News

ಸ್ವಯಂ ಉದ್ಯೋಗ ಆರಂಭಿಸಬೇಕೇ? ತಡಮಾಡದೆ ಇಲ್ಲಿ ಅರ್ಜಿ ಸಲ್ಲಿಸಿ

12 July, 2020 12:49 PM IST By:
Jobs

ಕೊರೋನಾ ಸೋಂಕಿನಿಂದಾಗಿ ಕೆಲಸ ಕಳೆದುಕೊಂಡಿದ್ದೀರಾ, ನಗರ ಪ್ರದೇಶಗಳಿಗೆ ಹೋಗಿ ಹೇಗೆ ಕೆಲಸ ಮಾಡಬೇಕೆಂಬ ಚಿಂತೆಯಲ್ಲಿದ್ದೀರಾ. ಇನ್ನೂ ಮುಂದೆ ಚಿಂತೆ ಬಿಟ್ಟುಬಿಡಿ. ಈ ಕೆಳಗಿನ ಮಾಹಿತಿಯನ್ನು ಓದಿ ನಿಶ್ಚಿಂತೆಯಿಂದಾಗಿ ಅರ್ಜಿ ಹಾಗಿ ಬದುಕು ಕಟ್ಟಿಕೊಳ್ಳಿ.

ಗ್ರಾಮೀಣ ಭಾಗದ ಜನರು ಸ್ವಯಂ ಉದ್ಯೋಗಕ್ಕಾಗಿ 2020-21ನೇ ಸಾಲಿನಲ್ಲಿ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ ಅಡಿ ಸಾಲ ಸೌಲಭ್ಯಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ 2020-21ನೇ ಸಾಲಿನ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ ಅಡಿ  ಗ್ರಾಮೀಣ ಪ್ರದೇಶದ ನಿರುದ್ಯೋಗ ಯುವಕ, ಯುವತಿಯರು ಸ್ವಯಂ ಉದ್ಯೋಗಕ್ಕೆ ಅರ್ಜಿ ಹಾಕಬಹುದು. ಸೇವಾ ಚಟುವಟಿಕೆಗಳಿಗೆ ಗರಿಷ್ಠ 10 ಲಕ್ಷ ರೂಪಾಯಿ ಹಾಗೂ ಇತರೆ ಕೈಗಾರಿಕೆಗಳಿಗೆ 25 ಲಕ್ಷ ರೂಪಾಯಿ ಯೋಜನಾ ವೆಚ್ಚಕ್ಕೆ ರಾಷ್ಟ್ರೀಕೃತ ಅಥವಾ ಗ್ರಾಮೀಣ ಬ್ಯಾಂಕುಗಳ ಮೂಲಕ ಸಾಲ ನೀಡಲಾಗುವುದು.  ಸಾಲಕ್ಕೆ ಮಂಜೂರು ಪಡೆದರೆ ಎರಡು ವಾರ ತರಬೇತಿಯನ್ನು ಸಹ ನೀಡಲಾಗುವುದು.

ಸಾಮಾನ್ಯ ವರ್ಗಕ್ಕೆ ಸಹಾಯಧನ ಶೇ.25 ಹಾಗೂ ವಿಶೇಷ ವರ್ಗದ ಪ.ಜಾತಿ ಹಾಗೂ ಪ.ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಮಾಜಿ ಸೈನಿಕರು, ಅಂಗವಿಕಲರು, ಮಹಿಳಾ ಫಲಾನುಭವಿಗಳಿಗೆ ಸಹಾಯಧನ ಶೇ.35 ಪಡೆಯಲು ಅವಕಾಶವಿರುತ್ತದೆ.

ಸ್ವಂತ ಬಂಡವಾಳವಾಗಿ ಸಾಮಾನ್ಯ ವರ್ಗದವರು ಶೇ.10 ಹಾಗೂ ವಿಶೇಷ ವರ್ಗದವರು ಶೇ.5 ಹೂಡಬೇಕು. ಅರ್ಹ ಫಲಾನುಭವಿಗಳು, ನಿಷೇಧಿತ ಚಟುವಟಿಕೆಗಳನ್ನು ಹೊರತುಪಡಿಸಿ ಹೊಸದಾಗಿ ಆರಂಭಿಸುವ ಕಿರು ಕೈಗಾರಿಕಾ ಮತ್ತು ಸೇವಾ ಚಟುವಟಿಕೆಗೆ ಮಾತ್ರ ಅವಕಾಶವಿರುತ್ತದೆ.

ಬ್ಯಾಂಕುಗಳು ಉದ್ದಿಮೆದಾರಿಗೆ ಸಾಲ ಮಂಜೂರುಮಾಡಿ ಮೊದಲನೆ ಕಂತಿನ ಹಣ ಬಿಡುಗಡೆ ಮಾಡಿದ ನಂತರ ಬ್ಯಾಂಕ್ಗುಳು ಅಂಚುಹಣ (ಮಿಡಲ್ ಎಂಡ್ ಸಬ್ಸಿಡಿ) ಕ್ಲೈಮ್ ಮಾಡಿ ಅಂಚು ಹಣವನ್ನು ಉದ್ದಿಮೆದಾರರ ಹೆಸರಿನಲ್ಲಿ ಟಿ.ಡಿ.ಆರ್.ಖಾತೆಯಲ್ಲಿ 3 ವರ್ಷ ಠೇವಣಿ ಇಡಬೇಕಾಗಿರುತ್ತದೆ. ಘಟಕ ಕೆಲಸ ಮಾಡುವುದನ್ನು ಪರಿಶೀಲಿಸಿದ ನಂತರ ಉದ್ದಿಮೆದಾರರ ಸಾಲದ ಖಾತೆಗೆ ಜಮಾ ಮಾಡಿಕೊಳ್ಳಲು ತಿಳಿಸಲಾಗುವುದು. ಟಿ.ಡಿ.ಆರ್. ಖಾತೆಯಲ್ಲಿ ಇಟ್ಟ ಹಣಕ್ಕೆ ಬ್ಯಾಂಕ್ಗಿಳು ಬಡ್ಡಿ ನೀಡಬೇಕಾಗಿಲ್ಲ ಹಾಗೂ ಉದ್ದಿಮೆದಾರರಿಗೆ ನೀಡಿದ ಅಷ್ಟೆ ಮೊತ್ತದ ಸಾಲದ ಹಣಕ್ಕೂ ಬ್ಯಾಂಕ್ ಬಡ್ಡಿ ವಿಧಿಸುವುದಿಲ್ಲ.

ಅರಣ್ಯ ಆಧಾರಿತ ಕೈಗಾರಿ, ಕೃಷಿ ಆಧಾರಿತ ಮತ್ತು ಆಹಾರ ಉದ್ದಿಮೆಗಳು, ಪಾಲಿಮರ್ ಮತ್ತು ರಾಸಾಯನಿಕ ಆಧಾರಿತ ಉದ್ದಿಮೆಗಳು, ಎಂಜನಿಯರಿಂಗ್ ಹಾಗೂ ಅಸಾಂಪ್ರದಾಟಿಕ ಶಕ್ತಿ ಹಾಗೂ ಸೇವಾ ಉದ್ದಿಮಗಳಿಗೂ ಸಾಲ ನೀಡಲಾಗುವುದು.

ಅರ್ಜಿಯ ಜೊತೆಗೆ ಸಲ್ಲಿಸಬೇಕಾದ ದಾಖಲಾತಿಗಳು:

ಆನ್‌ಲೈನ್‌ ಮೂಲಕ ಸಲ್ಲಿಸಿದ ಮುದ್ರಿತ ಅರ್ಜಿಯೊಂದಿಗೆ ಭಾವಚಿತ್ರಗಳು-2 ವಾಸಸ್ಥಳ ದೃಢೀಕರಣ ಪತ್ರ, ಯೋಜನಾ ವರದಿ, ಸ್ಥಾಪಿಸುವ ಘಟಕ ಗ್ರಾಮೀಣ ಪ್ರದೇಶವಾಗಿರುವುದಕ್ಕೆ ದಾಖಲಾತಿ, ಜಾತಿ ಪ್ರಮಾಣ ಪತ್ರ/ಮಾಜಿ ಸೈನಿಕ/ಅಂಗವಿಕಲರಾಗಿರುವುದಕ್ಕೆ ದಾಖಲಾತಿ, ವಿದ್ಯಾಭ್ಯಾಸ/ತಾಂತ್ರಿಕ ವಿದ್ಯಾರ್ಹತೆ ಪ್ರಮಾಣ ಪತ್ರದ ಪ್ರತಿ, ಯಂತ್ರೋಪಕರಣಗಳ ದರ ಪಟ್ಟಿ, ಪಂಚಾಯತ್ ಲೈಸೆನ್ಸ್, ಘಟಕದ ಕಟ್ಟಡದ ದಾಖಲಾತಿಗಳು, ಹಾಗೂ ಉದ್ಯಮಶೀಲತಾ ತರಬೇತಿ ಪಡೆದಿದ್ದರೆ ಅದರ ದಾಖಲಾತಿಗಳನ್ನು ಸಲ್ಲಿಸಬೇಕು. ವಿಶೇಷ ವರ್ಗಕ್ಕೆ ಸೇರಿದವರು ಅಗತ್ಯ ದಾಖಲಾತಿಗಳೊಂದಿಗೆ ದ್ವಿ ಪ್ರತಿಯಲ್ಲಿ ಸಲ್ಲಿಸಬೇಕು. ಈ ಕೆಳಗಿನ ಲಿಂಕ್ ಒತ್ತಿ ಇಲ್ಲೇ ಅರ್ಜಿ ಹಾಕಬಹುದು.

ಆನ್‌ ಲೈನ್‌ ಮೂಲಕ ಈ ಲಿಂಕ್ ಕ್ಲಿಕ್ ಮಾಡಿ  https://www.kviconline.gov.in/pmegpeportal/jsp/pmegponline.jsp ಅರ್ಜಿ ಸಲ್ಲಿಸಬಹುದು.

ಕೃಷಿ ಆಧಾರಿತ ಮತ್ತು ಆಹಾರ ಉದ್ದಿಮೆಗಳು:

ಏಕದಳ ,ಸಾಂಬಾರು ಪದಾರ್ಥಗಳ, ಹಪ್ಪಳ, ಸಂಡಿಗೆ ಮಸಾಲೆಪುಡಿಗಳ ಪರಿಷ್ಕರಣೆ, ಪ್ಯಾಕಿಂಗ್ ಮತ್ತು ಮಾರಾಟ, ನ್ಯೂಡಲ್ಸ್ಗತಳ ತಯಾರಿಕೆ, ಹಿಟ್ಟಿನ ಗಿರಣಿ, ಬೇಳೆಗಳನ್ನು ತಯಾರಿಸುವುದು, ಸಣ್ಣ ಅಕ್ಕಿ ನುಚ್ಚಮಾಡುವ ಘಟಕ, ಪನೆ ಬೆಲ್ಲ ತಯಾರಿಕೆ ಮತ್ತಿತ್ತರ ಪನೆ ಬೆಲ್ಲ ಉತ್ಪನ್ನಗಳ ಉದ್ದಿಮೆ, ಬೆಲ್ಲ ಮತ್ತು ಖಂಡಸಾರಿ, ಭಾರತೀಯ ಸಿಹಿ ತಂಡಿಗಳ ತಯಾರಿಕೆ, ಕಬ್ಬಿನ ರಸ ತೆಗೆಯುವ ಘಟಕ, ಜೇನು ಸಾಕಾಣೆ, ಹಣ್ಣು ಮತ್ತು ತರಕಾರಿಗಳ ಪರಿಷ್ಕರಣೆ ಹಾಗೂ ಉಪ್ಪಿನಕಾಯಿ ತಯಾರಿಕೆ, ಗಾಣ ಎಣ್ಣೆ ತಯಾರಿಕೆ, ಮೆಂಥಾಲ್ ಎಣ್ಣೆ ತಯಾರಿಕೆ, ತೆಂಗಿನ ನಾರು ಹಾಗೂ ಇತರೆ ನಾರು ಉದ್ದಿಮೆ, ವೈದ್ಯಕೀಯ ಉದ್ದೇಶಗಳಿಗಾಗಿ ಅರಣ್ಯ ಗಿಡಮೂಲಿಕೆಗಳ ಹಾಗೂ ಹಣ್ಣುಗಳ ಸಂಗ್ರಹಣೆ, ರಾಗಿ ಮತ್ತು ಮೆಕ್ಕೆ ಜೋಳದ ಪರಿಷ್ಕರಣೆ, ಬೆಂಡಿನ ಕೆಲಸ, ಚಾಪೆ ಹಾಗೂ ಹೂವಿನ ಹಾರಗಳು ಇತ್ಯಾದಿಗಳ ತಯಾರಿಕೆ, ಗೋಡಂಬಿ ಪರಿಷ್ಕರಣೆ, ಅಡಿಕೆ ಎಲೆಯ ತಟ್ಟೆ,ದೊನ್ನೆ ತಯಾರಿಕೆ, ಹಾಲಿನ ಉತ್ಪನ್ನಗಳ ಘಟಕ, .ಪಶು ಆಹಾರ,ಕೋಳಿ ಆಹಾರ ತಯಾರಿಕೆಗೂ ಸಾಲ ನೀಡಲಾಗುವುದು.

ರಕ್ಷಣಾಧಾರಿತ ಕೈಗಾರಿಕೆ:

ಕೈಕಾಗದ, ಕತ್ತಾಳೆ ನಾರು ತಯಾರಿಕೆ, ಗೊಂದು ಮತ್ತು ರೆಸಿನ್ಗಾಳ ತಯಾರಿಕೆ, ಷೆಲ್ಲಾಕ್ ತಯಾರಿಕೆ, ಗೃಹ ಬೆಂಕಿಕಡ್ಡಿ,ಪಟಾಕಿ ಹಾಗೂ ಅಗರಬತ್ತಿಗಳ ತಯಾರಿಕೆ, ಬೆತ್ತ ಮತ್ತು ಬಿದಿರು ಉದ್ದಿಮೆ, ಕಾಗದದ ದೊನ್ನೆ, ತಟ್ಟೆ,ಕೈಚೀಲ ಮತ್ತಿತರ ಕಾಗದದ ವಸ್ತುಗಳ ತಯಾರಿಕೆ, ಎಕ್ಸರ್ ಸೈಜ್ ಪುಸ್ತಕದ ರಟ್ಟು ಹಾಕುವಿಕೆ, ಕವರುಗಳ ತಯಾರಿಕೆ,ರಿಜಿಸ್ಟರ್ ಪುಸ್ತಕಗಳ ತಯಾರಿಕೆ ಇತ್ಯಾದಿಗಳ ಕಾಗದದಿಂದ ತಯಾರಿಸಲಾಗುವ ವಸ್ತುಗಳು, ಪೊರಕೆ ಮತ್ತು ತಟ್ಟಿಗಳ ತಯಾರಿಕೆ, ಅರಣ್ಯ ಉತ್ಪನ್ನಗಳ ಸಂಗ್ರಹಣೆ,ಪರಿಷ್ಕರಣೆ ಹಾಗೂ ಪ್ಯಾಕಿಂಗ್, ಪೋಟೋಗಳಿಗೆ ಕಟ್ಟು ಹಾಕುವಿಕೆ, ಸೆಣಬಿನ ಉತ್ಪನ್ನಗಳ ಉತ್ಪಾದನೆ (ನಾರು ಉದ್ದಿಮೆ ಅಡಿಯಲ್ಲಿ)ಗೆ ಸಾಲ ನೀಡಲಾಗುವುದು.

ಪಾಲಿಮರ್ ಮತ್ತು ರಾಸಾಯನಿಕ ಆಧಾರಿತ ಉದ್ದಿಮೆಗಳು:

ಗೃಹ ಚರ್ಮೋದ್ಯೋಗ-ಇದರಲ್ಲಿ ಚರ್ಮ ಸುಲಿಯುವುದು,ಚರ್ಮಹದ ಮಾಡುವುದು, ಗೃಹ ಸಾಬೂನು ಉದ್ದಿಮೆ, ರಬ್ಬರ್ ವಸ್ತುಗಳ ತಯಾರಿಕೆ, ರೆಕ್ಸಿನ್ ಮತ್ತು ಪಿ.ವಿ.ಸಿ. ಉತ್ಪನ್ನಗಳ ತಯಾರಿಕೆ, ಕೊಂಬು,ಮೂಳೆ,ದಂತ ಇವುಗಳ ಉತ್ಪನ್ನಗಳು, ಮೇಣದಬತ್ತಿ,ಕರ್ಪೂರ,ವ್ಯಾಕ್ಸ್ ತಯಾರಿಕೆ, ಪ್ಲಾಸ್ಟಿಕ್ ಪ್ಯಾಕಿಂಗ್ ವಸ್ಸುಗಳ ತಯಾರಿಕೆ, ಬಿಂದಿ ತಯಾರಿಕೆ, ಮೆಹಂದಿ ತಯಾರಿಕೆ, ಸುಗಂದ ಎಣ್ಣೆಗಳ ತಯಾರಿಕೆ, ಷಾಂಪೂಗಳ ತಯಾರಿಕೆ,.ಕೇಶ ತೈಲಗಳ ಉತ್ಪಾದನೆ, ಡಿಟರ್ಜೇಂಟ್ಸ್ ಮತ್ತು ವಾಷಿಂಗ್ ಪೌಡರ್ಗಮಳ ತಯಾರಿಕೆಗೆ ಸಾಲ ನೀಡಲಾಗುವುದು.

ಸೇವಾ ಉದ್ದಿಮೆಗಳು:

ಸೈಕಲ್ ಅಸೆಂಬೆಲ್, ಎಂಬ್ರಾಯಿಡರಿ ಅಲಂಕಾರ, ಬಟ್ಟೆಗೆ ಎಂಬ್ರಾಯಿಡರಿ ಅಲಂಕಾರ, ಸಿದ್ದ ಉಡುಪುಗಳ ತಯಾರಿಕೆ, ಸಿದ್ದ ಉಡುಪುಗಳ ತಯಾರಿಕೆ ಟೈಲರಿಂಗ್, ಬಾಟಿಕ್ ಕೆಲಸ, ಸ್ಟೌವ್ ಬತ್ತಿಗಳು, ಆಟದ ಸಾಮಾನುಗಳು ಹಾಗೂ ಬೊಂಬೆಗಳ ತಯಾರಿಕೆ, ದಾರದ ಉಂಡೆಗಳು,ಉಲ್ಲನ್ ಉಡುಪುಗಳು, ಶಸ್ತ್ರ ಚಿಕಿತ್ಸೆಯಲ್ಲಿ ಉಪಯೋಗಿಸಲಾಗುವ ಬ್ಯಾಂಡೇಜ್ಗಗಳು, ಬ್ಯೂಟಿ ಪಾರ್ಲರ್, ಲಾಂಡ್ರಿ, ಕ್ಷೌರಿಕ ಘಟಕ, ಎಲೆಕ್ಟ್ರಿಕಲ್ ವೈರಿಂಗ್ ಎಲೆಕ್ಟ್ರಾನಿಕ್ಸ್ ಮತ್ತು ಈ ಬಗೆಯ ಗೃಹ ಬಳಕೆ ವಸ್ತುಗಳ ತಯಾರಿಕೆ, ಡೀಸೆಲ್ ಇಂಜಿನ್ಗಿಳ ರಿಪೇರಿ, ಪಂಪುಸೆಟ್ಟುಗಳ ರಿಪೇರಿ, ಟೈರ್/ವಲ್ಕನೈಎಸಿಂಗ್/ಘಟಕ, ಸ್ಟ್ರಯರ್ಗಅಳ ಕ್ರಿಮಿನಾಶಕಗಳ ಪಂಪುಸೆಟ್ಟುಗಳ ಇತ್ಯಾದಿ ಕೃಷಿ ಸೇವಾ ಉದ್ದಿಮೆಗಳು, ಸೌಂಡ್ ಸಿಸ್ಟಂ, ಬ್ಯಾಟರಿ ಚಾರ್ಜಿಂಗ್, ಆರ್ಟ್ ಬೋರ್ಡ್ ಪೈಂಟಿಂಗ್, ಸೈಕಲ್ ರಿಪೇರಿ, ಕಟ್ಟಡದ ಕೆಲಸ,ಬ್ಯಾಂಡ್ ಟ್ರೂಪ್,ಟೀ ಸ್ಟಾಲುಗಳಿಗೂ ಸಾಲ ಸಿಗುವುದು.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: http://www.karnatakakhadi.com/pmegp.html ನಲ್ಲಿ ಮಾಹಿತಿ ಪಡೆಯಬಹುದು. ಇಲ್ಲವೆ ಈ ಕೆಳಗೆ ಸೂಚಿಸಿದ ವಿಳಾಸದಲ್ಲಿ ಸಂಪಕ್ಕಿಸಬಹುದು.

ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಜಿಲ್ಲಾ ಕಛೇರಿಗಳು, ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಬ್ಯಾಂಕ್ ಕಛೇರಿಗಳು, ಖಾದಿ ಗ್ರಾಮೋದ್ಯೋಗ ಆಯೋಗ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಖಾದಿ ಭವನ,ನಂ.10,ಜಸ್ಮಾಭವನ ರಸ್ತೆ, ಬೆಂಗಳೂರು-560052ಫ್ಯಾಕ್ಸ್: 080-22643446ದೂರವಾಣಿ ಸಂಖೆ:22643445/22643439 ಬೆಂಗಳೂರು (ನ),ಜಿಲ್ಲೆ -22643431ಬೆಂಗಳೂರು (ಗ್ರಾ)ಜಿಲ್ಲೆ-22643432, ಮೊ. 9480825622/9448329244ಗೆ ಸಂಪರ್ಕಿಸಬಹುದು.