News

1 ರಿಂದ 10ನೇ ತರಗತಿಯ ಪಠ್ಯಪುಸ್ತಕ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕಿ ಮಾಡಿ

08 April, 2021 5:14 PM IST By:
Mobile checking

1 ರಿಂದ 10ನೇ ತರಗತಿಯ ಮಕ್ಕಳ ಪಾಲಕರಿಗಿಲ್ಲದೆ ಸಂತಸದ ಸುದ್ದಿ. ಈಗ ನೀವು ಮೊಬೈಲ್ ನಲ್ಲಿಯೇ 1 ರಿಂದ 10ನೇ ತರಗತಿಯ ಪಠ್ಯಪುಸ್ತಕಗಳ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ…. ಇಲ್ಲಿದೆ ಸಂಪೂರ್ಣ ಮಾಹಿತಿ.

ಕೊರೋನಾದಿಂದಾಗಿ ನಾಲ್ಕು ಗೋಡೆಗಳ ಮಧ್ಯೆ ಸೀಮಿತವಾಗಿರುವ ಮಕ್ಕಳು ಶಾಲೆಗೂ ಹೋಗದೆ ಕೇವಲ ಆನ್ಲೈನ್ ನಲ್ಲಿಯೇ ಕಲಿಯುವಂತಾಗಿದೆ. ಆದರೆ ಇನ್ನೂ ಎಷ್ಟೋ ಪಾಲಕರಿಗೆ ಶಾಲೆಯ ಶುಲ್ಕ ಕಟ್ಟಕ್ಕಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ತಮ್ಮ ಮಕ್ಕಳಿಗೆ ಶಾಲೆಗೂ ಕಳಿಸದೆ ಮೊಬೈಲ್ ಸಮಸ್ಯೆ, ಇಂಟರ್ ನೆಟ್ ಸಮಸ್ಯೆಯಿಂದ ಆನ್ ಲೈನ್ ಕ್ಲಾಸ್ ಅಟೆಂಡ್ ಮಾಡಕ್ಕೂ ಆಗದೆ ಸಮಸ್ಯೆ ಪಠ್ಯಪುಸ್ತಕ ಸಮಸ್ಯೆ ಎದುರಿಸುತ್ತಿರುವ ಮಕ್ಕಳಿಗೆ ಹಾಗೂ ಪಾಲಕರಿಗೆ  ಅನುಕೂಲವಾಗುತ್ತದೆ.

 ಕೊರೋನಾದಿಂದಾಗಿ ಕೆಲವು ಪಾಲಕರಿಗೆ ಪಠ್ಯಪುಸ್ತಕ ಖರೀದಿ ಮಾಡಕ್ಕೂ ಆಗುತ್ತಿಲ್ಲ.  ಪಾಲಕರ ಸಮಸ್ಯೆಗಳನ್ನು ಆರಿತು ಕರ್ನಾಟಕ ಸರ್ಕಾರವು 1 ರಿಂದ 10ನೇ ತರಗತಿಯ ಮಕ್ಕಳಿಗೆ ಪಿಡಿಎಫ್ ರೂಪದಲ್ಲಿ ಪಠ್ಯಪುಸ್ತಕಗಳನ್ನು ಲಭಿಸುವಂತೆ ಮಾಡಿದೆ. ಈಗ ಎಲ್ಲಾ ತರಗತಿಯ ಪಠ್ಯಪುಸ್ತಕಗಳನ್ನು ಮೊಬೈಲಿನಲ್ಲಿಯೇ ಡೌನ್ಲೋಡ್ ಮಾಡಿಕೊಳ್ಳಬಹುದು.

ಇಂಗ್ಲೀಷ್ ಮಾಧ್ಯಮ, ಕನ್ನಡ ಮಾಧ್ಯಮ, ತೆಲುಗು, ಉರ್ದು, ಹಿಂದಿ ಯಾವುದೇ ಮಾಧ್ಯಮವಿರಲಿ, ಆ ಮಕ್ಕಳು ಪಠ್ಯಪುಸ್ತಕಗಳನ್ನು ಮೊಬೈಲಿನಲ್ಲಿಯೇ ಡೌನ್ಲೋಡ್ ಮಾಡಿಕೊಳ್ಳಬಹುದು. ಕನ್ನಡ, ಇಂಗ್ಲೀಷ್, ಗಣಿತ, ಸಮಾಜವಿಜ್ಞಾನ, ಹೀಗೆ ಎಲ್ಲಾ ಭಾಷೆಗಳು ಈಗ ಮೊಬೈಲಿನಲ್ಲಿಯೇ ಲಭ್ಯವಾಗಲಿದೆ. ಇದಕ್ಕೆ ನೀವು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿದರೆ ಸಾಕು… http://www.ktbs.kar.nic.in/New/index.html#!/textbook  ಕರ್ನಾಟಕ ಟೆಕ್ಟ್ ಬುಕ್ ಸೊಸೈಟಿ ಬೆಂಗಳೂರು ವೆಬ್ ಪೇಜ್ ಓಪನ್ ಆಗುತ್ತದೆ. ಇಲ್ಲಿದೆ ನೀವು ಯಾವ ತರಗತಿ, ಮಾಧ್ಯಮ (ಇಂಗ್ಲೀಷ್, ಕನ್ನಡ, ತೆಲಗು, ಉರ್ದು, ಮರಾಠಿ) ಯಾವ ಮಾಧ್ಯಮ ಬೇಕು ಆ ಮಾಧ್ಯಮ ಸೆಲೆಕ್ಟ್ ಮಾಡಿಕೊಳ್ಳಬೇಕು. ನಂತರ ಯಾವ ವಿಷಯ ಎಂಬುದನ್ನು ಆಯ್ಕೆ ಮಾಡಿಕೊಂಡು ಫುಲ್ ಟೆಕ್ಸ್ಟ್ ಬುಕ್ ಡೌನ್ಲೋಡ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇಡೀ ಪುಸ್ತಕ ಡೌನ್ಲೋಡ್ ಆಗುತ್ತದೆ.

ಇದೇ ರೀತಿ ಒಂದೊಂದಾಗಿ ತರಗತಿ ಮಾಧ್ಯಮ ಹಾಗೂ ವಿಷಯ ಸೆಲೆಕ್ಟ್ ಮಾಡಿಕೊಂಡು ಡೌನ್ಲೋಡ್ ಮಾಡಿ ಮಕ್ಕಳಿಗೆ ಮನೆಯಲ್ಲಿಯೇ ಅಭ್ಯಾಸ ಮಾಡಿಸಬಹುದು. ಇತ್ತೀಚೆಗೆ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಮುಂದಿನ ತರಗತಿಯ ಟೆಕ್ಸ್ಟ್ ಬುಕ್ ಸಹ ಡೌನ್ಲೋಡ್ ಮಾಡಿಕೊಂಡು ಮನೆಯಲ್ಲಿಯೇ ಮಕ್ಕಳನ್ನು ಓದಿಸಬಹುದು. ಮಕ್ಕಳನ್ನು ಕಲಿಕೆಯಲ್ಲಿ ನಿರತರಾಗಿರುವಂತೆ ಮಾಡಲು ಇದು ಸಹಕಾರಿಯಾಗಲಿದೆ.