News

PIB Fact Check: ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ಇಲ್ಲ! PIBಯ ಫ್ಯಾಕ್ಟ್‌ಚೆಕ್‌ ವರದಿ..

12 October, 2022 2:10 PM IST By: Kalmesh T
Fact Check: There is no free laptop for students from the government!

ಅಕ್ಟೋಬರ್ 10 ರಂದು ಪತ್ರಿಕಾ ಮಾಹಿತಿ ಬ್ಯೂರೋ (PIB)  ಫ್ಯಾಕ್ಟ್‌ ಚೆಕ್‌ ತಂಡವು 11 ನೇ ತರಗತಿಯ ವಿದ್ಯಾರ್ಥಿಗಳಿಗೆ ಪದವಿ ಹಂತದವರೆಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ನೀಡುತ್ತದೆ ಎಂಬ ವರದಿಯನ್ನು ಪರಿಶೀಲಿಸಿ ತಿರಸ್ಕರಿಸಿದ್ದಾರೆ.

ಇದನ್ನೂ ಓದಿರಿ: 1 ಕೋಟಿಗೂ ಹೆಚ್ಚು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಕೇಂದ್ರದಿಂದ ದೀಪಾವಳಿ ಬಂಪರ್‌ ಗಿಫ್ಟ್‌!

ವರದಿಯ ಪ್ರಕಾರ, ಲ್ಯಾಪ್‌ಟಾಪ್‌ಗಳನ್ನು ವಿತರಿಸಲು ಶಿಕ್ಷಣ ಸಚಿವಾಲಯವು " ಪ್ರಧಾನ ಮಂತ್ರಿ ರಾಷ್ಟ್ರೀಯ ಲ್ಯಾಪ್‌ಟಾಪ್ ಯೋಜನೆ 2022 " ಎಂಬ ವಿಶೇಷ ವೆಬ್‌ಸೈಟ್ ಅನ್ನು ಸಹ ಅಭಿವೃದ್ಧಿಪಡಿಸಿದೆ.

ಈ ಲ್ಯಾಪ್‌ಟಾಪ್‌ಗಳ ಹಣವನ್ನು 2022–2023ರ ಶೈಕ್ಷಣಿಕ ವರ್ಷದ ಅವಧಿಯಲ್ಲಿ ಒಂದು ನಗದು ಪಾವತಿಯಲ್ಲಿ ವಿದ್ಯಾರ್ಥಿಯ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿತ್ತು.

ಆದರೆ ಈ ಸಮರ್ಥನೆಯನ್ನು PIB ಫ್ಯಾಕ್ಟ್‌ಚೆಕ್‌ ತಂಡ ನಿರಾಕರಿಸಿದ್ದಾರೆ. ಅವರು pmssgovt.online ಒಂದು ನಕಲಿ ವೆಬ್‌ಸೈಟ್ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಇನ್ನೂ 5 ದಿನ ಭಾರೀ ಮಳೆ; ಹವಾಮಾನ ಇಲಾಖೆ ನೀಡಿದ ಎಚ್ಚರಿಕೆ ಏನು ಗೊತ್ತೆ?

ನಕಲಿ ವೆಬ್‌ಸೈಟ್ ಪ್ರಕಾರ, XI, XII, BA 1st, BA 2nd, BA 3rd, BA 4th, BA 5th ಮತ್ತು BA 6 ನೇ ಸೆಮಿಸ್ಟರ್‌ನಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ಉಚಿತ ಲ್ಯಾಪ್‌ಟಾಪ್‌ಗಳಿಗೆ ಅರ್ಹರಾಗಿರುತ್ತಾರೆ. ಪಿಐಬಿ ನಕಲಿ ವೆಬ್‌ಸೈಟ್ ಮತ್ತು ಸ್ಕೀಮ್ ಅನ್ನು ಟ್ವಿಟರ್‌ನಲ್ಲಿ ಟೀಕಿಸಿದೆ.

" http://pmssgovt.online " ಎಂಬ ವೆಬ್‌ಸೈಟ್ ಪ್ರಕಾರ, "ಪ್ರಧಾನ ಮಂತ್ರಿ ರಾಷ್ಟ್ರೀಯ ಲ್ಯಾಪ್‌ಟಾಪ್ ಯೋಜನೆ 2022" XI-ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ಒದಗಿಸುವುದಾಗಿ ಭರವಸೆ ನೀಡಿದೆ.

ಇಂತಹ ಯಾವುದೇ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿಲ್ಲ ಎಂದು ಭಾರತ ಸರ್ಕಾರದ PIB ಟ್ವೀಟ್ ಮಾಡಿದೆ.

ಜಾನುವಾರು ಮಾಲೀಕರಿಗೆ ಸಿಹಿಸುದ್ದಿ; ದೇಶದ ಎಲ್ಲಾ ಪಂಚಾಯತ್‌ಗಳಲ್ಲಿ ಸರ್ಕಾರ ಡೈರಿ ತೆರೆಯಲು ನಿರ್ಧಾರ!

"ಭಾರತ ಸರ್ಕಾರವು ಈ ರಾಷ್ಟ್ರೀಯ ಲ್ಯಾಪ್‌ಟಾಪ್ ಯೋಜನೆಯನ್ನು ವಿಶೇಷವಾಗಿ ಎಲ್ಲಾ ಭಾರತೀಯ ರಾಜ್ಯಗಳಿಗೆ ಘೋಷಿಸಿದೆ. 

ಅಧಿಕೃತ ವೆಬ್‌ಸೈಟ್ www.pmssgovt.online  ಮೂಲಕ, ಎಲ್ಲಾ ಅರ್ಹ ವಿದ್ಯಾರ್ಥಿಗಳು PM ರಾಷ್ಟ್ರೀಯ ಲ್ಯಾಪ್‌ಟಾಪ್ ಯೋಜನೆಗಾಗಿ ಅರ್ಜಿಯನ್ನು ಸಲ್ಲಿಸಬಹುದು" ಎಂದು ನಕಲಿ ವೆಬ್‌ಸೈಟ್ pmssgovt ನಲ್ಲಿ ಸುಳ್ಳು ಸುದ್ದಿ ಹಬ್ಬಿಸಿತ್ತು.

ನಕಲಿ ವೆಬ್‌ಸೈಟ್‌ನ ಪ್ರಕಟಣೆಯು, "ಭಾರತ ಸರ್ಕಾರವು ವಿಂಡೋಸ್ 11 ಮತ್ತು 8GB RAM ಜೊತೆಗೆ HP ಕೋರ್ i3 11 ನೇ ಲ್ಯಾಪ್‌ಟಾಪ್‌ಗಳನ್ನು ನೀಡಲು ಒಪ್ಪಿಕೊಂಡಿದೆ.

2022-2023 ರ ಶೈಕ್ಷಣಿಕ ಅವಧಿಯ ಸಮಯದ ಚೌಕಟ್ಟಿನೊಳಗೆ, PM ರಾಷ್ಟ್ರೀಯ ಲ್ಯಾಪ್‌ಟಾಪ್ ಯೋಜನೆಯ ಮೊತ್ತವನ್ನು ವಿದ್ಯಾರ್ಥಿಗೆ ಜಮಾ ಮಾಡಲಾಗುತ್ತದೆ.

ಎಂದು ಹೀಗೆ ಸುಳ್ಳು ಸುದ್ದಿಯನ್ನು ನಂಬದೇ ಇರುವಂತೆ PIB ಜನಸಾಮಾನ್ಯರಲ್ಲಿ ಮನವಿಯನ್ನು ಮಾಡಿಕೊಂಡಿದೆ.