News

ಕೊರೋನಾ ಸೋಂಕಿಗೆ ಬೆದರದೆ ಬಿತ್ತನೆಯಲ್ಲಿ ತೊಡಗಿದ ರೈತರು

06 July, 2020 9:45 AM IST By:

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರುತ್ತಲೇ ಇದೆ. ಇಂತಹ ಭಯದ ವಾತಾವರಣದಲ್ಲಿ ರೈತಬಾಂಧವರು ಕೊರೋನಾ ಸೋಂಕಿಗೆ ಬೆದರದೆ ಬಿತ್ತನೆಯಲ್ಲಿ ತೊಡಗಿದ್ದಕ್ಕೆ ರೈತರ ಧೈರ್ಯ ಮೆಚ್ಚಲೇ ಬೇಕು.

ಈ ಬಾರಿ ಸಕಾಲಕ್ಕೆ ಮುಂಗಾರು ಮಳೆಯಾಗಿದ್ದರಿಂದ ದೇಶಾದ್ಯಂತ ರೈತ ಸಮೂಹ ಮುಂಗಾರು ಬಿತ್ತನೆಗೆ ಮುಂದಾಗಿದ್ದಾರೆ. ಕಳೆದ ವರ್ಷಕ್ಕೆ  ಹೋಲಿಕೆ ಮಾಡಿದರೆ ಪ್ರಸಕ್ತ ವರ್ಷ ಮುಂಗಾರು ಮಳೆ ಸಕಾಲಕ್ಕೆ ಸುರಿದಿದೆ.

ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಮುಂಗಾರು ಪ್ರವೇಶಮಾಡಿ ಉತ್ತಮ ಮಳೆಯಾಗುತ್ತಿದೆ. ಇದರಿಂದಾಗಿ ಬಿತ್ತನೆ ಕಾರ್ಯವೂ ಸಹ ಚುರುಕುಗೊಂಡಿದೆ. ಕೊರೋನಾ ಸೋಂಕಿನ ಭಯದಿಂದ ವಲಸಿಗರು ಗ್ರಾಮಗಳತ್ತ ಮುಖ ಮಾಡಿದ್ದರಿಂದ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.

ಕಳೆದ ವರ್ಷಕ್ಕೆ ಜುಲೈ 7ರವರೆಗೆ ಹೋಲಿಸಿದರೆ ಪ್ರಸಕ್ತ ವರ್ಷ ಬಿತ್ತನೆ ದುಪ್ಪಟ್ಟಾಗಿದೆ. ದೇಶದಲ್ಲಿ  ಈವರೆಗೆ 432.97 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಕಾರ್ಯ ಮುಗಿದಿದೆ. ಕಳೆದ ವರ್ಷ ಇದೇ ಸಮಯದಲ್ಲಿ 230 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿತ್ತು.   

ಈ ಬಾರಿ ಉತ್ತಮ ಮಳೆ ಸುರಿದಿದ್ದರಿಂದ ಬಿತ್ತನೆ ಪ್ರಮಾಣ ಶೇ 88ರಷ್ಟು ಹೆಚ್ಚಾಗಿದೆ. ಎಣ್ಣೆ ಬೀಜಗಳು ಹಾಗೂ ಬೇಳೆಕಾಳುಗಳು ಈ ಪೈಕಿ ಪ್ರಮುಖವಾಗಿವೆ. ಮುಂಗಾರಿನ ಮುಖ್ಯ ಬೆಳೆ ಭತ್ತ ಹಾಗೂ ಇತರೆ ಬೆಳೆಗಳಾದ ತೊಗರಿಬೇಳೆ, ಸೋಯಾ, ಜೋಳ, ಸಜ್ಜೆ ಈ ವರ್ಷ ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾಗಿವೆ. 

. ಕಳೆದ ವರ್ಷ 2.78 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆಯಲಾಗಿತ್ತು. ಈ ವರ್ಷ 16.56 ಲಕ್ಷ ಎಕರೆಯಲ್ಲಿ ತೊಗರಿಬೇಳೆ ಬೆಳೆಯಲಾಗುತ್ತಿದೆ.

ಸೋಯಾಬೀನ್  ಕಳೆದ ವರ್ಷ 16.43 ಲಕ್ಷ ಎಕರೆಯಲ್ಲಿ ಬೆಳೆಯಲಾಗಿತ್ತು. ಆದರೆ ಈ ವರ್ಷ ದಾಖಲೆಯ 81.81 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ.

 ಕಳೆದ ವರ್ಷ 7.85 ಲಕ್ಷ ಎಕರೆಯಲ್ಲಿದ್ದ ಸಜ್ಜೆ ಈ ಬಾರಿ 17.90 ಲಕ್ಷ ಎಕರೆಗೆ ವಿಸ್ತರಣೆಯಾಗಿದೆ. ಜೋಳ 4.55 ಲಕ್ಷ ಎಕರೆಯಲ್ಲಿ ಬಿತ್ತಲಾಗಿದೆ. ಭತ್ತ 68.08 ಲಕ್ಷ ಎಕರೆ ಪ್ರದೇಶಕ್ಕೆ (ಕಳೆದ ವರ್ಷ 49.23 ಲಕ್ಷ ಎಕರೆ) ವಿಸ್ತರಿಸಲಾಗಿದೆ. ಹತ್ತಿ 91.7 ಲಕ್ಷ ಹೆಕ್ಟೇರ್‌ನಲ್ಲಿ (ಶೇ 100ರಷ್ಟು) ಹಾಗೂ ಮೆಕ್ಕೆಜೋಳ 45.58 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ.