News

ಡ್ರ್ಯಾಗನ್ ಫ್ರೂಟ್ ಇನ್ಮುಂದೆ ಕಮಲಂ

21 January, 2021 9:26 AM IST By:
Dragon fruit

ಊರುಗಳ, ನಗರಗಳ, ಸಂಘಸಂಸ್ಥೆಗಳ, ಪಕ್ಷಗಳ ಹಾಗೂ ಮನುಷ್ಯರ, ಪ್ರಾಣಿ ಪಕ್ಷಗಳ ಹೆಸರನ್ನು ಬದಲಾಯಿಸುವುದನ್ನು ಕೇಳಿದ್ದೇವೆ. ಈಗ  ಹೆಸರು ಬದಲಾಯಿಸುವ ಸರದಿ ಹಣ್ಣುಗಳಿಗೂ ಬಂದಿದೆ.

ಹೌದು, ಗುಜರಾತಿನ ಬಿಜೆಪಿ ಸರ್ಕಾರ ಡ್ರ್ಯಾಗನ್ ಹಣ್ಣಿಗೆ ಕಮಲಂ ಎಂದು ಮರುನಾಮಕರಣ ಮಾಡಿದೆ. ಇದು ವಿದೇಶಿ ಹಣ್ಣಾದರೂ ಭಾರತದಲ್ಲಿ ಪ್ರಖ್ಯಾತಿಯಾಗಿರುವ ಹಣ್ಣುಗಳಲ್ಲಿ  ಒಂದು ಡ್ರ್ಯಾಗನ್ ಫ್ರೂಟ್.  ಈ ಡ್ರ್ಯಾಗನ್ ಫ್ರೂಟ್ ಇನ್ನು ಮುಂದೆ ಭಾರತದಲ್ಲಿ ಕಮಲಂ ಎಂದು ಗುರುತಿಸಕೊಳ್ಳಲಿದೆ. ಡ್ರ್ಯಾಗನ್ ಹಣ್ಣಿನ ವೈಜ್ಞಾನಿಕ ಹೆಸರು ಹಿಲೋಸೆರಸ್ ಅಂಡಸ್ (Hiloceras Undus). ಹಣ್ಣಿನಲ್ಲಿ ಡ್ರ್ಯಾಗನ್ ಎಂಬ ಪದವನ್ನು ಬಳಸುವುದು ಸರಿಯಲ್ಲ ಎಂಬುದು ಗುಜರಾತ್ ಸರ್ಕಾರದ ವಾದ.  ಡ್ರ್ಯಾಗನ್ ಹಣ್ಣು (Dragon Fruit) ಕಮಲವನ್ನು ಹೋಲುತ್ತದೆ. ಆದ್ದರಿಂದ, ಈ ಹಣ್ಣನ್ನು ಕಮಲಂ (Kamalam) ಎಂದು ಕರೆಯುವುದು ಸೂಕ್ತ ಎಂದಿದೆ ಗುಜರಾತ್ ಸರ್ಕಾರ ತಿಳಿಸಿದೆ.

ಇದು ಸಾಮಾಜಿಕ ಜಾಲತಾಣದಲ್ಲಿಯೂ ಟ್ರೋಲ್ ಆಗಿದೆ. ಹಿಂದಿಯಲ್ಲಿ ಪಿತಾಯಾ ಎಂದು ಕರೆಯಲಾಗುವುವ ಡ್ರ್ಯಾಗನ್ ಫ್ರೂಟ್ ಗುಲಾಬಿ ಬಣ್ಣದಲ್ಲಿದ್ದು, ಕಮಲದ ಆಕಾರ ಹೋಲುತ್ತದೆ.

ಡ್ರ್ಯಾಗನ್ ಹಣ್ಣಿಗೆ ಕಮಲಂ ಹೆಸರು ಪಡೆಯಲು ಪೇಟೆಂಟ್ ಗೆ ಅರ್ಜಿ ಹಾಕಲಾಗಿದೆ. ಹೆಸರು ಬದಲಾವಣೆ ಹಿಂದೆ ಯಾವುದೇ ರಾಜಕೀಯ ಇಲ್ಲ ಎಂದು ಸಿಎಂ ವಿಜಯ ರೂಪಾಣಿ ಟ್ವೀಟ್ ಮಾಡಿದ್ದಾರೆ.