News

ರೈತಬಾಂಧವರೇ ಎಚ್ಚರ- ಮನೆಗೆ ಅನಾಮಧೇಯ ಬೀಜದ ಚೀಲ ಬಂದಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿ

28 August, 2020 6:39 PM IST By:

ರಾಜ್ಯದ  ಕೆಲವಡೆ ರೈತರ ವಿಳಾಸಕ್ಕೆ ಅನಾಮಧೇಯ ಬೀಜದ ಚೀಲಗಳನ್ನು ಬಂದಿರುವುದು ತಿಳಿದು ಬಂದಿದ್ದು, ಇದರ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ಬಹಳಷ್ಟು ಎಚ್ಚರಿಕೆವಹಿಸಿ ಆಕಸ್ಮಿಕವಾಗಿ ಇಂತಹ ಪಾರ್ಸಲ್ ಚೀಲಗಳು ಬಂದಲ್ಲಿ ಅವುಗಳನ್ನು ಒಡೆಯದೆ ತಮ್ಮ ಸಮೀಪದ ಕೃಷಿ ಇಲಾಖೆಯ ಕಚೇರಿಗೆ ಅಥವಾ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಕಳೆದ ವಾರವಷ್ಟೇ ಚೀನಾ ದೇಶದಿಂದ ಈ ರೀತಿಯ ಪಾರ್ಸಲ್ ಚೀಲಗಳು ಬರುತ್ತಿವೆ ಎಂಬುದಾಗಿ ಸುದ್ದಿ ವಾಹಿನಿಗಳಿಂದ  ತಿಳಿದು ಬಂದಿರುತ್ತದೆ. ಈ ಚೀಲಗಳಲ್ಲಿ ಬೀತನೆ ಬೀಜ ಹೊರತುಪಡಿಸಿ ರೋಗ ಹರಡುವ ವೈರಾಣುಗಳು ಅಥವಾ ಇನ್ನಿತರ ಮಾರಕ ಪದಾರ್ಥಗಳು ಕಳುಹಿಸಲಾಗುತ್ತಿದೆ ಎಂದು ಶಂಕಿಸಲಾಗಿದೆ.

ಹೀಗಾಗಿ ಈ ಪಾರ್ಸಲ್ ಚೀಲಗಳನ್ನು ತಂದು ಕೊಟ್ಟವರ ಹೆಸರು, ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ರೈತರು ಪಡೆದು ಈ ಕುರಿತು ಪೊಲೀಸರಿಗೆ ದೂರನ್ನು ಸಲ್ಲಿಸಬೇಕು. ಇದರಿಂದ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ರೈತರು ಕೃಷಿ ಇಲಾಖೆಗೆ ಹಾಗೂ ಸರ್ಕಾರಕ್ಕೆ ಸಹಕಾರ ನೀಡಬೇಕೆಂದು ಅವರು ಕೋರಿದ್ದಾರೆ.