News

ಬರ ಪರಿಹಾರ ರಿಲೀಸ್‌!.. ಯಾವ ಜಿಲ್ಲೆಗೆ ಎಷ್ಟು ಅನುದಾನ?

04 November, 2023 3:42 PM IST By: Maltesh
Drought relief release!.. How much grant for which district?

ರಾಜ್ಯದ 31 ಜಿಲ್ಲೆಗಳ ಬರಪೀಡಿತ ತಾಲೂಕುಗಳಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಎಸ್‌ಡಿಆರ್‌ಎಫ್ ನಿಂದ  324 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಈಗಾಗಲೇ 216 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.

ಕುಡಿಯುವ ನೀರು, ಮೇವು ಇನ್ನಿತರ ಉದ್ದೇಶಕ್ಕಾಗಿ ಜಿಲ್ಲಾವಾರು ಬರ ಪರಿಹಾರ ಹಣವನ್ನು ಬಿಡುಗಡೆಗೊಳಿಸಲಾಗಿದೆ. ಬೆಳಗಾವಿ ಜಿಲ್ಲೆಗೆ ಅತಿ ಹೆಚ್ಚು ಅಂದರೆ 22 ಕೋಟಿ ರೂಪಾಯಿಗಳನ್ನು ನೀಡಲಾಗಿದ್ದರೆ, ವಿಜಯಪುರ ಜಿಲ್ಲೆಗೆ 18 ಕೋಟಿ ಹಾಗೂ ಉತ್ತರ ಕನ್ನಡ ಜಿಲ್ಲೆಗೆ 16 ಕೋಟಿಯನ್ನು ನೀಡಲಾಗಿದೆ.

ಯಾವ ಜಿಲ್ಲೆಗೆ ಎಷ್ಟು ಅನುದಾನ..?

ಕೋಲಾರ – 9 ಕೋಟಿ ರೂ.

ಚಿಕ್ಕಬಳ್ಳಾಪುರ- 9 ಕೋಟಿ ರೂ.

ತುಮಕೂರು-15 ಕೋಟಿ ರೂ..

ಚಾಮರಾಜನಗರ-7 ಕೋಟಿ ರೂ.

ಗದಗ-10.15 ಕೋಟಿ ರೂ.

ಹಾವೇರಿ-12 ಕೋಟಿ.

ಬೆಂಗಳೂರು ನಗರ- 7.50 ಕೋಟಿ ರೂಪಾಯಿ

ಬೆಂಗಳೂರು ಗ್ರಾಮಾಂತರ- 6 ಕೋಟಿ ರೂ.

ರಾಮನಗರ-7.50 ಕೋಟಿ ರೂ.

ಉತ್ತರ ಕನ್ನಡ-16.50 ಕೋಟಿ ರೂ.

ಯಾದಗಿರಿ-9 ಕೋಟಿ ರೂ.

ಬೆಳಗಾವಿ- 22.50 ಕೋಟಿ ರೂ.

ಬಾಗಲಕೋಟೆ- 13.50 ಕೋಟಿ. ರೂ.

ವಿಜಯಪುರ- 18 ಕೋಟಿ ರೂ.

ಧಾರವಾಡ-12 ಕೋಟಿ ರೂ.

ಶಿವಮೊಗ್ಗ-10.40 ಕೋಟಿ ರೂ.

ಮೈಸೂರು – 13.50 ಕೋಟಿ ರೂ

ಚಿತ್ರದುರ್ಗ- 9 ಕೋಟಿ ರೂ.

ದಾವಣಗೆರೆ- 9 ಕೋಟಿ ರೂ.

ಮಂಡ್ಯ- 10.50 ಕೋಟಿ ರೂ.

ಬಳ್ಳಾರಿ- 7.50 ಕೋಟಿ ರೂ.

ದಕ್ಷಿಣ ಕನ್ನಡ- 3 ಕೋಟಿ ರೂ.

ಉಡುಪಿ- 4.60 ಕೋಟಿ ರೂ.

ವಿಜಯನಗರ-9 ಕೋಟಿ ರೂ

ಕೊಪ್ಪಳ- 10.50 ಕೋಟಿ ರೂ.

ರಾಯಚೂರು- 9 ಕೋಟಿ ರೂ.

ಕಲಬುರಗಿ- 16.50 ಕೋಟಿ ರೂ.

ಬೀದರ್- 4.50 ಕೋಟಿ ರೂ.

ಹಾಸನ- 12 ಕೋಟಿ ರೂ.

ಚಿಕ್ಕಮಗಳೂರು-12 ಕೋಟಿ ರೂ

ಕೊಡಗು-7.50 ಕೋಟಿ ರೂ.