District Sweep Activity: ಚುನಾವಣೆಯ ನೈತಿಕ ಮತದಾನದ ಕುರಿತು ರೀಲ್ಸ್ (Reels Video Making Contest)ಗಳನ್ನು ತಯಾರಿಸಲು ಮತ್ತು ಸಲ್ಲಿಸಲು ಮೇ 5 ಕೊನೆಯ ದಿನವಾಗಿದೆ.
ಧಾರವಾಡ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮತದಾನದ ಶೇಕಡಾವಾಡು ಪ್ರಮಾಣವನ್ನು ಹೆಚ್ಚಿಸಲು ಸ್ವೀಪ್ ಮೂಲಕ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ಪದವಿಪೂರ್ವ ಶಿಕ್ಷಣಲಾಖೆಯ ಉಪನಿರ್ದೇಶಕರ ಅಧೀನದಲ್ಲಿ ಬರುವ ಕಾಲೇಜುಗಳಲ್ಲಿ ಸ್ಥಾಪಿಸಲಾಗಿರುವ ಇ.ಎಲ್.ಸಿ ಕ್ಯಾಂಪಸ್ ಅಂಬಾಸಿಡರ್‍ಗಳನ್ನು ಬಳಸಿಕೊಂಡು
ಚುನಾವಣೆಯ ನೈತಿಕ ಮತದಾನದ ಕುರಿತು ರೀಲ್ಸ್ (ಸಣ್ಣ ವಿಡಿಯೋ ತುಣುಕು)ಗಳನ್ನು ತಯಾರಿಸಲು ಮತ್ತು ಸಲ್ಲಿಸಲು ಮೇ 5 ಕೊನೆಯ ದಿನವಾಗಿದೆ.
ತಯಾರಿಸಿದ ರೀಲ್ಸ್‌ಗಳನ್ನು 9986929286 ಮೊಬೈಲ್ ಸಂಖ್ಯೆಗೆ ಕಳುಹಿಸಬೇಕು.
ಈ ರೀಲ್ಸ್‍ಗಳನ್ನು ಧಾರವಾಡ ಜಿಲ್ಲಾ ಪಂಚಾಯತ You Tube Chanel ದಲ್ಲಿ ಅಪ್ ಲೋಡ ಮಾಡಿಸಿ ಲಿಂಕಗಳನ್ನು ಸಂಬಂಧಿಸಿದ ಕ್ಯಾಂಪಸ್ ಅಂಬಾಸಿಡರ್ ಮೂಲಕ ವಿದ್ಯಾರ್ಥಿ ಮತದಾರರು ಹಾಗೂ ಸಾರ್ವಜನಿಕರಿಗೆ ವ್ಯಾಟ್ಸ್ ಆಪ್ ಮೂಲಕ ಪುಚಾರ ಪಡಿಸುವಂತೆ ಕ್ರಮ ವಹಿಸಲಾಗುವುದು.
ರೀಲ್ಸ್ (ಸಣ್ಣ ವಿಡಿಯೋ ತುಣುಕು)ಗಳನ್ನು 30 ರಿಂದ 40 ಸೆಕೆಂಡಗಳ ಒಳಗೆ ತಯಾರಿಸಬೇಕು.
ವಿಡಿಯೋದಲ್ಲಿ ಏನಿರಬೇಕು!
ಯುವ ಮತದಾರರಿಗೆ ನೈತಿಕ ಮತದಾನದ ಕುರಿತು ಅರಿವು ಮೂಡಿಸುವ ವೀಡಿಯೊ ರೀಲ್ಸ್ ಮತ್ತು 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ನೈತಿಕ ಮತದಾನದ ಕುರಿತು ಅರಿವು ಮೂಡಿಸುವ ವೀಡಿಯೋ, ಅಂಗವಿಕಲರಿಗೆ ಸಂಬಂಧಿಸಿದಂತೆ ನೈತಿಕ ಮತದಾನದ ಕುರಿತು ವೀಡಿಯೋ ರೀಲ್ಸ್ ತಯಾರಿಸಿ ಕಳುಹಿಸಬಹುದು.
ಈ ರೀಲ್ಸ್ ವೀಡಿಯೋ ಸ್ಪರ್ಧೆಯಲ್ಲಿ ಧಾರವಾಡ ಜಿಲ್ಲೆಯ ಎಲ್ಲ ವಿಧಾನಸಭಾ ಮತ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಇರುವ ಸ್ಪರ್ಧಿಗಳು ಮಾತ್ರ ಭಾಗವಹಿಸಬೇಕು.
ಆಯ್ಕೆ ಸಮಿತಿಯು ವಿಜೇತರನ್ನು ಗುರುತಿಸುವುದು ಮತ್ತು ಅವರಿಗೆ ಬಹುಮಾನಗಳನ್ನು ಜಿಲ್ಲಾ ಸ್ವೀಪ್ ಸಮಿತಿಯಿಂದ ವಿತರಿಸಲಾಗುವುದು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.