ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 15 ನೇ ಕಂತಿನ ಆರ್ಥಿಕ ಪ್ರಯೋಜನವನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಬಿಡುಗಡೆ ಮಾಡಿದೆ.
ಇಂದು ಜಾರ್ಖಂಡ್‌ನ ಕುಂತಿ ಜಿಲ್ಲೆಯ ಬಿರ್ಸಾ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿರುವ ಜನ್ ಜಾತಿಯ ಗೌರವ ದಿವಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪಿಎಂ-ಕಿಸಾನ್ ಯೋಜನೆಯ 15 ನೇ ಕಂತಿನ ಹಣ ಬಿಡುಗಡೆಗೊಳಿಸಿದ್ದಾರೆ.
ಸಾಂಸ್ಕೃತಿಕ ಪರಂಪರೆಯ ರಕ್ಷಣೆ, ರಾಷ್ಟ್ರೀಯ ಗೌರವ, ಶೌರ್ಯ ಹಾಗೂ ಆತಿಥ್ಯದ ಭಾರತೀಯ ಮೌಲ್ಯಗಳನ್ನು ಉತ್ತೇಜಿಸುವಲ್ಲಿ ಬುಡಕಟ್ಟು ಜನಾಂಗದವರ ಪ್ರಯತ್ನಗಳನ್ನು ಗುರುತಿಸಲು ಪ್ರತಿ ವರ್ಷ ಜನ್ ಜಾತಿಯ ಗೌರವ ದಿವಸ್ ಆಚರಿಸಲಾಗುತ್ತಿದೆ. ಇನ್ನು ಈ 15ನೇ ಕಂತಿನಲ್ಲಿ 8 ಕೋಟಿಗೂ ಅಧಿಕ ರೈತರು 18 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೊತ್ತ ಪಡೆಯಲಿದ್ದಾರೆ.
ಈ ಯೋಜನೆಯಡಿಯಲ್ಲಿ ಪ್ರತಿ ವರ್ಷಕ್ಕೆ ರೂ 6000 ಮೊತ್ತವನ್ನು ತಲಾ ರೂ 2000 ರಂತೆ ಮೂರು ಕಂತುಗಳಲ್ಲಿ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ DBT ಮೂಲಕ ಬಿಡುಗಡೆ ಮಾಡಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಫಲಾನುಭವಿಗಳು ನಾನಾ ಕಾರಣಗಳಿಂದ 2000 ರೂಪಾಯಿಯಗಳನ್ನು ತಮ್ಮ ಖಾತೆಯಲ್ಲಿ ಸ್ವೀಕರಿಸದಿರಬಹುದು. ಯೋಜನೆಗೆ ಅರ್ಹರಾಗಿರುವವರು ಮತ್ತು 15 ನೇ ಕಂತಿನಲ್ಲಿ ನೀಡಲಾದ ಮೊತ್ತವನ್ನು ಪಡೆಯದಿರುವವರು ಸರ್ಕಾರದ ಸಹಾಯವಾಣಿ ಸಂಖ್ಯೆಗಳಲ್ಲಿ ದೂರು ಸಲ್ಲಿಸಬಹುದು.
ಈ ಯೋಜನೆಯಲ್ಲಿರುವ ಫಲಾನುಭವಿಗಳು ಕೇಂದ್ರ ಸರ್ಕಾರದಿಂದ 2000 ರೂ.ಗಳ ಕಂತು ಪಡೆಯಲು ಅರ್ಹರಾಗಿರುತ್ತಾರೆ. ಆದ್ದರಿಂದ ಅವರು ಬ್ಯಾಂಕ್ ಖಾತೆಯಲ್ಲಿ ಹಣ ಪಡೆಯದಿದ್ದರೆ, ಅವರು ದೂರು ಸಲ್ಲಿಸಬೇಕು.
ದೂರನ್ನು ಸಲ್ಲಿಸುವುದು ಹೇಗೆ?
ಫಲಾನುಭವಿಗಳು ದೂರು ನೀಡಲು ಮತ್ತು ರೂ 2000 ಕಂತುಗಳನ್ನು ಸ್ವೀಕರಿಸಲು ಕೆಲವು ಸಹಾಯವಾಣಿ ಸಂಖ್ಯೆಗಳನ್ನು ಬಳಸಬಹುದಾಗಿದೆ. ಫಲಾನುಭವಿಗಳು ಮೊದಲು ಈ ಕ್ರಮಗಳ ಬಗ್ಗೆ ತಿಳಿದಿರಬೇಕು.
ದೂರು ನೀಡಲು ಪಿಎಂ ಕಿಸಾನ್ ಹೆಲ್ಪ್‌ಡೆಸ್ಕ್ ಸಂಖ್ಯೆ - 011-24300606 ಗೆ ಕರೆ ಮಾಡಬಹುದು. ಅಥವಾ ಮತ್ತೊಂದು PM ಕಿಸಾನ್‌ನ ಟೋಲ್-ಫ್ರೀ ಸಂಖ್ಯೆ - 18001155266. ಕರೆ ಮಾಡಬಹದು. ಇದರ ಹೊರತಾಗಿ ಫಲಾನುಭವಿಗಳು pmkisan-ict@gov.in ಇಮೇಲ್ ಅನ್ನು ಸಹ ಕಳುಹಿಸಬಹುದು. ಪ್ರಧಾನಮಂತ್ರಿ ಕಿಸಾನ್ ಯೋಜನೆಯ 15ನೇ ಕಂತಿಗೆ ಹಣ ಸಿಗದೇ ಇರುವುದಕ್ಕೆ ಕಾರಣವನ್ನು ಅವರು ಮೇಲ್ ಮೂಲಕ ಕೇಳಬಹುದು.