ಕೆಲವು ದಿನಗಳಿಂದ ಕೆಲವು ವೆಬ್‌ಸೈಟ್‌ಗಳಲ್ಲಿ ತೋಟಗಾರಿಕೆ ಇಲಾಖೆಯ ಹೆಸರಿನಲ್ಲಿ ನೇಮಕಾತಿ ಕುರಿತು ಸುದ್ದಿ ಹರಿದಾಡುತ್ತಿದೆ. ಬಹುತೇಕ ಜನ ಇದನ್ನು ನಿಜವೆಂದು ನಂಬಿದ್ದಾರೆ ಕೂಡ. ಆದರೆ ಇದು ನಿಜವೋ, ಅಲ್ಲವೋ ಇಲ್ಲಿದೆ ಮಾಹಿತಿ.
ಕರ್ನಾಟಕ ತೋಟಗಾರಿಕೆ ಇಲಾಖೆಯೂ 5465 ಹುದ್ದೆಗೆ ನೇಮಕಾತಿಯನ್ನು ಮಾಡುವ ಕುರಿತಾದ ಸುಳ್ಳು ಸುದ್ದಿಯ ಕುರಿತು ಸ್ವತಃ ಕರ್ನಾಟಕ ತೋಟಗಾರಿಕೆ ಇಲಾಖೆಯೇ (Karnataka State Horticulture Department) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸ್ಪಷ್ಟಪಡಿಸಿದೆ.
ತೋಟಗಾರಿಕೆ ಇಲಾಖೆಯ ಸ್ಪಷ್ಟನೆ ಹೀಗಿದೆ:
“ಸಾರ್ವಜನಿಕರ ಗಮನಕ್ಕೆ : ಪ್ರಸ್ತುತ ತೋಟಗಾರಿಕೆ ಇಲಾಖೆಯಲ್ಲಿ ಯಾವುದೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿರುವುದಿಲ್ಲ ಸಾಮಾಜಿಕ ಜಾಲ ತಾಣ ಹಾಗೂ ಇತರೆ ಮಾದ್ಯಮಗಳಲ್ಲಿ ಹರಡುತ್ತಿರುವ ಸುದ್ದಿಗಳಿಗೆ ಕಿವಿಗೊಡಬಾರೆದೆಂದು ಸಾರ್ವಜನಿಕರಲ್ಲಿ ವಿನಂತಿಸಿದೆ” ಎಂದು ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ಆದ್ದರಿಂದ ಉದ್ಯೋಗ ಆಕಾಂಕ್ಷಿಗಳು ಈ ಸುಳ್ಳು ಸುದ್ದಿಯನ್ನು ನಂಬಿ ಅರ್ಜಿಗಳನ್ನು ಹಾಕಲು ಮುಂದಾಗಿ ಬೇಸರಗೊಳ್ಳದಿರಲು ಇಲಾಖೆ ತಿಳಿಸಿದೆ.