News

ರಾಜ್ಯದ ಜನತೆಗೆ ಮತ್ತೆ ಬೆಲೆ ಏರಿಕೆಯ ಶಾಕ್‌, ವಿದ್ಯುತ್ ದರ ಹೆಚ್ಚಳಕ್ಕೆ ನಿರ್ಧಾರ!

24 September, 2022 2:43 PM IST By: Kalmesh T
Electricity rate increase again

ರಾಜ್ಯದ ಜನರಿಗೆ ಮತ್ತೆ ವಿದ್ಯುತ್ ದರ ಹೆಚ್ಚಳದ ಆತಂಕ ಎದುರಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಇಂಧನ ಸರಿದೂಗಿಸುವ ವೆಚ್ಚ ಪರಿಷ್ಕರಣೆ ನಡೆದಿದೆ.

ಇದನ್ನೂ ಓದಿರಿ: ಗುಡ್‌ನ್ಯೂಸ್‌: ಗಂಗಾ ಕಲ್ಯಾಣ ಯೋಜನೆಯಡಿ ಅರ್ಜಿ ಆಹ್ವಾನ, ₹ 3.50ಲಕ್ಷ ಸಹಾಯಧನ!

ಕೊರೊನಾದಿಂದ ಬಳಲುತ್ತಿದ್ದ ಜನ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ, ಈ ನಡುವೆಯೇ ಜನರಿಗೆ ಮತ್ತೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಈಗಾಗಲೇ ದೈನಂದಿನ ವಸ್ತುಗಳ ಬೆಲೆಗಳು ಮುಗಿಲು ಮುಟ್ಟುತ್ತಿದ್ದು, ಜನರು ತತ್ತರಿಸುತ್ತಿದ್ದಾರೆ. ಮೊನ್ನೆಯಷ್ಟೇ LPG  ದರ ದುಬಾರಿಯಾಗಿತ್ತು.

ಈ ನಡುವೆ ವಿದ್ಯುತ್, ಹಾಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಮತ್ತೆ ಏರಿಕೆಯಾಗುವ ಮುನ್ಸೂಚನೆ ಸಿಕ್ಕಿದೆ. ಇದರ ಬೆನ್ನಲ್ಲೇ ವಿದ್ಯುತ್ ಹಾಗೂ ಅಗತ್ಯ ವಸ್ತುಗಳ ದರ ಏರಿಕೆಯಾದರೆ ಜನರ ಜೇಬಿಗೆ ಮತ್ತಷ್ಟು ಹೊರೆ ಬೀಳಲಿದೆ. 

ಬೆಸ್ಕಾಂ, ಮೆಸ್ಕಾಂ, ಸೆಸ್ಕಾಂ, ಹೆಸ್ಕಾಂ, ಜೆಸ್ಕಾಂನಿಂದ ದರ ಹೆಚ್ಚಳಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ. ಪ್ರತಿ ವರ್ಷವೂ ಪ್ಯೂಯೆಲ್ ಅಡ್ಡೆಸ್ಟ್‌ಮೆಂಟ್ ಚಾರ್ಜ್ (FAC) ಪರಿಷ್ಕರಣೆ ಮಾಡಲಾಗುತ್ತೆ.

ಈ ದರ ಪ್ರತಿ ಯೂನಿಟ್‌ಗೆ ಏರಿಕೆಯಾಗುವ ಅಥವಾ ಇಳಿಕೆಯಾಗುವ ಸಾಧ್ಯತೆ ಇರುತ್ತದೆ.

ಕಳೆದ ಬಾರಿ ಪ್ರತಿ ಯೂನಿಟ್ ಪೈಸೆ ಇಳಿಕೆಯಾಗಿತ್ತು. ಆದರೆ ಈ ಬಾರಿ 46 ಪೈಸೆ ಏರಿಕೆ ಆಗುವ ಸಾಧ್ಯತೆ ಇದೆ. FAC ದರ ಹೆಚ್ಚಳವು ಮುಂ ತಿಂಗಳ ಕರೆಂಟ್ ಬಿಲ್‌ನಲ್ಲಿ ಪರಿಷ್ಕರಣೆಯಾಗಲಿದೆ. 3 ತಿಂಗಳ ಬಳಿಕ ದರ ಕಡಿಮೆಯಾಗಬಹುದು ಅಥವಾ ಎಂದಿನಂತೆಯೇ ಇರಲೂಬಹುದು.

ಸರ್ಕಾರದಿಂದ ಗುಡ್‌ನ್ಯೂಸ್‌: ಇನ್ಮುಂದೆ ಡ್ರೈವಿಂಗ್‌ ಲೈಸೆನ್ಸ್‌ ಪಡೆಯಲು RTOಗೆ ಹೋಗಬೇಕಿಲ್ಲ!

ಎಷ್ಟು ಹೆಚ್ಚಳಕ್ಕೆ ಪ್ರಸ್ತಾವನೆ ನೀಡಲಾಗಿದೆ?

  • ಬೆಸ್ಕಾಂನಿಂದ 80.04 ಪೈಸೆ ಹೆಚ್ಚಳಕ್ಕೆ ಪ್ರಸ್ತಾವನೆ
  • ಮೆಸ್ಕಾಂನಿಂದ 55.68 ಪೈಸೆ ಹೆಚ್ಚಳಕ್ಕೆ ಪ್ರಸ್ತಾವನೆ
  • ಸೆಸ್ಕಾಂನಿಂದ 70.61 ಪೈಸೆ ಹೆಚ್ಚಳಕ್ಕೆ ಪ್ರಸ್ತಾವನೆ
  • ಹೆಸ್ಕಾಂನಿಂದ 81.78 ಪೈಸೆ ಹೆಚ್ಚಳಕ್ಕೆ ಪ್ರಸ್ತಾವನೆ

ICAR ನ KRITAGYA ಕಾರ್ಯಾಗಾರ; ₹5 ಲಕ್ಷ ಗೆಲ್ಲುವ ಭರ್ಜರಿ ಅವಕಾಶ! ಯಾರು ಅರ್ಹರು? ಅರ್ಜಿ ಸಲ್ಲಿಕೆ ಹೇಗೆ ತಿಳಿಯಿರಿ..

ಸಾಧಕ ಬಾಧಕ ನೋಡಿ ಬಳಿಕ ನಿರ್ಧಾರ- ಬೊಮ್ಮಾಯಿ

ಸಾಧಕ ಬಾಧಕ ನೋಡಿ ಬಳಿಕ ನಿರ್ಧಾರ ತಗೆದುಕೊಳ್ಳೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.