1. ಸಾಹಸ ಕ್ರೀಡೆಗಾಗಿ ಬರಿಗೈಲಿ 25 ಅಂತಸ್ತು ಏರಿದ ಜ್ಯೋತಿರಾಜ್!
2. ಸರ್ಕಾರಿ ನೌಕರರ ವೇತನ ಶೇ 17 ಪ್ರತಿಶತ ಹೆಚ್ಚಳ
3. ಭಾರತ ಮತ್ತು ವಿಶ್ವಬ್ಯಾಂಕ್‌ನಿಂದ 1 ಬಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ
4. ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ವ್ಯವಸ್ಥೆ: ಸರ್ಕಾರದಿಂದ ಗುಡ್‌ನ್ಯೂಸ್
5. ಪ್ರಧಾನಿ ನರೇಂದ್ರ ಮೋದಿ – ಬಿಲ್ ಗೇಟ್ಸ್ ಭೇಟಿ, ಹೂಡಿಕೆ ಕುರಿತು ಚರ್ಚೆ
6. ಹಕ್ಕಿಜ್ವರದ ಸಮಯದಲ್ಲೇ ಹೆಚ್ಚು ಕೋಳಿ ತಿಂತೀನಿ: ಜಾರ್ಖಂಡ್ ಆರೋಗ್ಯ ಸಚಿವ
7. ಇನ್ಮುಂದೆ ಜಾನುವಾರುಗಳಿಗೂ ಬರಲಿದೆ ಆಧಾರ್ ಕಾರ್ಡ್!
8. ಬ್ಯಾಂಕ್ ನೌಕರರಿಗೆ ವಾರದಲ್ಲಿ ಐದು ದಿನ ಮಾತ್ರ ಕೆಲಸ ?
9. ಹಳೆಯ ಅಪ್ರಸ್ತುತ ಕಾನೂನುಗಳ ಬದಲಾವಣೆ: ತೋಮರ್ ಸಿಂಗ್
ಸಾವಿನ ನಂತರವೂ ಆತ್ಮೀಯರೊಂದಿಗೆ ಗೊಬ್ಬರ ರೂಪದಲ್ಲೂಳಿವ ಪರಿಕಲ್ಪನೆ!
ಸುದ್ದಿಗಳ ವಿವರ ಈ ರೀತಿ ಇದೆ.
------------
1. ಕರ್ನಾಟಕದ ಹಿರಿಮೆಯನ್ನು ಹೆಚ್ಚಿಸಿರುವ ಜ್ಯೋತಿರಾಜ್ ಅವರು ಈಚೆಗೆ ಮತ್ತೊಂದು ಸಾಧನೆ ಮಾಡಿದ್ದಾರೆ. ಉಡುಪಿಯ ಬ್ರಹ್ಮಗಿರಿಯಲ್ಲಿರುವ 25 ಅಂತಸ್ತಿನ ವುಡ್ಸ್‌ವಿಲ್ ಬಹುಮಹಡಿ ಕಟ್ಟಡವನ್ನು ಬರಿಗೈಲಿ ಯಶಸ್ವಿಯಾಗಿ ಹತ್ತಿ, ಸಾಹಸ ಪ್ರದರ್ಶಿಸಿದ್ದಾರೆ.
ಗುರುವಾರ ಬೆಳಿಗ್ಗೆ 10.20ಕ್ಕೆ ಕಟ್ಟಡ ಹತ್ತಲು ಪ್ರಾರಂಭಿಸಿದ್ದ ಜ್ಯೋತಿರಾಜ್ 20 ನಿಮಿಷಗಳಲ್ಲಿ 25 ಅಂತಸ್ತಿನ ಕಟ್ಟಡವನ್ನು ಸರಸರನೆ ಹತ್ತಿದ್ದಾರೆ. ಸಮುಚ್ಛಯದ ತುದಿಯಲ್ಲಿ ನಿಂತು ಕನ್ನಡದ ಬಾವುಟ ಹಾರಿಸುವ ಮೂಲಕ ಸಂಭ್ರಮಿಸಿದ್ದಾರೆ.
ಇವರ ಸಾಹಸಕ್ಕೆ ಜನ ಚಪ್ಪಾಳೆ, ಹರ್ಷೋದ್ಘಾರದ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಕರ್ನಾಟಕದಲ್ಲಿ ಅಡ್ವೆಂಚರ್ ಮಂಕಿ ಕ್ಲಬ್ ಸ್ಥಾಪಿಸಲು ಹಣ ಸಂಗ್ರಹಿಸುವ ಉದ್ದೇಶದಿಂದ ಜ್ಯೋತಿರಾಜ್ ಅವರು ಈ ರೀತಿ ಸಾಹಸ ಪ್ರದರ್ಶಿಸುತ್ತಿದ್ದಾರೆ.
------------
PM ಕಿಸಾನ್ ಸಮ್ಮಾನ್ ನಿಧಿ: ಆಧಾರ್ ತಿದ್ದುಪಡಿ ಹೇಗೆ, 13ನೇ ಕಂತು ಬಂದಿಲ್ಲವೇ ಅದಕ್ಕೂ ಇದೆ ಪರಿಹಾರ!
------------
2. ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದೆ. ಈಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ಕಾರಿ ನೌಕರರ ವೇತನವನ್ನು ಶೇ 17ರಷ್ಟು ಹೆಚ್ಚಳ ಮಾಡಿ ಆದೇಶ ಮಾಡಿದ್ದಾರೆ.
7ನೇ ರಾಜ್ಯ ವೇತನ ಆಯೋಗದ ಅಂತಿಮ ವರದಿಯನ್ನು ಕಾಯ್ದಿರಿಸಿ, ರಾಜ್ಯ ಸರ್ಕಾರಿ ನೌಕರರಿಗೆ, ಸ್ಥಳೀಯ ಸಂಸ್ಥೆಗಳ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹಾಗೂ ವಿಶ್ವವಿದ್ಯಾನಿಲಯಗಳ ಬೋಧಕೇತರ ಸಿಬ್ಬಂದಿಗಳಿಗೆ ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲು ಸರ್ಕಾರವು ನಿರ್ಧರಿಸಿದೆ ಎಂದು ಹೇಳಲಾಗಿದೆ.
------------
3. ಭಾರತ ಮತ್ತು ವಿಶ್ವಬ್ಯಾಂಕ್ ಜಂಟಿಯಾಗಿ 1 ಬಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
500 ಮಿಲಿಯನ್ ಡಾಲರ್ ಪೂರಕ ಸಾಲಗಳ ಎರಡು ಪತ್ಯೇಕ ಒಪ್ಪಂದಕ್ಕೆ ಸಹಿ ಮಾಡಲಾಗಿದ್ದು, ಈ ಒಪ್ಪಂದದ ಅನ್ವಯ ದೇಶದ ಆರೋಗ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
1 ಬಿಲಿಯನ್ ಡಾಲರ್‌ನಷ್ಟು ಮೌಲ್ಯದ ಆರ್ಥಿಕ ನೆರವಿನಿಂದಾಗಿ ಭಾರತದ ಪ್ರಧಾನಮಂತ್ರಿ ಆಯುಷ್ಮಾನ್ ಭಾರತ ಆರೋಗ್ಯ ಮೂಲಸೌಕರ್ಯ ಮಿಷನ್ ಅಭಿವೃದ್ಧಿಪಡಿಸುವ ಗುರಿ ಹಾಕಿಕೊಳ್ಳಲಾಗಿದೆ.
------------
PM Kisan ಇಂದು ಮಧ್ಯಾಹ್ನ ಬೆಳಗಾವಿಯಿಂದ ಪಿ.ಎಂ ಕಿಸಾನ್ ಬಿಡುಗಡೆ ಮಾಡಲಿದ್ದಾರೆ: ಪ್ರಧಾನಿ ಮೋದಿ
------------
4. ರಾಜ್ಯದಲ್ಲಿ ಇದೀಗ ಜಾರಿಯಲ್ಲಿರುವ ರಾಷ್ಟ್ರೀಯ ಪಿಂಚಣಿ ಯೋಜನೆ (NPS)ಯ ಬದಲಿಗೆ ಹಳೇಯ ಪಿಂಚಣಿ ಯೋಜನೆಯನ್ನು ಜಾರಿ ಮಾಡುವುದಕ್ಕೆ ಚಿಂತನೆ ನಡೆದಿದೆ.
ಹಳೆಯ ಪಿಂಚಣಿ ಯೋಜನೆಯನ್ನು ಜಾರಿ ಮಾಡುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ.
ಸರ್ಕಾರಿ ನೌಕರರು ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ ಮಧ್ಯಂತರ ವರದಿಯ ಆಧಾರದ ಮೇಲೆ ಶೇ 17ರಷ್ಟು ವೇತನ ಹೆಚ್ಚಳವನ್ನು ಮಾಡಲಾಗಿದೆ.
ಎನ್‌ಪಿಎಸ್ ರದ್ದತಿ ಪರಿಶೀಲಿಸಿ ವರದಿ ಸಲ್ಲಿಸಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
------------
5. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಲ್ ಗೇಟ್ಸ್ ಅವರು ಹೊಸದಿಲ್ಲಿಯಲ್ಲಿ ಶುಕ್ರವಾರ ಭೇಟಿಯಾಗಿದ್ದು, ಭಾರತದಲ್ಲಿ ಹೂಡಿಕೆ ಸಂಬಂಧ ಚರ್ಚೆ ನಡೆದಿದೆ.
BillGates ಅವರು ಭಾರತಕ್ಕೆ ಭೇಟಿ ನೀಡಿರುವುದು ಮತ್ತು ಪ್ರಮುಖ ವಿಷಯಗಳ ಬಗ್ಗೆ ವ್ಯಾಪಕವಾದ ಚರ್ಚೆಗಳನ್ನು ನಡೆಸಲು ಸಂತೋಷವಾಗಿದೆ ಎಂದು ಮೋದಿ ಹೇಳಿದ್ದಾರೆ.
ಇನ್ನು ಭಾರತದಲ್ಲಿ ಆರೋಗ್ಯ, ಹವಾಮಾನ ಬದಲಾವಣೆ ಮತ್ತು ಇತರ ನಿರ್ಣಾಯಕ ಕ್ಷೇತ್ರಗಳಲ್ಲಿ ಇಲ್ಲಿ ನಡೆಯುತ್ತಿರುವ ಬದಲಾವಣೆ
ನೋಡಲು ಉತ್ಸುಕರಾಗಿರುವುದಾಗಿ ಬಿಲ್‌ಗೇಟ್ಸ್ ತಿಳಿಸಿದ್ದಾರೆ.
------------
6. ದೇಶದ ವಿವಿಧ ರಾಜ್ಯಗಳಲ್ಲಿ ಹಕ್ಕಿಜ್ವರ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ.
ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಹಕ್ಕಿಜ್ವರದ ಏಕಾಏಕಿ ಹೆಚ್ಚಳವಾಗಿದೆ.
ಆದರೆ, ಅಲ್ಲಿನ ಆರೋಗ್ಯ ಸಚಿವ ಬನ್ನಾ ಗುಪ್ತಾ ಅವರು ಹಕ್ಕಿ ಜ್ವರದ ಸೋಂಕು ಹರಡಿದಾಗ ಹೆಚ್ಚು ಕೋಳಿ ತಿಂತೀನಿ, ಸ್ವಲ್ಪ ಜಾಸ್ತಿ ಬಿಸಿ ಮಾಡಿ ತಿನ್ನಬೇಕಷ್ಟೇ ಎಂದು ಲಘುವಾಗಿ ಪ್ರತಿಕ್ರಿಯಿಸಿದ್ದಾರೆ.
------------
7. ಈಚೆಗಷ್ಟೇ ಸೈಬರ್ ಕ್ರೈಂನಲ್ಲಿ ಆಗುತ್ತಿರುವ ಅಪರಾಧಗಳನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರವು ಸಿಮ್ ಕಾರ್ಡ್‌ಗೂ ಆಧಾರ್ ಕಾರ್ಡ್ ಕಡ್ಡಾಯ ಮಾಡುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವವನ್ನು ಸಲ್ಲಿಸಿತ್ತು.
ಇದೀಗ ಜಾನುವಾರುಗಳಿಗೂ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗುತ್ತಿದೆ.
ಹೌದು ಇದು ಹಾಸ್ಯವೆನಿಸಿದರೂ ಸತ್ಯ. ಶೀಘ್ರದಲ್ಲೇ ದೇಶದ ಜಾನುವಾರುಗಳಿಗೂ ಆಧಾರ್ ಕಾರ್ಡ್ ನೀಡಲಾಗುವುದು ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪಾಲ್ ತಿಳಿಸಿದ್ದಾರೆ. ಜಾನುವಾರುಗಳು ಹಿಂದೆ ಯಾವ ರೋಗಕ್ಕೆ ತುತ್ತಾಗಿದ್ದವು, ಅದರ ಇತಿಹಾಸದ ಸಂಪೂರ್ಣ
ಮಾಹಿತಿ ಸೇರಿದಂತೆ ಎಲ್ಲಾ ರೀತಿಯ ಡೇಟಾವನ್ನು ಸಂಗ್ರಹಿಸಲು ಈ ಆಧಾರ್ ಕಾರ್ಡ್ ಉಪಯುಕ್ತವಾಗಿದೆ ಎಂದು ಅವರು ತಿಳಿಸಿದ್ದಾರೆ.
------------
8. ಬ್ಯಾಂಕ್ ಸಿಬ್ಬಂದಿ ವಾರದಲ್ಲಿ ಐದು ದಿನಗಳು ಮಾತ್ರ ಕೆಲಸ ಮಾಡುವುದಕ್ಕೆ ಸಂಬಂಧಿಸಿದಂತೆ ಚರ್ಚೆ ಪ್ರಾರಂಭವಾಗಿದೆ.
ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (IBA) ಮತ್ತು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಎಂಪ್ಲಾಯೀಸ್ ನಡುವೆ ಈ ನಿಟ್ಟಿನಲ್ಲಿ ಚರ್ಚೆ ನಡೆದಿದೆ.
ಇದನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಪ್ರಗತಿಯೂ ಕಂಡುಬರುತ್ತಿರುವುದಾಗಿ ವರದಿ ಆಗಿದೆ.
ವಾರದಲ್ಲಿ ಐದು ದಿನಗಳ ಕೆಲಸದ ಅವಧಿ ಜಾರಿಗೊಳಿಸುವಲ್ಲಿ ಉದ್ಯೋಗಿಗಳು ಪ್ರಗತಿ ಸಾಧಿಸಿದ್ದಾರೆ.
------------
PMKisanUpdate ಪಿ.ಎಂ ಕಿಸಾನ್ ಹಣ ಇದೇ ದಿನ ನಿಮ್ಮ ಖಾತೆಗೆ ಬರಲಿದೆ!
------------
9. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಭಾರತ ಸರ್ಕಾರಕ್ಕೆ ರೈತರ ಹಿತಾಸಕ್ತಿ ಅತ್ಯಂತ ಮಹತ್ವದ್ದಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ಕೇಂದ್ರ ಸರ್ಕಾರವು ರೈತರಿಗೆ ಉತ್ತಮ ಗುಣಮಟ್ಟದ ಬೀಜಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಶೀಘ್ರದಲ್ಲೇ ಬೀಜ ಪತ್ತೆಹಚ್ಚುವ ವ್ಯವಸ್ಥೆಯನ್ನು ಪ್ರಾರಂಭಿಸಲಾಗುವುದು.
ಇದು ಬೀಜ ವ್ಯಾಪಾರ ವಲಯದಲ್ಲಿ ಕಳ್ಳತನಕ್ಕೆ ಕಡಿವಾಣ ಹಾಕಲಿದೆ ಎಂದಿದ್ದಾರೆ.
ನವದೆಹಲಿಯಲ್ಲಿ ಶನಿವಾರ ಭಾರತೀಯ ರಾಷ್ಟ್ರೀಯ ಬೀಜ ಸಂಘ ಆಯೋಜಿಸಿದ್ದ ಎರಡು ದಿನಗಳ ಭಾರತೀಯ ಬೀಜ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಭಾಗವಹಿಸಿ ಮಾತನಾಡಿದರು.
ಸೀಡ್ಸ್ ವಲಯದ ಸುಗಮ ಕಾರ್ಯನಿರ್ವಹಣೆಗೆ ಯಾವುದೇ ಅಡೆತಡೆಗಳು ಬಂದರೂ, ಸರ್ಕಾರವು ಈ ನಿಟ್ಟಿನಲ್ಲಿ ಅತ್ಯಂತ ಗಂಭೀರವಾಗಿದೆ.
ಭಾರತಕ್ಕೆ ಸ್ವಾತಂತ್ರ್ಯ ಬಂದ 75 ವರ್ಷಗಳಲ್ಲಿ ಅಪ್ರಸ್ತುತವಾಗಿದ್ದ ಹಳೆಯ ಕಾನೂನುಗಳನ್ನು ರದ್ದುಪಡಿಸಿದ ಮೊದಲ ಸರ್ಕಾರ ಇದಾಗಿದೆ ಎಂದು ಅವರು ಹೇಳಿದರು.
Aadhar Card -Sim Card Link ಸಿಮ್ ಕಾರ್ಡ್‌ಗೂ ಆಧಾರ್ ಕಾರ್ಡ್ ಜೋಡಣೆ: ಕಾರಣ ಏನು ಗೊತ್ತೆ ?