ಕೆಲವು ದಿನಗಳ ಹಿಂದೆ ಹಾಕಿದ ಬಂಡವಾಳ ಸಿಗದೇ ಸಂಕಷ್ಟದಲ್ಲಿದ್ದ ಟೊಮೇಟೊ ರೈತರು ಕೆಲವೇ ದಿನಗಳಲ್ಲಿ ಲಕ್ಷಾಧಿಪತಿಗಳಾಗುತ್ತಿದ್ದಾರೆ.
ಕೆಜಿಗೆ 40 ರೂಪಾಯಿನ್ನು ದಾಟದ ಟೊಮೆಟೊ ಬೆಲೆ ಈಗ ರೂ. 200 ತಲುಪುವ ಮೂಲಕ ರೈತರು ಒಂದೇ ದಿನದಲ್ಲಿ ಲಕ್ಷಾಧಿಪತಿಗಳಾಗುತ್ತಿದ್ದಾರೆ. ಹಾಗೆಯೇ ಟೊಮೆಟೊ ಕೃಷಿ ಮಾಡಿದ ಪುಣೆಯ ಕೋಟ್ಯಾಧಿಪತಿ ರೈತನ ಕಥೆಯನ್ನು ನಾವು ಇಲ್ಲಿ ನೀಡಿದ್ದೇವೆ.
ಪುಣೆಯ 36 ವರ್ಷದ ರೈತ ಈಶ್ವರ ಗಾಯಕರ್ ತಮ್ಮ 12 ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆ ಬೆಳೆದಿದ್ದಾರೆ. ಅವರ ಬಳಿ 60 ಸಾವಿರ ಕೆಜಿ ಟೊಮೆಟೊ ಕೂಡ ಇದೆ. ಅವುಗಳನ್ನು ಇದೇ ಬೆಲೆಗೆ ಮಾರಾಟ ಮಾಡಿ ಈ ಋತುವಿನಲ್ಲಿ ತನ್ನ ಗಳಿಕೆಯನ್ನು 3.5 ಕೋಟಿ ರೂ.ಗೆ ಹೆಚ್ಚಿಸಿಕೊಂಡಿದ್ದಾರೆ.
ಸಾಮಾನ್ಯ ಪರಿಸ್ಥಿತಿಯಲ್ಲಿ ಒಂದು ಕಿಲೋ ಟೊಮೆಟೊ ಬೆಲೆ ಕೆಜಿಗೆ 20 ರಿಂದ 30 ರೂ. ಇರುತ್ತದೆ. ಆದರೆ ಕಳೆದ ಹಂಗಾಮಿನಲ್ಲಿ ಅಕಾಲಿಕ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದು, ಇದರ ಜೊತೆಗೆ ಬಿಸಿಲಿನ ಬೇಗೆ ಕಡಿಮೆಯಾಗಿ ಟೊಮೇಟೊ ಬೆಳೆ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬಾರದ ಕಾರಣ ಟೊಮೇಟೊ ಬೆಲೆಯಲ್ಲಿ . 150 ರಿಂದ 200 ರೂ. ಏರಿಕೆಯಾಗಿದೆ
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು 2021ರಲ್ಲಿ ಟೊಮೆಟೊ ಕೃಷಿಯಿಂದ ರೂ. 20 ಲಕ್ಷ ನಷ್ಟವಾಗಿದೆ ಎಂದು ತಿಳಿಸಿದರು. ಆದರೆ, ಟೊಮೇಟೊ ಮಾತ್ರವಲ್ಲದೆ ಸೀಸನ್ ಗೆ ತಕ್ಕಂತೆ ಈರುಳ್ಳಿ, ಹೂವು ಬೆಳೆಯುತ್ತೇವೆ ಎನ್ನುತ್ತಾರೆ ರೈತ ಈಶ್ವರ್ . ಇನ್ನು ಮುಂದಿನ ದಿನಗಳಲ್ಲಿ ಕ್ರಮೇಣ ಟೊಮೆಟೊ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಕೃಷಿ ತಜ್ಞರು ಅಂದಾಜಿಸಿದ್ದಾರೆ.
ಟೊಮೆಟೊ ಬೆಳೆದ ರೈತನ ಹತ್ಯೆ
ಕಳೆದ ಏಳು ದಿನಗಳಲ್ಲಿ ಆಂಧ್ರಪ್ರದೇಶದ ಅನ್ನಮಯ ಜಿಲ್ಲೆಯಲ್ಲಿ ಇಬ್ಬರು ಟೊಮೆಟೊ ರೈತರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅನ್ನಮಯ ಜಿಲ್ಲೆಯ ಪೆದ್ದ ತಿಪ್ಪಸಮುದ್ರಂ ಬಳಿ ಬೆಳೆ ಕಾವಲು ಕಾಯುತ್ತಿದ್ದ ವೇಳೆ ಜಮೀನಿನಲ್ಲಿ ಮಲಗಿದ್ದ ರೈತ ಮಧುಕರ್ ರೆಡ್ಡಿ ಎಂಬಾತನನ್ನು ಕೊಲೆ ಮಾಡಿರುವ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.
ಘಟನೆ ಬಳಿಕ ಡಿಎಸ್ಪಿ ಕೇಶಪ್ಪ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ತಲುಪಿದ್ದು, ಘಟನೆಯ ಕುರಿತು ತನಿಖೆ ನಡೆಯಬೇಕಿದ್ದು, ಹೆಚ್ಚಿನ ವಿವರಗಳಿಗಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದರು. ಇದಕ್ಕೂ ಮುನ್ನ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ಮಂಡಲದ ಬೋಡುಮಲ್ಲದಿನ್ನೆ ಗ್ರಾಮದಲ್ಲಿ 62 ವರ್ಷದ ಟೊಮೇಟೊ ರೈತನನ್ನು ಹತ್ಯೆ ಮಾಡಲಾಗಿತ್ತು. ಮೃತರನ್ನು ನರೇಮ್ ರಾಜಶೇಖರ್ ರೆಡ್ಡಿ ಎಂದು ಗುರುತಿಸಲಾಗಿದೆ.