ರಾಜ್ಯದ ರೈತರ ಆದಾಯವನ್ನು ಡಬಲ್ ಮಾಡುವ ನಿಟ್ಟಿನಲ್ಲಿ ರಾಜ್ಯದ 5 ಭಾಗಗಳಲ್ಲಿ ರಫ್ತು ಉದ್ಯಮ ಕೇಂದ್ರಗಳನ್ನು ತೆರೆಯುವುದಾಗಿ ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಕೃಷಿ ಇಲಾಖೆ, ಜಲಾನಯನ ಅಭಿವೃದ್ಧಿ ಇಲಾಖೆ, ಕೆಫೆಕ್ ಹಾಗೂ ಅಪೆಡ್ ಇವರುಗಳ ಸಹಯೋಗದೊಂದಿಗೆ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಡಾ. ಬಾಬು ರಾಜೇಂದ್ರ ಪ್ರಸಾದ್ ಸಭಾಂಗಣದಲ್ಲಿ ಆಯೋಜಿಸಿದ್ದ 'ರೈತ ಉತ್ಪಾದಕ ಸಂಸ್ಥೆಗಳು ಹಾಗೂ ರಫ್ತುದಾರರ ಸಮಾವೇಶ' ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
5 ರಫ್ತು ಉದ್ಯಮ ಕೇಂದ್ರಗಳನ್ನು ಸ್ಥಾಪನೆ ಮಾಡುವ ಮೊದಲ ಭಾಗವಾಗಿ ಪ್ರಥಮವೆಂಬಂತೆ ಮೈಸೂರು ಜಿಲ್ಲೆಯ ನಾಗೇನಹಳ್ಳಿ, ವಿಜಯಪುರ ಜಿಲ್ಲೆಯ ಇಂಡಿ, , ಚಿಕ್ಕಬಳ್ಳಾಪುರದ ವರದಗೇರಾ, ಹಾವೇರಿಯ ಹುನುಮನಮಟ್ಟಿ, ಮತ್ತು ಶಿರಸಿ ತಾಲೂಕಿನ ಬನವಾಸಿಯಲ್ಲಿ ರಫ್ತು ಉದ್ಯಮ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲು ಸುಮಾರು 70 ಲಕ್ಷ ರೈತರಿದ್ದಾರೆ. ಅವರು 1 ಹೆಕ್ಟರ್‌ಗಿಂತ ಕಡಿಮೆ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಹೀಗಾಗಿ ಅವರು ಬೆಳೆದಂತ ಬೆಳೆಯನ್ನು ರಫ್ತು ಮಾಡುವ ಶಕ್ತಿ ಅವರಿಗಿಲ್ಲ..ಹೀಗಾಗಿ ಅವರು FPO ಗಳ ಮೂಲಕ ತಾವು ಬೆಳೆದಂತ ಬೆಳೆಯನ್ನು ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡು ಮಾರಾಟ ಮಾಡಬೇಕು. ಹೀಗೆ ಅವರ ಆದಾಯ ಕೂಡ ದ್ವಿಗುಣಗೊಳ್ಳಬೇಕು ಎಂದು ಸಚಿವರು ಹೇಳಿದರು.
ಇತ್ತ ರಾಜ್ಯ ಕೃಷಿ ಇಲಾಖೆ ಸ್ಥಾಫಿಸಿರುವ ಕೆಪೆಕ್ ರಾಜ್ಯದ ಅನ್ನದಾತರು ಹಾಗೂ ಮಾರುಕಟ್ಟೆಯ ನಡುವೆ ಸಂಪರ್ಕ್ ಸಾಧನವಾಗೆ ಕೆಲಸ ಮಾಡುತ್ತಿದೆ. ಇದರಿಂದ ನಾವು ಹಳ್ಳಿಯಲ್ಲಿ ಬೆಳೆದ ಉತ್ಪನ್ನಗಳನ್ನು ದೂರದ ದೊಡ್ಡ ದೊಡ್ಡ ನಗರಗಳಲ್ಲಿ ಕೂಡ ಮಾರಾಟ ಮಾಡಲು ಸಾಧ್ಯವಾಗುತ್ತದೆ ಎಂದು ಸಚಿವರು ತಿಳಿಸಿದರು.
ನಿಮ್ಮ ಅಕೌಂಟ್‌ನಲ್ಲಿ ಮಿನಿಮಮ್ ಬ್ಯಾಲೆನ್ಸ್ ಎಷ್ಟು ಇರಬೇಕು ತಿಳಿದುಕೊಳ್ಳಿ, ಇಲ್ಲದಿದ್ದರೆ ಬ್ಯಾಂಕ್ ದಂಡ ವಿಧಿಸುತ್ತದೆ
ಧಾರವಾಡ ಕೃಷಿ ಮೇಳ 2022ಕ್ಕೆ ಡೇಟ್ ಫಿಕ್ಸ್..ಈ ಬಾರಿಯ ವಿಶೇಷತೆಯೇನು?
ಕಳೆದ ಕೆಲವು ವರ್ಷಗಳಿಂದ ಕೋವಿಡ್ ಸಾಂಕ್ರಾಮಿಕ ಹಾಗೂ ಮಳೆ ಸೇರಿದಂತೆ ಇನ್ನಿತರ ಕಾರಣಗಳಿಂದ ಈ ಬಾರಿಯೂ ಕೂಡ ಕೃಷಿ ಮೇಳೆ ರದ್ದಾಯ್ತು ಎನ್ನಲಾಗಿತ್ತು. ಆದರೆ ಮತ್ತೇ ಕೃಷಿ ಮೇಳ ನಡೆಸುವ ನಿರ್ಧಾರಕ್ಕೆ ಬಂದಿದ್ದು ಸಾಕಷ್ಟು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಈ ಬಾರಿಯ ವಿಶೇಷತೆಗಳೆನು ಗೊತ್ತಾ..?
“ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ತಾಂತ್ರಿಕತೆಗಳು” ಎಂಬ ವಿಷಯಾಧಾರಿತವಾಗಿ ಈ ಬಾರಿಯ ಕೃಷಿ ಮೇಳವನ್ನು ಆಯೋಜಿಸಲಾಗುತ್ತಿದ್ದು, ಈ ಕುರಿತಂತೆ ಸಾಕಷ್ಟು ಗೋಷ್ಠಿಗಳನ್ನು ಕೂಡ ಆಯೋಜನೆ ಮಾಡಲಾಗುತ್ತಿದೆ. ಜೊತೆ ಜೊತೆಗೆ ನಿರಾವರಿಗಾಗಿ ವಿನ್ಯಾಸಿಸಲಾದ ಹೊಸ ತಂತ್ರಜ್ಞಾನ ಹಾಗೂ ವಸ್ತುಗಳು, ಕೃಷಿ ಯಂತ್ರೋಪಕರಣಗಳು. ಹಾಗೂ ಇನ್ನಿತರ ಕೃಷಿ ಸಂಬಂಧಿತ ವಸ್ತುಗಳನ್ನು ರೈತರಿಗೆ ಪ್ರದರ್ಶನ ಮಾಡುವ ನಿಟ್ಟಿನಲ್ಲಿ ಎಲ್ಲ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಸಜ್ಜುಗೊಳಿಸಲಾಗುತ್ತಿದೆ.