News

ಹೊಸ ಕಂಪನಿ ಸೇರಿದಾಗ ಆನ್‌ಲೈನ್‌ PF ವರ್ಗಾಯಿಸುವುದು ಸುಲಭ!

26 November, 2022 4:35 PM IST By: Hitesh
Easy Online PF Transfer on Joining a New Company!

ಸರ್ವೇ ಒಂದರ ಪ್ರಕಾರ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ಯುವ ಸಮೂಹ 16ರಿಂದ 18 ತಿಂಗಳ ಒಳಗೆ ಉದ್ಯೋಗ ಬದಲಾಯಿಸುತ್ತಿದ್ದಾರೆ!

ಕೋವಿಡ್‌ ನಂತರ ಜಗತ್ತು ಸಹಜ ಸ್ಥಿತಿಗೆ ತಲುಪುತ್ತಿದ್ದು, ಸಾವಿರಾರು ಉದ್ಯೋಗಿಗಳು ಕಂಪನಿಯನ್ನು ಬದಲಾಯಿಸುತ್ತಿದ್ದಾರೆ.

ಐದಾರು ವರ್ಷದಲ್ಲಿ ಕನಿಷ್ಠ ಎರಡು ಬಾರಿ ಕಂಪನಿಯನ್ನು ಬದಲಾಯಿಸುತ್ತಿರುವುದು ಸಹ ವರದಿ ಆಗುತ್ತಿದೆ.  

ನಿರ್ದಿಷ್ಟ ಅವಧಿಯಲ್ಲಿ ಕಂಪನಿಯನ್ನು ಬದಲಾಯಿಸುವುದರಿಂದ ಒಬ್ಬ ವ್ಯಕ್ತಿ ಹಲವು ಪಿಎಫ್ (PF) ಖಾತೆಗಳನ್ನು ಹೊಂದಿರುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಕೆಲಸ ಬದಲಾಯಿಸಿದಂತೆಲ್ಲ ಪಿಎಫ್‌ ಖಾತೆಯೂ ಬದಲಾಗುವುದು ಇದೇ ಕಾರಣದಿಂದ. ನೀವು ಯುಎಎನ್ ನಂಬರ್ ಆ್ಯಕ್ಟಿವೇಟ್ ಮಾಡಿದರೆ,

ನಿಮ್ಮ ಎಲ್ಲಾ ಪಿಎಫ್ ಖಾತೆಗಳು ಒಂದೇ ಪ್ಲಾಟ್‌ಫಾರ್ಮ್ ಅಡಿಗೆ ಬರುತ್ತವೆ. ಇನ್ನು ಪಿಎಫ್ ಖಾತೆಗಳನ್ನು ವಿಲೀನ ಮಾಡಲು ಈಗ ಆನ್‌ಲೈನ್‌ನಲ್ಲಿಯೂ ಅವಕಾಶ ಇದೆ.

ನಿಮ್ಮ ಎಲ್ಲ ಖಾತೆಗಳನ್ನು ಒಂದೆಡೆ ವರ್ಗಾಯಿಸಲು ಸಾಧ್ಯವಿದೆ. ಸರ್ಕಾರ ಹಾಗೂ ಬಹುತೇಕ ಖಾಸಗಿ ಕಂಪನಿಗಳು ಉದ್ಯೋಗಿಗಳಿಗೆ ಪಿಎಫ್ ಯೋಜನೆ ಸೇವೆಯನ್ನು ನೀಡುತ್ತಿವೆ.

ಉದ್ಯೋಗಿಗಳ ಸಂಬಳದ ಶೇ. 12 ಭಾಗವನ್ನು ಪಿಎಫ್ ಖಾತೆಗೆ ಪ್ರತೀ ತಿಂಗಳು ಜಮೆ ಮಾಡುತ್ತಿವೆ.

ಇಪಿಎಫ್ ಖಾತೆಯನ್ನು ಇನ್ನೊಂದು ಖಾತೆಗೆ ಬದಲಾಯಿಸುವ ಸುಲಭ ಮಾರ್ಗ

  • ಇಪಿಎಫ್ ಪೋರ್ಟಲ್‌ನಲ್ಲಿ ಯುಎಎನ್ (ಯೂನಿವರ್ಸಲ್ ಅಕೌಂಟ್ ನಂಬರ್) ಸಕ್ರಿಯ (ಆ್ಯಕ್ಟಿವೇಟ್) ಮಾಡಿ.
  • ನೊಂದಾಯಿತ ಮೊಬೈಲ್‌ ನಂಬರ್‌ ಇರಬೇಕು.
  • ನಿಮ್ಮ ಬ್ಯಾಂಕ್‌ ಖಾತೆ, ಐಎಫ್‌ಎಸ್‌ಸಿ ಕೋಡ್ ಇತ್ಯಾದಿ ವಿವರ ಭರ್ತಿ ಮಾಡಬೇಕು.  
  • ನಿಮ್ಮ ಬ್ಯಾಂಕ್ ಖಾತೆಯ ವಿವರವನ್ನು ನಿಮ್ಮ ಕಂಪನಿ ದೃಢೀಕರಿಸಬೇಕು.
      ಯುಎಎನ್‌ಗೆ ಆಧಾರ್ ಲಿಂಕ್ ಆಗಿರಬೇಕು
  •  ನೀವು ಕಂಪನಿಗೆ ಸೇರಿದ ದಿನ ಮತ್ತು ಕೊನೆಯ ಕೆಲಸದ ದಿನ ನಮೂದಿಸಬೇಕು
  • ಒಂದು ಐಡಿ, ಒಂದು ವರ್ಗಾವಣೆ ಮಾತ್ರ ಸಾಧ್ಯ.
  • ಇಪಿಎಫ್ ಖಾತೆ ಆನ್‌ಲೈನ್‌ನಲ್ಲಿ ವರ್ಗಾಯಿಸಲು ಏನು ಮಾಡಬೇಕು  
  • ಇಪಿಎಫ್‌ನ ಮೆಂಬರ್‌ ಇಂಟರ್ಫೇಸ್ ವೆಬ್‌ಸೈಟ್‌ಗೆ  (https://www.epfindia.gov.in/site_en/index.php)
  • ಹೋಗಿ ನಿಮ್ಮ ಯುಎಎನ್ ಮತ್ತು ಪಾಸ್‌ವರ್ಡ್ ಮೂಲಕ ಲಾಗಿನ್ ಮಾಡಿಕೊಳ್ಳಬೇಕು.  
  •  ಒನ್ ಮೆಂಬರ್-ಒನ್ ಇಪಿಎಫ್ ಅಕೌಂಟ್ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಬೇಕು.
  • ಅಲ್ಲಿರುವ ವಿವರವನ್ನು ಪರಿಶೀಲಿಸಿ, ನಂತರ ಗೆಟ್ ಡೀಟೈಲ್ಸ್ ಮೇಲೆ ಕ್ಲಿಕ್ ಮಾಡಬೇಕು
  • ನೀವು ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿಯ ಯುಎಎನ್ ಐಡಿಯನ್ನು ನಮೂದಿಸಿ
  •  ಗೆಟ್ ಓಟಿಪಿ ಕ್ಲಿಕ್ ಮಾಡಿದಾಗ ಸಿಗುವ ನಂಬರ್ ನಮೂದಿಸಿ, ಈ ಪ್ರಕ್ರಿಯೆಗಳು ಮುಕ್ತಾಯವಾದ ನಂತರ ಸಬ್ಮಿಟ್ ಕೊಡಿ.
  • ಪಿಎಫ್ ಟ್ರಾನ್ಸ್‌ಫರ್‌ಗೆ ಮನವಿ ಮಾಡುವ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಿ 
  • ಈ ಪ್ರಕ್ರಿಯೆ ಬಳಿಕ ಟ್ರ್ಯಾಕಿಂಗ್ ಐಡಿ ಜನರೇಟ್ ಆಗುತ್ತದೆ.  


ಹಣ ವರ್ಗಾವಣೆಯ ಪ್ರಕ್ರಿಯೆ ಪರಿಶೀಲಿಸುವುದು ಹೇಗೆ

  • ಪಿಎಫ್‌ ಪರಿಶೀಲಿಸುವ ಅಧಿಕೃತ ವೆಬ್‌ಸೈಟ್‌ (https://www.epfindia.gov.in/site_en/index.php)ಗೆ ಭೇಟಿ
    ನೀಡಿ ನಂತರದಲ್ಲಿ ಕ್ಲೈಮ್ ಸ್ಟೇಟಸ್ ಎನ್ನುವ ಆಯ್ಕೆ ಅಂಶವನ್ನು ಆಯ್ಕೆ ಮಾಡಿ
  •  ನಿಮ್ಮ ಪಿಎಫ್ ಕಚೇರಿ ಇರುವ ರಾಜ್ಯ ನಮೂದಿಸಿ
  •  ರೀಜನಲ್ ಆಫೀಸ್ ಆಯ್ಕೆ ಮಾಡಿ
  • ಅಕೌಂಟ್ ನಂಬರ್ ನಮೂದಿಸಿ ಸಬ್ಮಿಟ್ ಮಾಡಬೇಕು.
  • ಈ ರೀತಿ ಮಾಡುವುದರಿಂದ ಟ್ರ್ಯಾಕಿಂಗ್ ಸ್ಟೇಟಸ್ ಕಾಣುತ್ತದೆ.   
  •  ಇಪಿಎಫ್‌ಒ ಪೋರ್ಟಲ್‌ಗೆ ಹೋಗಿ ಯುಎಎನ್ ಮೂಲಕ ಲಾಗಿನ್ ಆಗಬೇಕು.
    ಆನ್‌ಲೈನ್ ಸರ್ವಿಸಸ್‌ ಆಯ್ಕೆ ಮಾಡಿಕೊಂಡು
  •  ಟ್ರ್ಯಾಕ್ ಕ್ಲೇಮ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.
  •  ಟ್ರಾನ್ಸ್‌ಫರ್ ಕ್ಲೇಮ್ ಸ್ಟೇಟಸ್ ಆಯ್ಕೆ ಮಾಡಿದರೆ, ಎಲ್ಲಿಯವರೆಗೆ ಪ್ರಕ್ರಿಯೆ ಮುಕ್ತಾಯವಾಗಿದೆ ಎನ್ನುವ ವಿವರ ಲಭ್ಯವಾಗುತ್ತದೆ.  
  • ಅವಶ್ಯವಿರುವ ದಾಖಲೆಗಳ ವಿವರ
  • ರಿವೈಸ್ಡ್ ಫಾರ್ಮ್ 13 ಅನ್ನು ನೀವು ಲಗತ್ತಿಸಬೇಕು.
  •  ಪ್ಯಾನ್, ಆಧಾರ್ ಇತ್ಯಾದಿ ಐಡಿ ಪ್ರೂಫ್, ಯುಎಎನ್ ಐಡಿ
  •  ಈಗ ಕೆಲಸ ಮಾಡುವ ಕಂಪನಿಯ ವಿವರ
  • ಸಂಬಳ ಹಾಕಲಾಗುವ ಬ್ಯಾಂಕ್ ಖಾತೆಯ ವಿವರ
  •  ಪಿಎಫ್ ಖಾತೆಯ ವಿವರ