News

Mysuru Dasara: ನಾಡಹಬ್ಬ ದಸರಾಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ!

26 September, 2022 3:47 PM IST By: Kalmesh T
Draupadi Murmu drive for Nadahabba Dussehra!

Mysuru Dasara 2022: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಾಡಹಬ್ಬ ದಸರೆಗೆ ಚಾಲನೆ ನೀಡಿದರು. ದೇಶದಲ್ಲೆ  ಮೊದಲ ಬಾರಿಗೆ ಬುಡಕಟ್ಟು ಮಹಿಳೆಯೊಬ್ಬರು ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದು ಕೆಲ ದಿನಗಳ ಹಿಂದೆ ನಾವೆಲ್ಲ ಓದಿದ್ದ ಸುದ್ದಿ.

ಇಂದು ಅದೆ ಮೊದಲ ಬುಡಕಟ್ಟು ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಾಡಹಬ್ಬ ದಸರೆಯ ಉದ್ಘಾಟನೆಯನ್ನು ಮಾಡಿದ್ದಾರೆ

ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಮಾನ ನಿಲ್ದಾಣದಿಂದ ನೇರವಾಗಿ ಚಾಮುಂಡಿ ಬೆಟ್ಟಕ್ಕೆ  ತೆರಳಿ ಚಾಮುಂಡಿ ದೇವಿಯ ದರ್ಶನ ಪಡೆದರು.

ಮೈಸೂರು ದಸರಾ-ಇಂದು ಯಾವ ಕಾರ್ಯಕ್ರಮ?

ಮಧ್ಯಾಹ್ನ 12- ಕೈಗಾರಿಕಾ ದಸರಾ ಉದ್ಘಾಟನೆ
ಮಧ್ಯಾಹ್ನ 12:30 - ಶಿವರಾಜ್​ಕುಮಾರ್​ರಿಂದ ಚಲನಚಿತ್ರೋತ್ಸವ ಉದ್ಘಾಟನೆ
ಮಧ್ಯಾಹ್ನ12.30 -  ಫಲಪುಷ್ಪ ಪ್ರದರ್ಶನ ಉದ್ಘಾಟನೆ
ಮಧ್ಯಾಹ್ನ 1- ಆಹಾರ ಮೇಳ ಉದ್ಘಾಟನೆ
ಮಧ್ಯಾಹ್ನ 3:30- ದಸರಾ ಕುಸ್ತಿ ಪಂದ್ಯಾವಳಿ ಉದ್ಘಾಟನೆ
ಮಧ್ಯಾಹ್ನ 4:00- ದಸರಾ ವಸ್ತು ಪ್ರದರ್ಶನ ಉದ್ಘಾಟನೆ
ಸಂಜೆ 5-  ಯೋಗ ದಸರಾ ಉದ್ಘಾಟನೆ
ಸಂಜೆ 6-ಅರಮನೆ ವೇದಿಕೆ ಕಾರ್ಯಕ್ರಮ, ಸಿಎಂ ಉದ್ಘಾಟನೆ
ಸಂಜೆ‌ 6:30 - ವಿದ್ಯುತ್ ದೀಪಾಲಂಕಾರ ಉದ್ಘಾಟನೆ

ಇಂದು ಸಿಂಹಾಸನಕ್ಕೆ ವಜ್ರ ಖಚಿತ ಸಿಂಹದ ತಲೆ ಜೋಡಣೆ ಮಾಡಲಾಗುತ್ತದೆ. ನಂತರ ಕೋಡಿ ಸೋಮೇಶ್ವರ ದೇವಸ್ಥಾನಕ್ಕೆ ತೆರಳಿ ಕಳಶ ತಂದು, ಚಾಮುಂಡಿ ತೊಟ್ಟಿಯಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್​ ಕಂಕಣ ಧಾರಣೆ ಮಾಡಲಿದ್ದಾರೆ.

ಇಂದು ಪಟ್ಟದ ಆನೆ, ಹಸು, ಒಂಟೆ, ಕುದುರೆಗಳಿಗೆ ಪೂಜೆ ನಡೆಯಲಿದೆ. 8ನೇ ಬಾರಿಗೆ ಯದುವೀರ್ ರಿಂದ ಖಾಸಗಿ ದರ್ಬಾರ್ ನಡೆಸಲಿದ್ದಾರೆ.