News

ನಮಗೆ ಗೊತ್ತಿರದೇ ಇರುವ ಕೆಲವು ವೈಜ್ಞಾನಿಕ ಸತ್ಯಗಳ ಮಾಹಿತಿ ಇಲ್ಲಿದೆ......

10 January, 2021 8:58 AM IST By:
Bell

ನಮ್ಮ ಸುತ್ತಮುತ್ತಲಿರುವ ಎಷ್ಟೋ ಸಂಗತಿಗಳ ವೈಜ್ಞಾನಿಕ ಹಿನ್ನೆಲೆ ನಮಗೆ ಗೊತ್ತೇ ಇರುವುದಿಲ್ಲ. ಅವುಗಳನ್ನು ನಂಬಿಕೆ, ಪರಂಪರೆಯಿಂದ ಬಂದಿವೆ ಎಂದು ತಿಳಿದುಕೊಳ್ಳುತ್ತೇವೆ ವಿನಃ ಅದರ ಹಿನ್ನೆಲೆಯ ಗೋಜಿಗೆ ಹೋಗುವುದಿಲ್ಲ. ಆದರೂ ನಿಮ್ಮ ಮಾಹಿತಿಗಾಗಿ ಇಲ್ಲಿ ಕೆಲವೊಂದು ವೈಜ್ಞಾನಿಕ ಸತ್ಯವನ್ನು ತಿಳಿಸುತ್ತೇನೆ.

ದೇವಸ್ಥಾನದಲ್ಲಿ ಗಂಟೆಗಳನ್ನು ಏಕೆ ಇಟ್ಟಿರುತ್ತಾರೆ ಗೊತ್ತೇ?

ದೇವಾಲಯಗಳಲ್ಲಿ ಗಂಟೆಗಳ ನಾದನ ಪ್ರತಿಯೊಬ್ಬರೂ ಕೇಳಿರುತ್ತೀರಿ. ಆದರೆ ಈ ಗಂಟೆಗಳನ್ನೇಕೆ ಇಟ್ಟಿರುತ್ತಾರೆ ಎಂಬುದನ್ನು ಎಂದಾದರೂ ಯೋಚನೆ ಮಾಡಿದ್ದೀರಾ. ಇದಕ್ಕೊಂದು ವೈಜ್ಞಾನಿಕ ಸತ್ಯವೂ ಇದೆ.

ಸ್ಕಂದ ಪುರಾಣದ ಪ್ರಕಾರ ದೇವಸ್ಥಾನದಲ್ಲಿ ಇರುವ ಗಂಟೆಗಳನ್ನು ಹೊಡೆದಾಗ ಮನುಷ್ಯರಲ್ಲಿರುವ ಪಾಪಗಳು ತೊಲಗುತ್ತವೆ ಎಂದು ನಂಬಲಾಗಿದೆ ಆದರೆ ಅದರ ವೈಜ್ಞಾನಿಕ ಹಿನ್ನೆಲೆ ಬೇರೆನೆ ಇದೆ. ಗಂಟೆಯನ್ನು ಹೊಡೆಯುವುದರಿಂದ ಅದರ ವೈಬ್ರೇಷನ್ ಗಾಳಿಯ ಪ್ರಮಾಣದಿಂದ ದೂರದವೆರೆಗೂ ಸಾಗಿ ಗಾಳಿಯಲ್ಲಿರುವ ಬ್ಯಾಕ್ಟೀರಿಯಾಗಳು ಸತ್ತು ಹೋಗುತ್ತವೆ. ಇಷ್ಟೇ ಅಲ್ಲದೆ ಗಂಟೆಯ ನಾದನದಿಂದ ನಮ್ಮ ಮೆದುಳಿನಲ್ಲಿ ಒಂದು ರೀತಿಯ ಪ್ರಶಾಂತತೆಯ ಭಾವ ಮೂಡುತ್ತದೆ.

ಪಾರ್ಥೀವ ಶರೀರದ ಮೂಗಿನಲ್ಲೇಕೆ ಹತ್ತಿ ಇಟ್ಟಿರುತ್ತಾರೆ?

ಈ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗಳು ಒಂದಲ್ಲಾ ಒಂದು ದಿನ ಸಾಯಲೇಬೇಕು. ಮರಣ ಹೊಂದಿದ ವ್ಯಕ್ತಿಗಳ ಕಿವಿ ಮತ್ತು ಮೂಗಿನಲ್ಲಿ ಹತ್ತಿಯನ್ನು ಏಕೆ ಹಾಕಿರುತ್ತಾರೆ ಎಂದು  ನೀವು ಯೋಚನೆ  ಮಾಡಿರಬೇಕು. ಏಕೆಂದರೆ ಮನುಷ್ಯ ಸತ್ತ ನಂತರ ಪ್ರೋಟೋ ಬ್ಯಾಕ್ಟೀರಿಯಾಗಳು ಒಂದು ತರಹದ ಲಿಕ್ವಿಡ್ ತಯಾರಿ ಮಾಡುತ್ತವೆ. ಇವು ಮನುಷ್ಯನ ರಂಧ್ರಗಳ ಮೂಲಕ ಹೊರ ಬರುತ್ತವೆ. ಇದರಿಂದ ದುರ್ಗಂಧ ಹೊರಬರುತ್ತದೆ. ಹಾಗೆಯೇ ಇನ್ನೊಂದು ಕಾರಣವೆಂದರೆ ದೇಹದ ಉಸಿರು ನಿಂತ ಮೇಲೆ ಗಾಳಿಯಲ್ಲಿ ಇರುವ ಸೂಕ್ಷ್ಮ ಜೀವಿಗಳು ಮೂಗು ಅಥವಾ ಯಾವುದೇ ರಂಧ್ರದ ಮೂಲಕ ದೇಹದ ಒಳಗಡೆ ಹೋಗುವುದರಿಂದ ಶರೀರ ಬೇಗ ಕೆಡಲು ಸಾಧ್ಯವಾಗುತ್ತದೆ.

 ಮನುಷ್ಯನ ದೇಹದ ಮೇಲೆ ಎಕ್ಸರೆ ಹೇಗೆ ಕೆಲಸ ಮಾಡುತ್ತದೆ ಗೊತ್ತೇ?

 1895ರಲ್ಲಿ ಒಬ್ಬ ವಿಜ್ಞಾನಿ ಈ ಎಕ್ಸರೆಯನ್ನು ಕಂಡು ಹಿಡಿದಿದ್ದಾರೆ. ಎಕ್ಸರ್ ಒಂದು ವಿಧವಾದ ಎಲೆಕ್ಟ್ರೋ ಮ್ಯಾಗ್ನೆಟಿಕ್ ಅಂಗ. ಇದು ನೋಡುವ ಲೈಟ್ ಗಿಂತ ಕಡಿಮೆ ತರಂಗ ಹೊಂದಿರುತ್ತದೆ. ಇವು ಕಡಿಮೆ ತರಂಗಾಂತರಗಳನ್ನು ಹೊಂದಿರುವುದರಿಂದ ದೇಹದ ಒಳಗಡೆ ಪ್ರವೇಶ ಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಲೈಟ್ ಕಿರಣಗಳು ಯಾವುದಾದರೂ ವಸ್ತು ಅಡ್ಡವಾದರೆ ಅಲ್ಲೇ ನಿಲ್ಲುತ್ತವೆ. ಆದರೆ ಎಕ್ಸರೆ ಕಿರಣಗಳು ವಸ್ತುವನ್ನು ದಾಟಿ ಮುಂದೆ ಹೋಗುತ್ತವೆ. ಮನುಷ್ಯನ ದೇಹ ಕಡಿಮೆ ಸಾಂದ್ರತೆ ಹೊಂದಿರುವುದರಿಂದ ಎಕ್ಸರೆ ಕಿರಣಗಳು ಕೆಲಸ ಮಾಡುತ್ತವೆ.

ಲೇಖನ: ಮುತ್ತಣ್ಣ ಬ್ಯಾಗೆಳ್ಳಿ