News

ಬರ ಪರಿಹಾರ: 25 ಸಾವಿರ ನೀಡಲು ಆಗ್ರಹ, ಡಿ.23ಕ್ಕೆ ಮಹಾಧಿವೇಶನ

18 December, 2023 4:57 PM IST By: Hitesh
ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿ

ಬೆಂಗಳೂರಿನಲ್ಲಿ ಇದೇ ಡಿಸೆಂಬರ್‌ 23ಕ್ಕೆ ರೈತರ ರಾಷ್ಟ್ರೀಯ ಮಹಾಧಿವೇಶನ ನಡೆಯಲಿದೆ.

ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಖಾತರಿ ಕಾನೂನಿಗೆ ಒತ್ತಾಯಿಸಲಾಗಿದೆ.

ಇದೇ ಕಾರಣಕ್ಕೆ   ಬೆಂಗಳೂರಿನಲ್ಲಿ ರೈತರ ರಾಷ್ಟ್ರೀಯ ಮಹಾಧಿವೇಶನ ನಡೆಯಲಿದೆ.  

ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿ ಪ್ರವಾಹ ಹಾನಿ ಮಳೆಹಾನಿ ಎದುರಾಗಿತ್ತು. ಇದೀಗ ಬರಗಾಲ ಎದುರಾಗಿದೆ.

ಹೀಗಾಗಿ, ರಾಜ್ಯದ ಎಲ್ಲಾ ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು.

ಕೃಷಿ ಸಾಲ ಪಡೆದ ರೈತರು ಬೆಳೆ ಬೆಳೆಯಲು ಹೂಡಿಕೆ ಮಾಡಿ ಬೆಳೆ ನಾಶವಾಗಿದೆ.

ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲಮನ್ನಾ ಆಗಲೇಬೇಕು ಎಂದು ದಕ್ಷಿಣ ಭಾರತ ರಾಜ್ಯಗಳ ಸಂಚಾಲಕ ಸಂಯುಕ್ತ

ಕಿಸಾನ್ ಮೋರ್ಚಾ ಸಂಚಾಲಕರು ಕುರುಬೂರು ಶಾಂತಕುಮಾರ್‌ ಆಗ್ರಹಿಸಿದ್ದಾರೆ.

ಅವರು  ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರ ಸಂಘ ಕರ್ನಾಟಕದ ರಾಜ್ಯಾಧ್ಯಕ್ಷರೂ ಆಗಿದ್ದಾರೆ.

 ಕೈಗಾರಿಕೆ,  ಉದ್ಯಮಿಗಳಿಗೆ ಸಂಕಷ್ಟದ ನೆರವಿಗೆ 12 ಲಕ್ಷ ಕೋಟಿ ಮನ್ನಾ ಮಾಡಲಾಗಿದೆ.  

ಅದೇ ರೀತಿ ರೈತರ ಸಾಲ ಮನ್ನಾ ಆಗಬೇಕು. ರೈತರು ಕರ್ನಾಟಕದ ಮುಖ್ಯ ಕಾರ್ಯದರ್ಶಿಗಳಿಗೆ  23ರಂದು ಕೋರಿಕೆ ಪತ್ರ ಸಲ್ಲಿಸಲಿದ್ದೇವೆ ಎಂದಿದ್ದಾರೆ.

ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿ ರೈತರನ್ನು ದಿಕ್ಕು ತಪ್ಪಿಸಬಾರದು.

ರೈತರು ಸಾಲ ಮನ್ನಾ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.

ರೈತರ ಸಾಲ ಮನ್ನಾ ಆಗದಂತೆ ವಂಚಿಸಲು ಬ್ಯಾಂಕುಗಳು ಬಡ್ಡಿ ದುಪ್ಪಟ್ಟು ಆಗುತ್ತದೆ ಎನ್ನಲಾಗಿದೆ.

ರೈತರನ್ನು ಹೆದರಿಸಿ ಖಾಲಿಪತ್ರಕ್ಕೆ ರೈತರ ಸಹಿ ಪಡೆದು ಸಾಲ ನವೀಕರಣ ಮಾಡುತ್ತಿದ್ದಾರೆ.

ಈ ಬಗ್ಗೆ ರೈತರು ಜಾಗೃತರಾಗಿರಬೇಕು ಎಂದರು.

ಭತ್ತ ಕಬ್ಬು ತೊಗರಿ ಜೋಳ ರಾಗಿ ಉತ್ಪಾದನೆ ಶೇಕಡ 50ರಷ್ಟು ಕಡಿಮೆಯಾಗಿದೆ.

ಹೊರದೇಶಕ್ಕೆ ಹೋಗುವ ಆಹಾರಧಾನ್ಯಗಳನ್ನು ರಫ್ತು ನಿಷೇಧ ಮಾಡಿದ್ದಾರೆ.

ಈಗಲಾದರೂ ರೈತರ ಶಕ್ತಿ, ಶ್ರಮದ ಬಗ್ಗೆ ಸರ್ಕಾರಗಳು ವಿಶೇಷ ಕಾಳಜಿ ವಹಿಸಲಿ.  

ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿ ಆಗಬೇಕು.

ಸ್ವಾಮಿನಾಥನ್ ಆಯೋಗದ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು.

ಪ್ರಧಾನಿಯವರು ಭರವಸೆ ನೀಡಿದಂತೆ  ಕೂಡಲೇ  ಕಾನೂನು ಜಾರಿ ಮಾಡಬೇಕು ಎಂದರು.

ರೈತರು ಬರಗಾಲದ ಸಂಕಷ್ಟದಿಂದ ನರಳುತ್ತಿದ್ದಾರೆ.

ರಾಜ್ಯ ಸರ್ಕಾರ 2000 ರೂಪಾಯಿ ಭಿಕ್ಷಾ ರೂಪದ ಪರಿಹಾರ ಬೇಡ.

ರೈತರ ನೆರವಿಗೆ ಬಾರದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಜಕೀಯ ಚೆಲ್ಲಾಟ ಆಡುತ್ತಿದ್ದಾರೆ.  

 ಬರ ಪರಿಹಾರ ನಷ್ಟ ಎಕರೆಗೆ ಕನಿಷ್ಠ 25,000 ರೂ ಬಿಡುಗಡೆ ಮಾಡಬೇಕು ಎಂದರು.

ಕೇಂದ್ರ ಸರ್ಕಾರ ಸಕ್ಕರೆ ರಪ್ತು ನಿಷೇಧ, ಎಥನಾಲ್ ಉತ್ಪಾದನೆಗೆ ತಡೆ ಹಾಕಿದೆ.

ಕಬ್ಬು ಬೆಳೆಯುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ರೈತರಿಗೆ ಆತಂಕ ಸೃಷ್ಟಿಯಾಗುತ್ತಿದೆ

ಕೇಂದ್ರ ಸರ್ಕಾರ ಮರುಪರಿಶೀಲನೆ ನಡೆಸಲಿ ಎಂದು ಒತ್ತಾಯಿಸಿದರು.  

ಪಂಜಾಬ್ ರಾಜ್ಯದಲ್ಲಿ ಟನ್ ಕಬ್ಬಿಗೆ 4000 ನಿಗದಿ ಮಾಡಿದ್ದಾರೆ.

ರಾಜ್ಯದಲ್ಲಿ ಎರಡು ಮೂರು ಸಭೆಗಳಾದರೂ ಸಕ್ಕರೆ ಕಾರ್ಖಾನೆಗಳನ್ನು ಮಣಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ.

ತೂಕದಲ್ಲಿ, ಇಳುವರಿಯಲ್ಲಿ ಹಾಗೂ ಹಣ ಪಾವತಿಯಲ್ಲಿ ಮೋಸ ಮಾಡುತ್ತಿದ್ದಾರೆ.

ಆದರೆ, ಸರ್ಕಾರ ಕಾರ್ಖಾನೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದರು.  

ಕಬ್ಬು ಉತ್ಪಾದನೆ ವೆಚ್ಚ ಕಡಿಮೆ ಮಾಡಿ. ಕಬ್ಬು ಬೇಸಾಯ ಕೂಲಿ ಕಾರ್ಮಿಕರ ಸಮಸ್ಯೆ ತಪ್ಪಿಸಲು ಎನ್ಆರ್‌ಇಜಿ ಯೋಜನೆ ಲಿಂಕ್ ಮಾಡಬೇಕು.  

ಬಾಳೆ ಬೇಸಾಯಕ್ಕೆ ನೀಡಿರುವ ರೀತಿ ಎಲ್ಲಾ ಕೃಷಿ ಬೆಳೆಗಳಿಗೂ  ಬೆಳೆ ವಿಮೆ ನೀಡಲಿ.

ಬೆಳೆವಿಮೆ ಸರಳೀಕರಣಗೊಳಿಸಬೇಕು.

ಅತಿವೃಷ್ಟಿ ಬರನಷ್ಟ ಪರಿಹಾರ ಬೆಳೆವಿಮೆ ವ್ಯಾಪ್ತಿಯಲ್ಲಿ ನಷ್ಟ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.  

60 ವರ್ಷ ಪೂರೈಸಿದ ರೈತರಿಗೆ ತಿಂಗಳಿಗೆ ಕನಿಷ್ಠ 5000 ಪಿಂಚಣಿ ಯೋಜನೆ ಜಾರಿ ಮಾಡಿ.

ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ತಪ್ಪಿಸಬಾರದು.  

ವಿದ್ಯುತ್ ಖಾಸಗೀಕರಣ ನೀತಿಯನ್ನು ಕೇಂದ್ರ ಸರ್ಕಾರ ಕೈಬಿಡಬೇಕು.

ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ವೇಳೆ ನಿರಂತರ 10 ಗಂಟೆಗಳ ವಿದ್ಯುತ್ ನೀಡಬೇಕು.

ಕೃಷಿ ಪಂಪ್‌ಸೆಟ್‌ಗಳಿಗೆ ಸೋಲಾರ್ ವಿದ್ಯುತ್ ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ 60% ಸಹಾಯಧನವಿದೆ.

ಕೇಂದ್ರದ ಕುಸುಮ ಯೋಜನೆಗೆ ರಾಜ್ಯ ಸರ್ಕಾರ ಶೇಕಡ 30ರಷ್ಟು ಸೇರಿಸಲಿ.

ಈ ಸಹಾಯಧನ ನೀಡುವುದರಿಂದ ರೈತರಿಗೆ ಹಗಲು ವೇಳೆ ಯಾವುದೇ ಸಮಸ್ಯೆ ಆಗುವುದಿಲ್ಲ.  

ವಿದ್ಯುತ್ ಸಿಗುತ್ತದೆ ಎಂದು ಹೇಳಿದ್ದಾರೆ.

ರೈತನ ಮಗನ ಮದುವೆಯಾಗುವ ವಧುವಿಗೆ ಸರ್ಕಾರಿ ಕೆಲಸದಲ್ಲಿ ಶೇಕಡ 10 ಮೀಸಲಾತಿ ನೀಡಲಿ.

ಇದರಿಂದ ರೈತರ ಮಕ್ಕಳನ್ನು ಅಪಾಯದಿಂದ ಪಾರು ಮಾಡಬಹುದು ಎಂದರು.

ರೈತರಿಗೆ ಊಟದ ವ್ಯವಸ್ಥೆ ರೈತರಿಂದಲೇ ನಿರ್ವಹಣೆ

ಒಂದೊಂದು ಜಿಲ್ಲೆ ರೈತರೇ ಒಂದೊಂದು ವ್ಯವಸ್ಥೆ ವಹಿಸಿಕೊಂಡಿದ್ದಾರೆ.  ಗುಲ್ಬರ್ಗ ಜಿಲ್ಲೆಯಿಂದ ರೊಟ್ಟಿ ಚಟ್ನಿ ತರಲಾಗುತ್ತಿದೆ.

ಚಾಮರಾಜನಗರ ಜಿಲ್ಲೆಯಿಂದ ಬೆಲ್ಲದ ಕಾಯಿ ಮಿಠಾಯಿ ಸಿಹಿತಿಂಡಿ.

ಮೈಸೂರು ಜಿಲ್ಲೆಯಿಂದ ಉದ್ದಿನ ಹಪ್ಪಳ ಮತ್ತು ಉಪ್ಪಿನಕಾಯಿ. ಗದಗ ಜಿಲ್ಲೆಯಿಂದ ಅನ್ನದ ವ್ಯವಸ್ಥೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಸಾಂಬರ್ ತಯಾರಿಸಲು ತರಕಾರಿ ಎಣ್ಣೆ ಬೇಳೆ ತರಲಾಗುತ್ತಿದೆ.

ಶಿವಮೊಗ್ಗ ಜಿಲ್ಲೆಯಿಂದ ಅಡಿಕೆ ಊಟದ ತಟ್ಟೆ ಪೂರೈಸುತ್ತಿದ್ದಾರೆ.

ಆಯಾ ಜಿಲ್ಲೆಯ ರೈತರೇ ಸ್ವಯಂ ಪ್ರೇರಿತರಾಗಿ ಒಪ್ಪಿದ್ದಾರೆ.

ಸ್ವಾಭಿಮಾನದ ಸ್ವಾವಲಂಬಿ ಚಳುವಳಿ ಆಗಬೇಕೆಂಬ ಉದ್ದೇಶದಿಂದ

ಈ ಅಧಿವೇಶನ ಆಯೋಜಿಸಲಾಗಿದೆ. ಅಧಿವೇಶನಕ್ಕೆ ಬರುವ ರೈತರೆ ಸ್ವಂತ ಖರ್ಚಿನಿಂದ ಬರುತ್ತಿದ್ದು

ಖರ್ಚಿಗಾಗಿ ಪ್ರತಿಯೊಬ್ಬರು ಐವತ್ತು ರೂಪಾಯಿ ದೇಣಿಗೆ ನೀಡುತ್ತಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಮತ ದಳ ವೆಂಕಟಸ್ವಾಮಿ. ಕರ್ನಾಟಕ ರಾಜ್ಯ ರೈತ ಸಂಘದ ನಾರಾಯಣ ರೆಡ್ಡಿ, ರಾಜ್ಯ ಕಬ್ಬು

ಬೆಳೆಗಾರ ಸಂಘದ ಹತ್ತಳ್ಳಿದೇವರಾಜ್ , ಕನ್ನಡ ಚಳುವಳಿ ಜಿ ನಾರಾಯಣ್ ಕುಮಾರ್ ಸಂಘಟನೆ

ರಾಜ್ಯಾಧ್ಯಕ್ಷಗುರುದೇವ್ ನಾರಾಯಣ ಕುಮಾರ್,  ವಕೀಲ ಅಮರೇಶ್ ಸಿ ಎಚ್ ಗುರುಮೂರ್ತಿ ಇದ್ದರು.