News

ಗೋವಿನ ಜೋಳ ಹಾಗೂ ಸೋಯಾ ಅವರೆ ಬೆಳೆಗಳ ಸುಲಭ ನಿರ್ವಹಣೆ ವಿಧಾನಗಳು

30 June, 2021 4:57 PM IST By:

ಬಯಲುಸೀಮೆ ಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳೆಯುವ ಮಳೆ ಆಶ್ರಿತ ಬೆಳೆಗಳಲ್ಲಿ ಮೆಕ್ಕೆಜೋಳ ಅಥವಾ ಗೋವಿನ ಜೋಳ ಹಾಗೂ ಸೋಯಯಾ ಅವರೆ (ಸೋಯಾಬೀನ್) ಪ್ರಮುಖ ಬೆಳೆಗಳಾಗಿವೆ. ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಶಿವಮೊಗ್ಗ ಜಿಲ್ಲೆಯ ಕೆಲ ತಾಲೂಕುಗಳು, ಉತ್ತರ ಕರ್ನಾಟಕದ ಹಾವೇರಿ, ಹಬ್ಬಳ್ಳಿ-ಧಾರವಾಡ, ಬೀದರ್, ಕಲಬುರಗಿ, ರಾಯಚೂರು, ಗಂಗಾವತಿ ಜಿಲ್ಲೆಗಳ ರೈತರು ಸೋಯಾ ಅವರೆ ಹಾಗೂ ಗೋವಿನ ಜೋಳಗಳನ್ನು ಅಧಿಕ ಪ್ರದೇಶದಲ್ಲಿ ಬೆಳೆಯುತ್ತಾರೆ. ಬೀದರ್, ಹಾವೇರಿ ಜಿಲ್ಲೆಗಳಲ್ಲಿ ಸೋಯಾ ಅವರೆ ಬೆಳೆ ಬಿತ್ತನೆ ಮಾಡುವ ರೈತರ ಸಂಖ್ಯೆ ಹೆಚ್ಚಿದೆ.

ಪ್ರಸ್ತುತ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಉತ್ತಮವಾಗಿದೆ. ಹೀಗಾಗಿ ರೈತರು ಈಗಾಗಲೆ ಶೇ.60ರಷ್ಟು ಬಿತ್ತನೆ ಕಾರ್ಯವನ್ನು ಮಾಡಿ ಮುಗಿಸಿದ್ದಾರೆ. ಈ ಪೈಕಿ ಗೋವಿನ ಜೋಳ ಹಾಗೂ ಸೋಯಾ ಅವರೆ ಬಿತ್ತನೆ ಮಾಡಿರುವ ರೈತರು ಪ್ರಸ್ತುತ 15 ಅಥವಾ ಅದಕ್ಕಿಂತಲೂ ಹೆಚ್ಚು ದಿನಗಳ ಬೆಳೆಗಳಲ್ಲಿ ಹಲವು ಕೀಟ ಬಾಧೆಗಳನ್ನು ಎದುರಿಸುತ್ತಿದ್ದಾರೆ. ಸೋಯಾ ಅವರೆ ಬೆಳೆಯಲ್ಲಿ ಬಸವನ ಹುಳು ಅಥವಾ ಶಂಖು ಹುಳು, ರಸ ಹೀರುವ ಕೀಟದ ಹಾವಳಿ ಹೆಚ್ಚಾಗಿದ್ದರೆ, ಮೆಕ್ಕೆಜೋಳ ಬೆಳೆಗೆ ಸೈನಿಕ ಹುಳುಗಳ ಕಾಟ ಅಧಿಕವಾಗಿದೆ. ಈ ಕೀಟ ಬಾಧೆಗಳಿಂದಾಗಿ ರೈತರು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಎರಡೂ ಬೆಳಗಳ ಸುಲಭ ನಿರ್ವಹಣೆ ಕುರಿತು ನಿವೃತ್ತ ಜಂಟಿ ಕೃಷಿ ನಿರ್ದೇಶಕರಾದ ಡಾ.ಆರ್.ಜಿ.ಗೊಲ್ಲರ್ ಅವರುಕೃಷಿ ಜಾಗರಣ’ ಜೊತೆ ಮಾಹಿತಿ ಹಂಚಿಕೊAಡಿದ್ದಾರೆ.

ಗೋವಿನ ಜೋಳ ಬೆಳೆಯಲು ಸಲಹೆಗಳು

* ಉತ್ತಮ ತಳಿಯೆಂದು ಧೃಡಪಟ್ಟ ತಳಿಯನ್ನು ಸ್ವ ಅನುಭವ ಮತ್ತು ಅಕ್ಕಪಕ್ಕದ ರೈತರ ಅನುಭವ ಆಧರಿಸಿ ಆಯ್ಕೆ ಮಾಡಿ.

* ವಾರ್ಷಿಕ ಮಳೆ ಪ್ರಮಾಣ ಕಡಿಮೆ ಇರುವ ಪ್ರದೇಶದಲ್ಲಿ ನೀರಾವರಿ ಅನುಕೂಲ ಇದ್ದರೆ ಮಾತ್ರ ಈ ಬೆಳೆ ಬೆಳೆಯಬೇಕು.

* ದೊಡ್ಡ ಕ್ಷೇತ್ರದಲ್ಲಿ ಬೆಳೆಯುವುದಾದರೆ, 3-4 ತಳಿಗಳನ್ನು ಆಯ್ಕೆ ಮಾಡಬೇಕು. ಇದರಿಂದ ಹವಾಮಾನದ ವೈಪರೀತ್ಯಗಳನ್ನು ಎದುರಿಸಲು ಸಾಧ್ಯ.

* ಬಿತ್ತನೆಗೆ ಪೂರ್ವದಲ್ಲಿ ಪ್ರತಿ ಕೆ.ಜಿ ಬೀಜಕ್ಕೆ 3 ಮಿಲೀ ಕ್ಲೋರ್ ಪೈರಿಫಾಸ್, 2 ಗ್ರಾಂ. ಕಾರ್ಬೆಂಡೆಜಿA ಲೇಪನ ಮಾಡಿ ಬಿತ್ತಬೇಕು. ಅಜಟೋಬ್ಯಾಕ್ಟರ್, ಪಿಎಸ್ಬಿ ಮತ್ತು ಪೊಟಾಶ್ ಕರಗಿಸುವ ಅಣುಜೀವಿ ಲೇಪನ ಸಹ ಮಾಡಬಹುದು.

* ಬಿತ್ತನೆ ಸಂದರ್ಭದಲ್ಲಿ ಶಿಫಾರಸು ಮಾಡಿರುವ ಪ್ರಮಾಣದಲ್ಲಿ ಅರ್ಧ ರಸಗೊಬ್ಬರ ಮಾತ್ರ ಬಳಸಬೇಕು.

* ಗೋವಿನ ಜೋಳದ ನಡುವೆ ಅಕ್ಕಡಿಯಾಗಿ ತೊಗರಿ ಬೆಳೆದರೆ ಉತ್ತಮ. ಪೂರ್ವ ಪಶ್ಚಿಮ ಸಾಲುಗಳಲ್ಲಿ ಮಾತ್ರ ಅಕ್ಕಡಿ  ಬಿತ್ತನೆ ಮಾಡಿದರೆ ಉತ್ತಮ ಇಳುವರಿ ಪಡೆಯಬಹುದು. ಮಸಾಲೆ ಬಳಸುವ ರೈತರು ಸಾಸಿವೆಯನ್ನು ಚೆಲ್ಕಿ ಬೆಳೆಯಾಗಿ ಬೆಳೆಯುವುದು ಸೂಕ್ತ.

* ಈಗಾಗಲೇ ಬಿತ್ತನೆಯಾಗಿ 10-30 ದಿನಗಳ ಹಂತದ ಬೆಳೆಗಳಲ್ಲಿ ಎಡೆ ಹೊಡೆದು ದಿಂಡು ಏರಿಸಬೇಕು. ಏರು ಮಡಿ ಪದ್ಧತಿ ಸಹ ಉತ್ತಮವಾಗಿದ್ದು, ಹೆಚ್ಚಾದ ಮಳೆ ನೀರು ಹರಿದು / ಬಸಿದು ಹೋಗಲು ಅವಕಾಶ ಮಾಡಿ.

* ಬೆಳೆಯ ಹಂತ ಮತ್ತು ತೇವಾಂಶ ಲಭ್ಯತೆ ಆಧರಿಸಿ, ಪ್ರತಿ ಲೀಟರ್ ನೀರಿಗೆ 3 -5 ಗ್ರಾಂ 19:19:19, 13:0:45 ಮತ್ತು 1-2 ಗ್ರಾಂ ಲಘು ಪೋಷಕಾಂಶಗಳ ಮಿಶ್ರಣ ಬೆರೆಸಿ ಸಿಂಪಡಿಸಿ.

* ಸೈನಿಕ ಹುಳುಗಳ ಬಾಧೆ ಹತೋಟಿಗೆ ಇಮಾಮೆಕ್ಟಿನ್ ಬೆಂಜೋಯೇಟ್ (0.5 ಮಿಲೀ/ಲೀ) ಅನ್ನು ಪ್ರತಿ ಸುಳಿ ತುಂಬುವAತೆ ಸಿಂಪಡಿಸಿ. ಮೆಟಾರೈಜಿಯಂ (ನುಮೋರಿಯ) ರಿಲೈ ಜೈವಿಕ ಪೀಡೆ ನಾಶಕ ಬಳಸುವ ಮುನ್ನ ಮತ್ತು ನಂತರ ಒಂದು ವಾರ ರಾಸಾಯನಿಕ ಬಳಸಬಾರದು.

ಸೋಯಾ ಅವರೆ ನಿರ್ವಹಣೆ

* ಜೆಎಸ್ 335 ತಳಿಯಲ್ಲಿ ಕುಂಕುಮ ರೋಗ ಅಥವಾ ತುಕ್ಕು ರೋಗ ಬರುವುದರಿಂದ ಸಾಲುಗಳ ಅಂತರ 18 ಇಂಚು ಇರಲಿ.

* ಬಿತ್ತನೆಗೆ ಮೊದಲು ಪ್ರತಿ ಕೆಜಿ ಬೀಜಕ್ಕೆ 3 ಮಿ.ಲೀ ಕ್ಲೋರ್ ಪೈರಿಫಾಸ್, 2 ಗ್ರಾಂ ಕಾರ್ಬೆಂಡೆಜಿA ಲೇಪನ ಮಾಡಿ. ರೈಜೋಬಿಯಂ, ಪಿಎಸ್ಬಿ ಮತ್ತು ಪೊಟಾಶ್ ಕರಗಿಸುವ ಅಣುಜೀವಿ ಲೇಪನ ಸಹ ಮಾಡಬಹುದು.

* ಅಕ್ಕಡಿಯಾಗಿ ತೊಗರಿ ಬಿತ್ತನೆ ಮಾಡಿ. ಪೂರ್ವ ಪಶ್ಚಿಮ ಸಾಲುಗಳಲ್ಲಿ ಮಾತ್ರ ಅಕ್ಕಡಿ ಬೆಳೆ ಬಿತ್ತನೆ ಮಾಡಿದರೆ ಉತ್ತಮ ಇಳುವರಿ ಪಡೆಯಬಹುದು.

* ರಸ ಹೀರುವ ಕೀಟಗಳ ಬಾಧೆ ತಡೆಯಲು ಬೆಳೆಯ ಸುತ್ತ ಮತ್ತು 30-40 ಅಡಿ ಅಂತರದಲ್ಲಿ ಗೋವಿನ ಜೋಳ ಬೆಳೆಸಿ. ಈಗಾಗಲೇ ಬಿತ್ತನೆಯಾಗಿ 10-30 ದಿನಗಳ ಹಂತದ ಬೆಳೆಗಳಲ್ಲಿ ಎಡೆ ಹೊಡೆದು ದಿಂಡು ಏರಿಸಬೇಕು.

* ಬೆಳೆಯ ಹಂತ ಮತ್ತು ತೇವಾಂಶ ಲಭ್ಯತೆ ಆಧರಿಸಿ, ಪ್ರತಿ ಲೀಟರ್ ನೀರಿಗೆ 3 -5 ಗ್ರಾಂ 19:19:19, 13:0:45 ಮತ್ತು 1-2 ಗ್ರಾಂ ಲಘು ಪೋಷಕಾಂಶಗಳ ಮಿಶ್ರಣ ಬೆರೆಸಿ ಸಿಂಪಡಿಸಿ. ಪೈರೆಥ್ರಾಯಿಡ್ ಪೀಡೆನಾಶಕ ಬಳಸಬಾರದು. ಕೀಟ ಬಾಧೆ ಕುರಿತು ಅನುಭವಿ ತಜ್ಞರ ಸಲಹೆ ಪಡೆಯುವುದು ಸೂಕ್ತ.