News

ಆನೆ ಟಾಸ್ಕ್‌ಪೋರ್ಸ್‌ನಿಂದ ಕಾಡಾನೆ- ಮಾನವ ಸಂಘರ್ಷಕ್ಕೆ ಕಡಿವಾಣ

08 December, 2022 2:40 PM IST By: Hitesh
Elephant Taskforce to Wilderness- A bridge to human conflict

ನೆ ಟಾಸ್ಕ್ ಪೋರ್ಸ್‌ ರಚನೆ ಮಾಡಿರುವುದರಿಂದಾಗಿ ಮುಂದಿನ ದಿನಗಳಲ್ಲಿ  ಕಾಡಾನೆ ಹಾಗೂ ಮಾನವ ಸಂಘರ್ಷ ತಪ್ಪಲಿದೆ ಎಂದು ಅರಣ್ಯ, ಜೀವ ವೈವಿದ್ಯ ಮತ್ತು ಪರಿಸರ ಇಲಾಖೆ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಜಾವೇದ್‌ಅಕ್ತರ್ ತಿಳಿಸಿದರು.

ಸಕಲೇಶಪುರದಲ್ಲಿ ಆನೆ ಟಾಸ್ಕ್‌ಪೋರ್ಸ್‌ಗೆ  ಚಾಲನೆ ನೀಡಿ ಅವರು ಮಾತನಾಡಿದರು. ಟಾಸ್ಕ್‌ಪೋರ್ಸ್‌ ರಚನೆ ಮಾಡಿರುವುದರಿಂದಾಗಿ ಬೆಳೆ ಹಾನಿ ನಿಯಂತ್ರಣವೂ ಆಗಲಿದೆ ಎಂದರು.

ಕಾಡಾನೆ ನಿಯಂತ್ರಣ ಹಾಗೂ ಸಾರ್ವಜನಿಕರಿಗೆ ಆನೆಗಳ ಚಲನ ವಲನಗಳ ಬಗ್ಗೆ ಎಚ್ಚರಿಕೆ ನೀಡುವುದಕ್ಕೆ ಎಸ್ಎಂಎಸ್‌ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಆನೆಗಳ ಚಲನವಲನ ಕಂಡುಬಂದರೆ, ಲೊಕೇಷನ್ ಹಂಚಿಕೆ, ನಾಮಫಲಕಗಳ ಮೂಲಕ ಎಚ್ಚರಿಕೆ ಸಂದೇಶದಲ್ಲಿ ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.  

ಟಾಸ್ಕ್‌ಪೋರ್ಸ್‌ಗೆ ಒಬ್ಬರು ಡಿಸಿಎಫ್‌, ಎಸಿಎಫ್‌, ಆರ್‌ಎಫ್‌ಗಳು ಸೇರಿದಂತೆ 15 ಜನ ಅಧಿಕಾರಿಗಳು ಸೇರಿದಂತೆ ಒಟ್ಟಾರೆ 32 ಮಂದಿ ವಾಚರ್‌ಗಳನ್ನು ನೇಮಕ ಮಾಡಲಾಗಿದೆ.

ಅಲ್ಲದೇ ಸಹಾಯವಾಣಿ (9480817474) 24X7 ಕಾರ್ಯ ನಿರ್ವಹಿಸಲಿದೆ ಎಂದರು.

ಮಾಂಡೌಸ್‌ ಚಂಡಮಾರುತ: ರಾಜ್ಯದ ವಿವಿಧ ಜಿಲ್ಲೆಯಲ್ಲಿ ಧಾರಾಕಾರ ಮಳೆ

ರಾಜ್ಯದಲ್ಲಿ ಅಂದಾಜು 6 ಸಾವಿರಕ್ಕೂ ಹೆಚ್ಚು ಆನೆಗಳಿದ್ದು, ಎಲ್ಲಾ ಆನೆಗಳನ್ನು ಸ್ಥಳಾಂತರ ಮಾಡುವುದಕ್ಕೆ ಸಾಧ್ಯವಿಲ್ಲ.

ಸ್ಥಳಾಂತರ ಮಾಡುವುದಾದರೂ, ಎಲ್ಲಿಗೆ ಸ್ಥಳಾಂತರ ಮಾಡಬೇಕು ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಒಂದು ಆನೆಯನ್ನು ಹಿಡಿದು ಸ್ಥಳಾಂತರ ಮಾಡುವುದಕ್ಕೆ ಕೇಂದ್ರ ಸರ್ಕಾರದ ಅನುಮತಿ ಬೇಕು.

ಯಾವುದೇ ಒತ್ತಡಗಳು ಬಂದರೂ ಅರಣ್ಯ ಇಲಾಖೆ ಕಾನೂನು ಬದ್ಧವಾಗಿಯೇ ನಿರ್ಣಯಗಳನ್ನು ಕೈಗೊಳ್ಳಬೇಕು ಎಂದರು.

ಇನ್ನು ಕಾಯ್ದಿರಿಸಿದ ರಕ್ಷಿತ ಅರಣ್ಯದಲ್ಲಿ ಸ್ಥಳೀಯ ಸಂಸ್ಥೆಗಳು ರಸ್ತೆ, ಕುಡಿಯುವ ನೀರಿನ ಪೈಪ್‌ಲೈನ್‌ಸೇರಿದಂತೆ ಯಾವುದೇ ಅಭಿವೃದ್ಧಿ ಯೋಜನೆಗಳನ್ನು

ಮಾಡುವುದಕ್ಕೆ ಕೇಂದ್ರ ಪರಿಸರ ಮಂತ್ರಾಲಯದ ಅನುಮತಿ ಕಡ್ಡಾಯವಾಗಿದೆ.

ಅರಣ್ಯ ಇಲಾಖೆಯ ಸ್ಥಳೀಯ ಮಾತ್ರವಲ್ಲ ರಾಜ್ಯ ಮಟ್ಟದ ಅಧಿಕಾರಿಗಳೂ ಸಹ ಅನುಮತಿ ನೀಡುವುದಕ್ಕೆ ಸಾಧ್ಯವಿಲ್ಲ.

ಆದ್ದರಿಂದ ಹಲವೆಡೆ ಸಮಸ್ಯೆಗಳು ಉದ್ಭ ವಿಸಿದ್ದು, ಈ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲೇ ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವನ್ನು ಕೋರಲಾಗಿದೆ ಎಂದು ತಿಳಿಸಿದರು.  

Elephant Taskforce to Wilderness- A bridge to human conflict

ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್ ಪುಷ್ಕರ್, ಸಿಸಿಎಫ್‌ಸಿದ್ದರಾಮಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಎನ್‌.

ಬಸವರಾಜು, ಎಎಸ್‌ಪಿ ಎಚ್‌.ಎನ್‌. ಮಿಧುನ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್‌ಹಾಗೂ ಪ್ರಭು, ವಲಯ ಅರಣ್ಯ ಅಧಿಕಾರಿಗಳಾದ ಎಸ್‌.ಎಲ್‌. ಶಿಲ್ಪಾ, ಕಾಮರೇಕರ್‌ ಈ ಸಂದರ್ಭದಲ್ಲಿ ಹಾಜರಿದ್ದರು.