News

ಬನ್ನೂರಿಗೆ ತುಂಗಭದ್ರಾದಿಂದ ಕುಡಿಯುವ ನೀರು: ಸಿಎಂ

30 April, 2023 6:09 PM IST By: Kalmesh T
Drinking water from Tungabhadra to Bannuri: CM

ಬನ್ನೂರಿಗೆ ಇರುವ ಎಲ್ಲ ಸಂಪರ್ಕ ರಸ್ತೆಗಳ ಅಭಿವೃದ್ಧಿ ಮಾಡಿದ್ದೇವೆ. ಬನ್ನೂರಿಗೆ ತುಂಗಭದ್ರಾದಿಂದ ಕುಡಿಯುವ ನೀರು ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬನ್ನುರು ಗ್ರಾಮದಲ್ಲಿ ರಾಜಕೀಯ ನಾಯಕತ್ವ ಇರುವ ಗ್ರಾಮ. ಈ ಗ್ರಾಮದಲ್ಲಿ ಏನು ನಿರ್ಣಯ ಆಗುತ್ತದೆ ಅದು ಇಡೀ ಕ್ಷೇತ್ರದ‌ ಮೇಲೆ ಪರಿಣಾಮ ಬೀರುತ್ತದೆ.

ಈ ಗ್ರಾಮದಲ್ಲಿ ಎಲ್ಲರೂ ಪರಿಚಯಸ್ಥರು ಇದ್ದಾರೆ. ಈ ಗ್ರಾಮದ ಸಮಗ್ರ ಅಭಿವೃದ್ಧಿಗೆ ಕಂಕಣ ಬದ್ದರಾಗಿದ್ದೇವೆ. ಕಾಂಕ್ರಿಟ್ ರಸ್ತೆ, ಕುಡಿಯುವ ನಿರಿಗೆ 1.17 ಕೋಟಿ ವೆಚ್ಚದಲ್ಲಿ ಮನೆ ಮನೆಗೆ‌ ಕುಡಿಯುವ ನೀರು ಒದಗಿಸುವ ಮನೆ ಮನೆಗೆ ಗಂಗೆ ಯೋಜನೆ ಜಾರಿಗೆ ತಂದಿದ್ದೇವೆ.

ಪ್ರತಿ ವರ್ಷ ಕೇಂದ್ರದಿಂದ 12,000 ಕೋಟಿ ಬರುತ್ತದೆ. ರಾಜ್ಯದಿಂದಲೂ ಅಷ್ಟೇ ಪ್ರಮಾಣದ ‌ಹಣ ನೀಡಿ ಈ ಯೋಜನೆ ರೂಪಿಸಿದ್ದೇವೆ.

ಈ ಗ್ರಾಮಕ್ಕೆ ತುಂಗ ಭದ್ರಾದಿಂದ ನೀರು ತರಲಾಗುತ್ತದೆ. ಇದರಿಂದ ತಾಯಂದಿರಿಗೆ ಹೆಚ್ಚು ಅನುಕೂಲವಾಗಲಿದೆ.

ಬನ್ನೂರಿಗೆ ಇರುವ ಎಲ್ಲ ಸಂಪರ್ಕ ರಸ್ತೆಗಳ ಅಭಿವೃದ್ಧಿ ಮಾಡಿದ್ದೇವೆ. ನಿಮ್ಮ ಆಶೀರ್ವಾದದಿಂದ ನಾನು ಮುಖ್ಯಮಂತ್ರಿ ‌ಸ್ಥಾನ ಅಲಂಕರಿಸಿದ್ದೇನೆ. ಇದಕ್ಕೆ ಕಾರಣ ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಕಾರಣ ಎಂದರು.

ನಾನು ವಿದ್ಯಾನಿಧಿ ಯೊಜನೆ ಜಾರಿಗೆ ತಂದಿದ್ದೇನೆ. ರೈತರ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆ ಪಡೆಯುವುದರಿಂದ ಅವರ ಆರ್ಥಿಕ ಪರಿಸ್ಥಿತಿ  ಸುಧಾರಿಸುತ್ತದೆ.

ಸಾಮಾಜಿಕ ನ್ಯಾಯ ಒದಗಿಸಲು ಮೀಸಲಾತಿ‌ ಹೆಚ್ಚಳ ಮಾಡಿದ್ದೇನೆ. ಎಲ್ಲ ಜಾತಿ ಸಮುದಾಯದ ದೆವಸ್ಥಾನಗಳಿಗೂ ಅನುದಾನ ನಿಡಿದ್ದೇನೆ.

ಯಾವುದೇ ಬೇಧ ಮಾಡದೇ ಸಹಾಯ ಮಾಡಿದ್ದೇನೆ.‌ ಈ ಬಾರಿ ಎರಡು ಪಟ್ಟು ಹೆಚ್ಚಿನ ಮತ ನೀಡಿ ಆಶೀರ್ವದಿಸಬೇಕು ಎಂದರು.

ತವರು ಕ್ಷೇತ್ರದಲ್ಲಿ ಸಿಎಂ ಬೊಮ್ಮಾಯಿ‌ ಭರ್ಜರಿ ಪ್ರಚಾರ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ತಮ್ಮ ಸ್ವ ಕ್ಷೇತ್ರ ಶಿಗ್ಗಾಂವ-ಸವಣೂರಿನಲ್ಲಿ ಭರ್ಜರಿ ಪ್ರಚಾರ ನಡೆಸಿದರು . ಕ್ಷೇತ್ರದ ವಿವಿಧ ಹಳ್ಳಿಹಳ್ಳಿಗೆ ಭೇಟಿ ನೀಡಿ, ಕ್ಷೇತ್ರದ ಅಭಿವೃದ್ಧಿಗೆ ಸದಾ ಕಂಕಣಬದ್ಧನಾಗಿದ್ದೇನೆ ಎಂದು ಹೇಳಿದರು.

ಎನ್. ಎಂ ತಡಸ ಗ್ರಾಮಕ್ಕೆ ಭೇಟಿ ನೀಡಿ ಸಿಎಂ ತಡಸ ಗ್ರಾಮ, ಪ್ರಗತಿಪರ ರೈತರ ಊರು. ಸಹಕಾರಿ ರಂಗದಲ್ಲಿಯೂ ಒಳ್ಳೆಯ ಹೆಸರು ಪಡೆದಿರುವ ಗ್ರಾಮ. ನಾನು ಪ್ರತಿ ಬಾರಿಯೂ ಈ ಭಾಗದಿಂದ ಪ್ರಚಾರ ಕಾರ್ಯ ಆರಂಭಿಸುತ್ತೇನೆ.

ಅಡವಿ ಸೋಮಾಪುರ ಎನ್ ಎಂ ತಡಸ್ ಗ್ರಾಮದ ರಸ್ತೆ, ಎಲ್ಲ ಸಮುದಾಯದ ಸಭಾ ಭವನ, ಉಳಿದಿರುವ ಎಲ್ಲ ಕೆಲಸಗಳನ್ನು ನಿರಂತರವಾಗಿ ಮಾಡುತ್ತೇವೆ. ಕಳೆದ ಹದಿನೈದು ವರ್ಷ ಮಾಡಿದ ಕೆಲಸವನ್ನು ಮುಂದಿನ ಐದು ವರ್ಷದಲ್ಲಿ ಮಾಡುತ್ತೇನೆ.

ಮುಂದಿನ ಅವಧಿಗೆ ನಮ್ಮ ಸರ್ಕಾರ ಬರುತ್ತದೆ. ಅಭಿವೃದ್ಧಿಗಾಗಿ ನಾನು ಶ್ರಮ ವಹಿಸಿದ್ದೇನೆ. ಈ ಬಾರಿ ತಾಲೂಕಿನಲ್ಲಿ ಬಿಜೆಪಿ ಪರ ಅಲೆ ಇದೆ‌ ಈ ಬಾರಿ ಕಳೆದ ಬಾರಿಗಿಂತ ಹೆಚ್ಚಿನ ಮತಗಳಿಂದ ಆಯ್ಕೆ ಮಾಡಿ.

ಇಲ್ಲಿ ಪಶು ವೈದ್ಯಕೀಯ ಆಸ್ಪತ್ರೆಗೆ ವೈದ್ಯರ ನೇಮಕ ಪ್ರಕರಣ ಕೋರ್ಟ್ ನಲ್ಲಿದೆ. ಅದಕ್ಕೆ ಪರಿಹಾರ ಪರಿಹಾರ ಆದ ತಕ್ಷಣ ವೈದ್ಯರ ನೇಮಕ ಮಾಡಿಕೊಳ್ಳಲಾಗುವುದು ಎಂದರು.

ಶಿಗ್ಗಾಂವಿಯ ಹಿರೇ ಬೆಂಡಿಗೇರಿ ಗ್ರಾಮಕ್ಕೆ ಕುಡಿಯುವ ನೀರು ಬರುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಶಿಗ್ಗಾವಿ ಏತ ನೀರಾವರಿ ಮೂಲಕ ಕೆರೆ ತುಂಬಿಸುವ ಕೆಲಸ ಮಾಡಿದ್ದು, ಆದಷ್ಟು ಬೇಗ ಮಳೆಯಾಗಿ ಕೆರೆ ತುಂಬಲಿ.

ಈ ಗ್ರಾಮದ ಎಲ್ಲ ರಸ್ತೆಗಳು ಕಾಂಕ್ರೀಟ್ ಆಗಿದೆ. ನನ್ನ ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಕುಡಿಯುವ ನೀರಿನ ಯೋಜನೆ ಮೂಲಕ ಪ್ರತಿ ಮನೆಗೂ 1.20 ಕೋಟಿ ವೆಚ್ಚದಲ್ಲಿ ಅನುಷ್ಠಾನ ಗೊಳಿಸಲಾಗುವುದು‌ ಎಂದರು.