿ ಕೋರ್ಸ್ ಮಾಡಲಿಚ್ಚಿಸುವ ರೈತರ ಮಕ್ಕಳಿಗಿಲ್ಲಿದೆ ಸಂತಸದ ಸುದ್ದಿ. ರೈತರ ಮಕ್ಕಳಿಗೆ ಹೆಚ್ಚಿನ ಅವಕಾಶ ಸಿಗಬೇಕೆಂಬ ಕಾರಣಕ್ಕೆ ರಾಜ್ಯ ಸರ್ಕಾರವು ಡಿಪ್ಲೋಮಾ ಮತ್ತು ಪದವಿ ಕೋರ್ಸ್ಗಳಲ್ಲಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದೆ.
ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಡಿಪ್ಲೋಮಾ, ಬಿ.ಎಸ್.ಸಿ ಅಗ್ರಿ ಮತ್ತು ಅದರ ಸರಿಸಮಾನ ಪದವ ಕೋರ್ಸ್ ಗಳ ಪ್ರವೇಶಕ್ಕೆ ಇರುವ ಮೀಸಲಾತಿ ಪ್ರಮಾಣವನ್ನು ಶೇ. 10 ರಷ್ಟು ಮೀಸಲಾತಿಯನ್ನು ಹೆಚ್ಚಿಸಿ ಮಹತ್ವದ ತೀರ್ಮಾನ ಕೈಗೊಂಡಿದೆ. ಈ ಮುಂಚೆ ರೈತರ ಮಕ್ಕಳಿಗೆ ಶೇ. 40 ರಷ್ಟು ಮೀಸಲಾತಿಯಿತ್ತು. ಈಗ ಶೇ. 50 ರಷ್ಟು ಮೀಸಲಾತಿ ರೈತರ ಮಕ್ಕಳಿಗೆ ಸಿಗಲಿದೆ.
ಪ್ರತಿ ವರ್ಷ ಶೈಕ್ಷಣಿಕ ಸಾಲಿನಲ್ಲಿ ಸುಮಾರು ನಾಲ್ಕು ಸಾವಿರ ಸೀಟುಗಳಿಗೆ ದಾಖಲಾತಿ ನಡೆಯುತ್ತವೆ. ಇದರಲ್ಲಿ ಕೃಷಿ ಕುಟುಂಬದಿಂದ ಬಂದ ಮಕ್ಕಳಿಗೆ ಶೇ. 50 ರಷ್ಟು ಮೀಸಲಾತಿ ಸಿಗಲಿದೆ. ಡಿಪ್ಲೋಮಾ ಮತ್ತು ಪದವಿ ಕೋರ್ಸ್ ಮಾಡಲಿಚ್ಚಿಸುವ ರೈತರ ಮಕ್ಕಳಿಗೆ ಇನ್ನೂ ಮುಂದೆ ಹೆಚ್ಚಿನ ಸೀಟುಗಳು ಸಿಗಲಿವೆ. ಇದಕ್ಕಿಂತ ಮುಂಚಿತವಾಗಿ ಬಹಳಷ್ಟು ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಸಿಗದೆ ಕೃಷಿ ಕೋರ್ಸ್ ಗಳಿಂದ ವಂಚಿತರಾಗುತ್ತಿದ್ದರು.ಈಗ ರೈತರ ಮಕ್ಕಳಿಗೆ ಹೆಚ್ಚಿನ ಅವಕಾಶ ಸಿಗಲಿದೆ.
ರಾಜ್ಯದಲ್ಲಿ ಒಟ್ಟು ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಆರು ವಿಶ್ವವಿದ್ಯಾಲಯಗಳಿನವೆ. ಬೆಂಗಳೂರು, ಧಾರವಾಡ, ರಾಯಚೂರು, ಶಿವಮೊಗ್ಗ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ, ಬೀದರ್ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯ ಅಧೀನದಲ್ಲಿ 26 ಸರ್ಕಾರಿ ಕಾಲೇಜುಗಳು, ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ ಗಳು ನಡೆಯುತ್ತಿವೆ.
2021-2022ನೇ ಸಾಲಿನ ಬಜೆಟ್ ನಲ್ಲಿ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ರೈತ ಮಕ್ಕಳಿಗೆ ನೀಡುತ್ತಿರುವ ಮೀಸಲಾತಿಯನ್ನು ಶೇ. 40 ರಿಂದ ಶೇ. 5೦ಕ್ಕೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿ,ಸಿದ್ದರು.