News

ಬೆಳೆ ನಾಶಕ್ಕೆ ದುಪ್ಪಟ್ಟು ಪರಿಹಾರ: ಕೇವಲ 2 ತಿಂಗಳಲ್ಲಿ ಪರಿಹಾರ!

15 March, 2023 7:57 PM IST By: Kalmesh T
ಬೆಳೆ ನಾಶಕ್ಕೆ ದುಪ್ಪಟ್ಟು ಪರಿಹಾರ: ಕೇವಲ 2 ತಿಂಗಳಲ್ಲಿ ಪರಿಹಾರ!

ಬೆಳೆ ನಾಶಕ್ಕೆ ಕೇಂದ್ರ ಸರ್ಕಾರದ ಅನುದಾನಕ್ಕೆ ಎರಡು ಪಟ್ಟು ಹಣ ಒದಗಿಸಲಾಯಿತು. ಒಣ ಬೇಸಾಯ ಕ್ಕೆ 13600 ಒಂದು ಹೆಕ್ಟೇರಿಗೆ ನೀಡಲಾಯಿತು.

ನೀರಾವರಿಗೆ 12500 ಕೊಟ್ಟರೆ, ನಮ್ಮ ಸರ್ಕಾರ 25 ಸಾವಿರ ರೂ.ನೀಡಿತು. ಇದುವರೆಗೂ ಯಾವುದೇ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ದುಪ್ಪಟ್ಟು ಪರಿಹಾರ ಕೊಟ್ಟಿರುವುದು ಇತಿಹಾಸದಲ್ಲಿ ಯಾರೂ ಮಾಡಿಲ್ಲ. 

ಬೆಲೆ ನಾಶ ಆದ 2 ತಿಂಗಳಿಗೆ ಹಣ ಬಿಡುಗಡೆ ಮಾಡಲಾಗಿದೆ ಎಂದರು.

7768 ಮನೆಗಳಿಗೆ 200 ಕೋಟಿ ರೂ.ಗಳ ಹೆಚ್ಚುವರಿ ಪರಿಹಾರ

ಏಳೆಂಟು ಸಾವಿರ ಮನೆಗಳಿಗೆ ಪರಿಹಾರ ದೊರೆಯದಿದ್ದ ಸಂದರ್ಭದಲ್ಲಿ 200 ಕೋಟಿ ರೂ.ಗಳನ್ನು ಅಧಿಕವಾಗಿ ಬಿಡುಗಡೆ ಮಾಡಲಾಗಿದೆ. 7768 ಮನೆಗಳಿಗೆ ಪರಿಹಾರ ಹೆಚ್ಚುವರಿಯಾಗಿ ನೀಡಲಾಗಿದೆ. 

ಜನರ ಕಷ್ಟಕಾಲದಲ್ಲಿ ರಕ್ಷಣೆ ಹಾಗೂ ಪರಿಹಾರ ನೀಡುವುದು ಸರ್ಕಾರದ ಜೀವಂತಿಕೆ ಎಂದರು.

ಬೆಳಗಾವಿಯಲ್ಲಿ 1, 2, 370 ಮಕ್ಕಳಿಗೆ ರೈತ ವಿದ್ಯಾ ನಿಧಿ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಾಗೂ ನಮ್ಮ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ.  ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ 16 ಸಾವಿರ ಕೋಟಿ ರೂ.ಗಳನ್ನು ಒದಗಿಸಲಾಗಿದೆ.

ಅಲ್ಲದೇ 53 ಲಕ್ಷ ರೈತರಿಗೆ ನೇರವಾಗಿ ಅವರ ಖಾತೆಗಳಿಗೆ ಡಿಬಿಟಿ ಮೂಲಕ  ಹಣ ಪಾವತಿಯಾಗಿದೆ.ಪ್ರಧಾನ ಮಂತ್ರಿ ಆವಾಸ್ ಯೋಜನೆ, ಸ್ವಚ್ಛ ಭಾರತ, ಬೆಳಕು, ಉಜ್ವಲ ಮೂಲಕ ಗ್ಯಾಸ್ ಸಂಪರ್ಕ ನೀಡಲಾಗಿದೆ. 

ರೈತ ವಿದ್ಯಾ ನಿಧಿ ಯೋಜನೆಯಡಿ 13 ಲಕ್ಷ ರೈತರ ಮಕ್ಕಳಿಗೆ ಈ ಯೋಜನೆ ತಲುಪಿದೆ. ಬೆಳಗಾವಿಯಲ್ಲಿ 1, 2, 370 ಮಕ್ಕಳಿಗೆ ರೈತ ವಿದ್ಯಾ ನಿಧಿ ದೊರೆತಿದೆ.

ದುಡಿಯುವ ವರ್ಗ ಸಬಲರಾಗಿದ್ದಾಗ ರಾಜ್ಯದ   ಅಭಿವೃದ್ಧಿಯಾಗುತ್ತದೆ. ಸಮಸ್ಯೆ ಅರಿತು,  ಸಂವೇದನಾಶೀಲವಾಗಿ  ಸರ್ಕಾರ ಕೆಲಸ ಮಾಡುತ್ತಿದೆ. ಸ್ತ್ರೀ ಸಾಮರ್ಥ್ಯ ಯೋಜನೆಯಡಿ 50 ಸಾವಿನ  ಸಂಘಗಳಿಗೆ  ಆರ್ಥಿಕ ನೆರವು ನೀಡಲಾಗುತ್ತಿದೆ ಎಂದರು.