News

ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಗಿ ಖರೀದಿ ಆರಂಭ

14 December, 2020 7:15 AM IST By:

 ರಾಗಿ ಬೆಳೆಯುವ ರೈತರಿಗೆ ಸಂತಸದ ಸುದ್ದಿ. ಸರ್ಕಾರವು ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರಾಗಿ ಬೆಳೆ ಖರೀದಿಸಲು ಮುಂದಾಗಿದೆ.

ರೈತರು ಬೆಳೆದಂತಹ ರಾಗಿಗೆ ಮಾರ್ಕೆಟ್ನಲ್ಲಿ ಆಗುವಂತಹ ದರಗಳ ಕುಸಿತ ಹಾಗೂ ಏರಿಳಿತದಿಂದ ರಕ್ಷಿಸಲು ಸರ್ಕಾರ ರೈತರಿಂದ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರಾಗಿಯನ್ನು ಖರೀದಿಸಲು ನಿರ್ಧರಿಸಿದೆ.  ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿ ಕರ್ನಾಟಕ ನಾಗರಿಕ ಮತ್ತು ಆಹಾರ ಸರಬರಾಜು ನಿಗಮವನ್ನು ಖರೀದಿ ಏಜೆನ್ಸಿಯಾಗಿ ನೇಮಕಮಾಡಿದೆ. ಸರ್ಕಾರವು ಪ್ರತಿ quintal  ರಾಗಿಗೆ 3,295 ರೂಪಾಯಿಯನ್ನು ನಿಗದಿಪಡಿಸಲಾಗಿದೆ. ಪ್ರತಿ ರೈತರಿಂದ ಎಕರೆಗೆ 10 quintal ದಿಂದ  ಗರಿಷ್ಠ 50 quintal ಖರೀದಿಸಲಾಗುವುದು.

 ರೈತರು ಇದಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಕೃಷಿ ಇಲಾಖೆಯಿಂದ ಪಡೆದು ಅರ್ಜಿಯನ್ನು ಭರ್ತಿ ಮಾಡಿ ಜನವರಿ 31 ರೊಳಗೆ ನೋಂದಣಿ ಕೇಂದ್ರಗಳಿಗೆ ಸಲ್ಲಿಸಬೇಕು. ನೋಂದಣಿ  ಮಾಡಿದ ರೈತರಿಂದ ಮಾರ್ಚ್ 15ರವರೆಗೂ ರಾಗಿಯನ್ನು ಖರೀದಿಸಲಾಗುವುದು.

ನೊಂದಣಿಗಾಗಿ ರೈತರು ಇವರನ್ನು ಸಂಪರ್ಕಿಸಬಹುದು. ಕೊಲಾರ ಜಿಲ್ಲೆಯ ರೈತರು ರಾಗಿ ಬೆಳೆ ಬೆಂಬಲ ಬೆಲೆ ಯೋಜನೆಯಿ ನೋಂದಾಯಿಸಲು  ಜೆ. ವಿ. ರಾಜಪ್ಪ- ಮಾಲೂರು=9964708276, ಕಲೀಂ ಉಲ್ಲಾ ಷರೀಫ್ -ಬಂಗಾರಪೇಟೆ =9945066403,  ಎಸ.ಎನ್.  ವೆಂಕಟೇಶ್ ಮುಳಬಾಗಿಲು=9343147460, ಕಚೇರಿ ದೂರವಾಣಿ ಸಂಖ್ಯೆ -08152-222614, 9448496027 ಗೆ ಸಂಪರ್ಕಿಸಬಹುದು.