ಇಂಡೊನೇಷ್ಯಾ ತಾಳೆ ಎಣ್ಣೆ ರಫ್ತಿಗೆ ನಿಷೇಧ ವಿಧಿಸಿರುವುದರಿಂದ ಭಾರತ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಂತಹ ಖರೀದಿದಾರ ರಾಷ್ಟ್ರಗಳಿಗೆ ಪರ್ಯಾಯ ಆಯ್ಕೆಗಳು ಸೀಮಿತವಾಗಿವೆ. ಈ ಕೊರತೆಯನ್ನು ನಿಭಾಯಿಸುವುದು ಕಷ್ಟ ಎಂದು ತಜ್ಞರು ಹೇಳಿದ ಬೆನ್ನಲ್ಲೆ ಅಡುಗೆ ಎಣ್ಣೆಯ ದರದಲ್ಲಿ ಭಾರೀ ಏರಿಕೆಯಾಗಲಿದೆ ಎಂದು ಚರ್ಚೆಗಳೆದ್ದಿದ್ದವು.. ಆದರೆ ಸದ್ಯ ಗ್ರಾಕರ ಸಚಿವಾಲಯ ರಿಲ್ಯಾಕ್ಸ್ ಆಗುವಂತಹ ಸುದ್ದಿಯೊಂದನ್ನ ನೀಡಿದ್ದು ಸದ್ಯ ಭಾರತದಲ್ಲಿ ಅಡುಗೆ ಎಣ್ಣೆಯ ದರದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಎನ್ನಲಾಗಿದೆ.
ಗುಡ್‌ನ್ಯೂಸ್: ದೇಶಾದ್ಯಂತ ಬಲವರ್ಧಿತ ಅಕ್ಕಿ ವಿತರಣೆಗೆ ಸಂಪುಟ ಅಸ್ತು..!
EPFO ಹೊಸ ಮಾರ್ಗಸೂಚಿ ರಿಲೀಸ್.. ಇಲ್ಲಿದೆ ಟ್ಯಾಕ್ಸ್ ಲೆಕ್ಕಾಚಾರ
ಹೌದು ದೇಶದಲ್ಲಿರುವ ಎಲ್ಲಾ ಖಾದ್ಯ ತೈಲಗಳ ಪ್ರಸ್ತುತ ಸ್ಟಾಕ್ ಸುಮಾರು 21 LMT (ಲಕ್ಷ ಮೆಟ್ರಿಕ್ ಟನ್) ಆಗಿದ್ದು, ಇನ್ನೂ 12 LMT ಸಾಗಣೆಯಲ್ಲಿದೆ, ಇದು ಮೇ 2022 ರಲ್ಲಿ ದೇಶಕ್ಕೆ ಆಗಮಿಸಲಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಹೇಳಿದೆ.
ಈಗಾಗಲೇ ರಷ್ಯಾ-ಉಕ್ರೇನ್ ಸಮರದ ಪರಿಣಾಮ ಖಾದ್ಯ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಇಂಡೊನೇಷ್ಯಾದ ರಫ್ತು ನಿಷೇಧ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೀಗಾಗಿ ತಾಳೆ ಎಣ್ಣೆ, ಸೂರ್ಯಕಾಂತಿ ಮತ್ತು ಸೋಯಾಬೀನ್ ಎಣ್ಣೆ ದರ ಶೇ.15ರಷ್ಟು ಏರಿಕೆ ನಿರೀಕ್ಷಿಸಲಾಗಿತ್ತು. ಇಂಡೊನೇಷ್ಯಾ ತಾಳೆ ಎಣ್ಣೆ ರಫ್ತಿನಿಂದ ಉಂಟಾಗಿರುವ ಬಿಕ್ಕಟ್ಟು ಬಗೆಹರಿಸಲು, ಖಾದ್ಯ ತೈಲ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಮಲೇಷ್ಯಾ ಸಲಹೆ ನೀಡಿದೆ.
ಮೀನುಗಾರರು ಹಾಗೂ ನೇಕಾರರ ಸಮುದಾಯಕ್ಕೆ ಬಂಪರ್ ಗಿಫ್ಟ್ ನೀಡಿದ ಸಿಎಂ ಬೊಮ್ಮಾಯಿ..!
ಮಣ್ಣು ಪರೀಕ್ಷೆ ಮಾಡಿ ದುಪ್ಪಟ್ಟು ಲಾಭ ಪಡೆಯಿರಿ!
ಎಣ್ಣೆಬೀಜಗಳ ವಿಷಯದಲ್ಲಿ, ಫೆಬ್ರವರಿ 2022 ರಲ್ಲಿ ಬಿಡುಗಡೆಯಾದ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಎರಡನೇ ಮುಂಗಡ ಅಂದಾಜು 20221-22 ನೇ ಸಾಲಿನ ಸೋಯಾಬೀನ್ ಉತ್ಪಾದನೆಯ ಧನಾತ್ಮಕ ಚಿತ್ರವನ್ನು 126.10 LMT ನಲ್ಲಿ ತೋರಿಸುತ್ತದೆ, ಇದು ಕಳೆದ ವರ್ಷದ ಉತ್ಪಾದನೆ 112 LMT ಗಿಂತ ಹೆಚ್ಚಾಗಿದೆ ಎಂದು ಸಚಿವಾಲಯ ತಿಳಿಸಿದೆ. .
ಕಳೆದ ವರ್ಷಕ್ಕೆ ಹೋಲಿಸಿದರೆ ರಾಜಸ್ಥಾನ ಸೇರಿದಂತೆ ಎಲ್ಲಾ ಪ್ರಮುಖ ಉತ್ಪಾದನಾ ರಾಜ್ಯಗಳಲ್ಲಿ ಸಾಸಿವೆ ಬೀಜಗಳನ್ನು ಶೇಕಡಾ 37 ರಷ್ಟು ಹೆಚ್ಚಿನ ಬಿತ್ತನೆಯ ಪರಿಣಾಮವಾಗಿ, 2021-22 ರ ಋತುವಿನಲ್ಲಿ ಉತ್ಪಾದನೆಯು 114 LMT ಗೆ ಏರಬಹುದು.
LPG ಸಿಲಿಂಡರ್‌ಗೆ ಹೆಚ್ಚಿನ ಬೆಲೆ ಕೇಳ್ತಿದ್ದಾರಾ..? ಹಾಗಾದ್ರೇ ಇಲ್ಲಿ ಕಂಪ್ಲೇಟ್ ಮಾಡಿ ಸಾಕು
ರಷ್ಯಾದಿಂದ ಅಪಾರ ಬೇಡಿಕೆಯಿದ್ದರೂ 200 ರೂ. ಕುಸಿತ ಕಂಡ ಗೋಧಿ..ಕಾರಣವೇನು..?
ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಬೆಲೆ ಮತ್ತು ಲಭ್ಯತೆಯ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಗ್ರಾಹಕರಿಗೆ ಪರಿಹಾರ ನೀಡಲು ದೇಶೀಯ ಖಾದ್ಯ ತೈಲ ಬೆಲೆಗಳಲ್ಲಿ ಮತ್ತಷ್ಟು ಕಡಿತವನ್ನು ಚರ್ಚಿಸಲು ಪ್ರಮುಖ ಖಾದ್ಯ ತೈಲ ಸಂಸ್ಕರಣಾ ಸಂಘಗಳೊಂದಿಗೆ ನಿಯಮಿತವಾಗಿ ಸಭೆಗಳನ್ನು ನಡೆಸುತ್ತದೆ.
ಸಚಿವಾಲಯದ ಪ್ರಕಾರ, ತಾಳೆ ಎಣ್ಣೆಯು ಆಮದು ಮಾಡಿಕೊಳ್ಳುವ ಒಟ್ಟು ಖಾದ್ಯ ತೈಲಗಳಲ್ಲಿ ಸುಮಾರು 62 ಪ್ರತಿಶತವನ್ನು ಹೊಂದಿದೆ ಮತ್ತು ಮುಖ್ಯವಾಗಿ ಇಂಡೋನೇಷ್ಯಾ ಮತ್ತು ಮಲೇಷ್ಯಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ, ಆದರೆ ಸೋಯಾಬೀನ್ ಎಣ್ಣೆ (22 ಪ್ರತಿಶತ) ಅರ್ಜೆಂಟೀನಾ ಮತ್ತು ಬ್ರೆಜಿಲ್ ಮತ್ತು ಸೂರ್ಯಕಾಂತಿ ಎಣ್ಣೆ (ಶೇ 15) ನಿಂದ ಆಮದು ಮಾಡಿಕೊಳ್ಳಲಾಗುತ್ತದೆ.
ಪ್ರಸ್ತುತ, ಜಾಗತಿಕ ಉತ್ಪಾದನೆಯಲ್ಲಿನ ಕೊರತೆ ಮತ್ತು ರಫ್ತು ಮಾಡುವ ದೇಶಗಳಿಂದ ರಫ್ತು ತೆರಿಗೆ ಅಥವಾ ಸುಂಕಗಳ ಹೆಚ್ಚಳದಿಂದಾಗಿ ಖಾದ್ಯ ತೈಲಗಳ ಅಂತರರಾಷ್ಟ್ರೀಯ ಬೆಲೆಗಳು ಒತ್ತಡದಲ್ಲಿವೆ. ಆದರು ಸದ್ಯ ನಮ್ಮ ಬಳಿ ಸಾಕಷ್ಟು ದಾಸ್ತಾನಿದೆ ಎಂದು ಕೇಂದ್ರ ಹೇಳ್ತಿದೆ.