News

ಜಗತ್ತಿನ ಅತೀ ದುಬಾರಿ ಹಣ್ಣುಗಳು.. ಹಣ್ಣಿನ ಬೆಲೆ ಕೇಳಿದರೆ ಶಾಕ್ ಆಗುವುದು ಗ್ಯಾರೆಂಟಿ

02 October, 2021 1:56 PM IST By:

ಹಣ್ಣಿನ ಬೆಲೆ ಅಬ್ಬಬ್ಬಾ ಅಂದರೆ ನಾಲ್ಕೈದು ಸಾವಿರ ಇರುವುದನ್ನು ಕೇಳಿರುತ್ತೇವೆ. ಆದರೆ ಇಲ್ಲಿ ನಿಮ್ಮ ಮಾಹಿತಿಗಾಗಿ ಕೆಜಿ ಅಥವಾ ಒಂದು ಹಣ್ಣಿಗೆ ಒಂದು ಲಕ್ಷಕ್ಕೂ ಹೆಚ್ಚು ಬೆಲೆಯಿದೆ ಎಂದರೆ ನಂಬಲಿಕಿಲ್ಲ. ಆದರೆ ನಂಬಲೇ ಬೇಕು. ಇಲ್ಲಿ ಕೆಲವು ಹಣ್ಣುಗಳು ಒಂದು ಲಕ್ಷಕ್ಕೂ ಹೆಚ್ಚು ಬೆಲೆಗೆ ಮಾರಾಟವಾಗಿ ದಾಖಲಾಗಿದೆ. ಅವು ಯಾವ ಹಣ್ಣುಗಳೆಂದುಕೊಂಡಿದ್ದೀರಾ..ಇಲ್ಲಿದೆ ಜಗತ್ತಿನ ಅತೀ ದುಬಾರಿ ಹಣ್ಣುಗಳ ಸಂಕ್ಷೀಪ್ತ ಮಾಹಿತಿ.

33 ಲಕ್ಷ ರೂಪಾಯಿಗೆ ಮಾರಾಟವಾಗಿ ದಾಖಲೆಯಾಗಿದೆ ಯುಬರಿ ಮೆಲನ್

ಜಪಾನ್ ನ ಯುಬರಿ ಕರಬೂಜ್ ವಿಶ್ವದ ಅತ್ಯಂತ ದುಬಾರಿ ಹಣ್ಣು. ಈ ಕರಬೂಜ್ (ಕಲ್ಲಂಗಡಿ) ವಿಶೇಷವಾಗಿ ಜಪಾನಿನ ಯುಬರಿ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಈ ಯುಬರಿ ಕರಬೂಜ್  2019 ರಲ್ಲಿ ದಾಖಲೆಯ ಬೆಲೆಯಲ್ಲಿ ಮಾರಾಟವಾಗಿತ್ತು.  ಒಂದು ಕರಬೂಜ್ ಬೆಲೆ 33 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಇದು ಇಲ್ಲಿಯವರೆಗೆ ಅತೀ ಹೆಚ್ಚು ದುಬಾರಿ ಬೆಲೆಗೆ ಮರಾಟವಾದ ಹಣ್ಣಾಗಿದೆ.

ಲಾರ್ಡ್ ಗಾರ್ಡನ್ ಆಫ್ ಹೆಲಿಗಾನ್ ಅನಾನಸ್ ಬೆಲೆ 11 ಲಕ್ಷ

ಇಂಗ್ಲೆಂಡಿನ ಹೆಲಿಗಾನ್ ನಲ್ಲಿರುವ ಲಾಸ್ಟ್ ಗಾರ್ಡನ್ ನಲ್ಲಿ ಬೆಳೆಯುವ ಅನಾನಸ್ ಬೆಲೆ ಸುಮಾರು 11 ಲಕ್ಷ ರೂಪಾಯಿ. ಹೌದು, ಇದು ಜಗತ್ತಿನ ಅತೀ ದುಬಾರಿ ಅನಾನಸ್ ಹಣ್ಣುಗಳಲ್ಲಿ ಒಂದಾಗಿದೆ. ಇದು ಇಂಗ್ಲೆಂಡ್ ಹವಾಮಾನದಲ್ಲಿ ಬೆಳೆಯುವುದರಿಂದ. ಸಾಮಾನ್ಯವಾಗಿ ಇಂಗ್ಲೆಂಡ್ ಹವಾಮಾನದಲ್ಲಿ ಪೈನಾಪಲ್ ಬೆಳೆಯುವುದಿಲ್ಲ. ಅದಕ್ಕಾಗಿಯೇ ಈ ಹಣ್ಣಿಗೆ ಅಷ್ಟೊಂದು ಬೆಲೆ.

ಒಂದು ದ್ರಾಕ್ಷಿ ಗುಚ್ಚದ ಬೆಲೆ 3.5 ಲಕ್ಷ

ರೂಬಿ ರೋಮ್ಸ್ ಗ್ರೇಪ್ ಎಂದೇ ಹೆಸರಾದ ಈ ದ್ರಾಕ್ಷಿ ಹಣ್ಣಿನ ಹೆಸರಿನಲ್ಲಿ ರೋಮ್ಸ್ ಎಂದಿದ್ದರೂ ಈ ದ್ರಾಕ್ಷಿ ಬೆಳೆಯುವುದು ಜಪಾನಿನಲ್ಲಿ. ಸಾಮಾನ್ಯವಾಗಿ ನಮ್ಮಲ್ಲಿ ಒಂದು ಕೆಜಿ ದ್ರಾಕ್ಷಿ 60 ರಿಂದ 80 ರೂಪಾಯಿಗೆ ಸಿಗುತ್ತದೆ.ಅಬ್ಬಬ್ಬಾ ಎಂದರೆ 100 ರೂಪಾಯಿಗೆ ಒಂದು ಕೆಜಿಯಂತೆ ಸಿಗುತ್ತದೆ. ಆದರೆ ಜಪಾನಿನಲ್ಲಿ ಬೆಳೆಯುವ ವಿಶಿಷ್ಟ ತಳಿಯ ಕೆಂಪು ದ್ರಾಕ್ಷಿಯ ಒಂದು ಕೆಜಿ ಗೊಂಚಲಿನ ಬೆಲೆ 3.5 ಲಕ್ಷ ರೂಪಾಯಿಗೆ ಮಾರಾಟವಾಗಿದ್ದು ದಾಖಲಾಗಿದೆ. ಒಂದು ಗೊಂಚಲಿನಲ್ಲಿ ಒಂದೇ ಆಕಾರಾದ 20 ರಿಂದ 25 ಹಣ್ಣುಗಳಿರುತ್ತವೆ. ಕೆಂಪು ಬಣ್ಣನದಲ್ಲಿ ಕಂಗೋಳಿಸುವ ಈ ಒಂದು ದ್ರಾಕ್ಷಿ ಸುಮಾರು 20 ಗ್ರಾಂ ತೂಕವಿರುತ್ತದೆ.

ಕಪ್ಪು ಕಲ್ಲಂಗಡಿ ಬೆಲೆ 4.4 ಲಕ್ಷ

ಈ ಕಪ್ಪು  ಕಲ್ಲಂಗಡಿ ಜಪಾನ್ ನ ಹೊಕ್ಕೈಡ್ ದ್ವೀಪದಲ್ಲಿ ಮಾತ್ರ ಬೆಳೆಯುತ್ತದೆ. ಪ್ರತಿ ಕಲ್ಲಂಗಡಿ ಸುಮಾರು ೧೧ ಕೆಜಿ ತೂಕ ಹೊಂದಿರುತ್ತವೆ. ಮತ್ತು ಅನನ್ಯ ಸಿಹಿ, ಸ್ವಾದ ಮತ್ತು ರುಚಿಯನ್ನು ಹೊಂದಿದೆ. ಡ್ರೂಕ್ ಕಲ್ಲಂಗಡಿಗಳು ಜಪಾನ್ ನಲ್ಲಿ ಹರಾಜಿನಲ್ಲಿ ದುಬಾರಿ ಬೆಲೆಗೆ ಮಾರಾಟವಾಗುತ್ತವೆ., ಪ್ರತಿ ಹಣ್ಣು 4.4 ಲಕ್ಷ ರೂಪಾಯಿಗೆ ಮಾರಾಟವಾಗಿ ದಾಖಲಾಗಿದೆ.

ಜಪಾನಿನ ಈ ಮಾವಿನವ ಹಣ್ಣಿನ ಬೆಲೆ ಕೆಜಿಗೆ 2.50 ಲಕ್ಷ

ನಮ್ಮಲ್ಲಿ ಮಾವಿನ ಹಣ್ಣಿನ ಬೆಲೆ ಕೆಜಿಗೆ ನಾಲ್ಕೈದು ನೂರು ರೂಪಾಯಿಗೆ ಸಿಗುವ ಹಣ್ಣುಗಳಿಗೆ ಇಷ್ಟೊಂದು ದುಬಾರಿಯಾ ಎಂದು ಹೌಹೌರುತ್ತೇವೆ. ಆದರೆ ಜಪಾನಿನ ಮಿಜಿಯಾಕಿ ಮಾವಿನ ಹಣ್ಣಿನ ಬೆಲೆ 2.5 ಲಕ್ಷ ರೂಪಾಯಿ. ಹೌದು. ನೀವು ಓದಿದ್ದು ನಿಜ. ಜಗತ್ತಿನ ಅತೀ ದುಬಾರಿ ಮಾವಿನ ಹಣ್ಣುಗಳ ಸಾಲಿಗೆ ಮಿಜಿಯಾಕಿ ಹಣ್ಣು ಸೇರುತ್ತದೆ. ಇತ್ತೀಚೆಗೆ ಭಾರತದ ಮಧ್ಯಪ್ರದೇಶದಲ್ಲೊಂದು ದಂಪತಿ ಈ ಹಣ್ಣನ್ನು ಬೆಳೆ ಸುದ್ದಿಯಾಗಿದ್ದು ತಮಗೆಲ್ಲರಿಗೂ ಗೊತ್ತಿದ್ದ ಸಂಗತಿ. ಈ ಮಾವಿನ ತೋಟದಲ್ಲಿರುವ ಈ ಮಾವಿನ ತಳಿಯ ಮರದ ಕಾವಲಿಗೆ ಆರು ನಾಯಿಗಳು ಹಾಗೂ ಜನ ಭದ್ರತಾ ಸಿಬ್ಬಂದಿಗಳನ್ನು ನೇಮಸಿದ್ದರು.

ಚೌಕ ಕಲ್ಲಂಗಡಿ ಬೆಲೆ 61 ಸಾವಿರ

ಚೌಕ ಕಲ್ಲಂಗಡಿಯು ಜಪಾನಿನಲ್ಲಿ ಬೆಳೆಯುತ್ತದೆ. ಇದು ಸಣ್ಣ ಕಾಯಿಯಿರುವಾಗಲೇ ಅದನ್ನು ಚೌಕಾಕಾರದ ಬಾಕ್ಸ್ ಮಾಡಿ ಹಣ್ಣನ್ನು ಅದರಲ್ಲಿಡಲಾಗುತ್ತದೆ. ನಂತರ ಬೆಳೆದಂತೆ ಆ ಹಣ್ಣು ಚೌಕಾಕಾರದ ಗಾತ್ರಹೊಂದುತ್ತದೆ. ಇದನ್ನು ಹೆಚ್ಚಾಗಿ ಶೃಂಗಾರಕ್ಕಾಗಿ, ಕೊಡುಗೆ ನೀಡಲು ಖರೀದಿಸಲಾಗುತ್ತದೆ. ಈ ಹಣ್ಣು 61 ಸಾವಿರ ರೂಪಾಯಿಗೆ ಮಾರಾಟವಾದ ಉದಾಹರಣೆ ಜಪಾನಿನಲ್ಲಿದೆ.

ಸೆಂಬಿಕಿಯಾ ಕ್ವೀನ್ ಸ್ಟ್ರಾಬೆರಿ

12 ಸೆಂಬಿಕಿಯಾ ಕ್ವೀನ್ ಸ್ಟ್ರಾಬೆರಿಗಳ ಪ್ಯಾಕ್ ಬೆಲೆ ಸುಮಾರು  6,500 ರೂಪಾಯಿ. ಆದರೆ ಈ ಸ್ಟ್ರಾಬೆರಿಗಳನ್ನು ಸಾಮಾನ್ಯಸ್ಟ್ರಾಬೆರಿಗಳಿಗಿಂತ ಭಿನ್ನವಾಗಿಸುವುದು ಅವುಗಳ ಬಣ್ಣ, ರುಚಿ, ವಿನ್ಯಾಸ ಮತ್ತು ಆಕಾರದಿಂದಾಗಿ. ಹಾಗಾಗಿ ಈ ಹಣ್ಣಿನ ಬೆಲೆ ಅಷ್ಟೊಂದು ದುಬಾರಿ.

ಡೆಕೊಪೊನ್ ಆರೆಂಜ್

ಡೆಕೊಪೊನ್ ಒಂದು ಬೀಜರಹಿತ ಮತ್ತು ಸಿಹಿಯಲ್ಲಿಯೂ ವೈವಿಧ್ಯಮಯ ಕಿತ್ತಳೆಯ ತಳಿಯಾಗಿದೆ. ಇದು 1972 ರಲ್ಲಿ ಜಪಾನ್ ನಲ್ಲಿ ಅಭಿವೃದ್ಧಿಪಡಿಸಲಾದ ಕಿಯೋಮಿ ಮತ್ತು ಪೊಂಕನ್ ನಡುವಿನ ಹೈಬ್ರಿಡ್ ಆಗಿದೆ. ಅತ್ಯಂತ ಬೆಲೆಬಾಳುವ ಮತ್ತು  ಹಣ್ಣಾಗಿದೆ. ಇದ 6 ಸಾವಿರ ರೂಪಾಯಿಗೆ ಒಂದರಂತೆ ಮಾರಾಟವಾಗಿದ್ದು ದಾಖಲಾಗಿದೆ.

ಸೇಕಾಯಿ ಇಚಿ ಸೇಬುಹಣ್ಣು

ದಿನಕ್ಕೆ ಒಂದು ಸೇಬು ವೈದ್ಯರನ್ನು ದೂರವಿರಿಸುತ್ತದೆ' ಎಂಬುದು ನಮಗೆಲ್ಲರಿಗೂ ತಿಳಿದಿರುವ ಸಾಮಾನ್ಯ ಗಾದೆಯಾಗಿದೆ. ಆದರೆ ನಾವು ಸೆಕೈ ಇಚಿ ಸೇಬಿನ ಬಗ್ಗೆ ಮಾತನಾಡುವಾಗ, ಅದು ನಿಜವಾಗಿಯೂ ಸಾಮಾನ್ಯವಲ್ಲ. ಒಂದು ಸಿಂಗಲ್ ಸೆಕೈ ಇಚಿ ಸೇಬು ಸುಮಾರು ರೂ 1600 ರೂಪಾಯಿಗೆ ಮಾರಾಟವಾಗಿ ದಾಖಲಾಗಿದೆ.