News

ಮಾರ್ಚ್ ತಿಂಗಳ ಪಡಿತರದಾರರಿಗೆ ಆಹಾರ ಧಾನ್ಯ ವಿತರಣೆ

10 March, 2021 11:55 AM IST By:

2021ರ ಮಾರ್ಚ್ ತಿಂಗಳ ಎ.ಎ.ವೈ./ ಅಂತ್ಯೋದಯ ಅನ್ನ, ಬಿ.ಪಿ.ಎಲ್./ಆದ್ಯತಾ ಹಾಗೂ ಎಪಿಎಲ್/ ಆದ್ಯತೇತರ ಪಡಿತರ ಚೀಟಿದಾರರಿಗೆ ಪಡಿತರ ಆಹಾರ ಧಾನ್ಯವನ್ನು ವಿತರಿಸಲಾಗುತ್ತಿದೆ.

 ಎ.ಎ.ವೈ./ ಅಂತ್ಯೋದಯ ಅನ್ನ ಪಡಿತರ ಕಾರ್ಡುದಾರ ಪ್ರತಿ ಪಡಿತರ ಚೀಟಿಗೆ 35 ಕೆ.ಜಿ. ಅಕ್ಕಿ. ಉಚಿತವಾಗಿ ನೀಡಲಾಗುತ್ತದೆ. ಬಿ.ಪಿ.ಎಲ್./ಆದ್ಯತಾ ಕಾರ್ಡಿನ  ಪ್ರತಿ ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ 5. ಕೆ.ಜಿ ಅಕ್ಕಿ  ಹಾಗೂ ಪ್ರತಿ ಪಡಿತರ ಚೀಟಿಗೆ 2 ಕೆ.ಜಿ. ಗೋಧಿ ಉಚಿತವಾಗಿ ನೀಡಲಾಗುತ್ತದೆ.

 ಎ.ಪಿ.ಎಲ್./ಆದ್ಯತೇತರ (Willingness) ಪಡಿತರ ಚೀಟಿದಾರರಿಗೆ ಏಕ ಸದಸ್ಯ ಇರುವ ಪಡಿತರ ಚೀಟಿಗೆ 5 ಕೆ.ಜಿ ಅಕ್ಕಿ  ಹಾಗೂ  ಒಂದಕ್ಕಿಂತ ಹೆಚ್ಚು ಸದಸ್ಯರಿರುವ ಪಡಿತರ ಚೀಟಿಗೆ 10 ಕೆ.ಜಿ ಅಕ್ಕಿಯನ್ನು ಪ್ರತಿ ಕೆ.ಜಿ. ಗೆ 15 ರೂ ದರದಲ್ಲಿ ನೀಡಲಾಗುತ್ತದೆ.

ಪೋರ್ಟೆಬಿಲಿಟಿ (Portability) ಅಂತರರಾಜ್ಯ /ಅಂತರ್‍ಜಿಲ್ಲೆ ಪೋರ್ಟೆಬಿಲಿಟಿ ಜಾರಿಯಲ್ಲಿರುವುದರಿಂದ ಯಾವುದೇ ವರ್ಗದ ಪಡಿತರ ಚೀಟಿಗೆ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಹೊಸ ಪಡಿತರ ಚೀಟಿಗೆ ಆನ್ಲೈನ್ ಅರ್ಜಿ ಸಲ್ಲಿಕೆ ಪುನಾರಂಭ

ಕೊರೋನಾದಂತಹ ಸಾಂಕ್ರಾಮಿಕ ರೋಗದ ಕಾರಣದಿಂದ ನಿಲುಗಡೆಯಾಗಿದ್ದ  ಎಲ್ಲ ಚಟುವಟಿಕೆಗಳು ಈದೀಗ ಪುನರ್ಜೀವ ಪಡೆದಿದ್ದು ಒಂದೊಂದೆ  ಕಾರ್ಯಗಳು ಮತ್ತೆ ಪ್ರಾರಂಭಗೊಳ್ಳುತ್ತಿವೆ . ಪಡಿತರ ಬಡವರ ಪಾಲಿಗೆ ವರದಾನ ಎಂದೇ ಹೇಳಬಹುದು, ಅದಕ್ಕಾಗಿ ಪಡಿತರ ಪಡೆಯಲು ಪಡಿತರ ಚೀಟಿ ಎಲ್ಲರಿಗೂ ಕಡ್ಡಾಯ. ಪಡಿತರ ಚೀಟಿ ಇಲ್ಲದಿದ್ದವರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಹೊಸ ಪಡಿತರ ಚೀಟಿಯನ್ನು ಪಡೆದುಕೊಳ್ಳಬಹುದು

ಆದರೆ ಕೆಲವು ದಿನಗಳ ಹಿಂದೆ ಪಡಿತರ ಚೀಟಿಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಬಂದಾಗಿತ್ತು, ಆದರೆ ಅದಕ್ಕೆ ಈಗ ಕೊನೆಯ ಬಂದಿದ್ದು ಇದೀಗ ಆನ್ಲೈನ್ ಮೂಲಕ ನೀವು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದಾಗಿದೆ, ಇದರ ಬಗ್ಗೆ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ. ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯಡಿಯಲ್ಲಿ ನಾವು ಅರ್ಜಿಗಳನ್ನು ಸಲ್ಲಿಸಿ ಸೇವೆ ಪಡೆದುಕೊಳ್ಳಬಹುದು.

 ಅರ್ಜಿ ಸಲ್ಲಿಸುವುದು ಹೇಗೆ

- ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ.

- ನೀವು ಹೋಗುವಾಗ ನಿಮ್ಮೊಂದಿಗೆ ರೇಷನ್ ಕಾರ್ಡ್ನಲ್ಲಿ ಯಾರ ಯಾರ ಹೆಸರು ಬರಬೇಕು ಅವರೆಲ್ಲರನ್ನೂ ಕರೆದುಕೊಂಡು ಹೋಗಬೇಕು.

-ಪ್ರತಿಯೊಬ್ಬ ವ್ಯಕ್ತಿಯ ಆಧಾರ್ ಕಾರ್ಡನ್ನು ತೆಗೆದುಕೊಂಡು ಹೋಗುವುದು ಕಡ್ಡಾಯವಾಗಿದೆ.

- ನೀವು ನಿಮ್ಮ ಮನೆಯಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಆದರೆ ನಿಮ್ಮ ಬಳಿ ಬಯೋಮೆಟ್ರಿಕ್ ವಸ್ತುವಿನ ಅಗತ್ಯ ಬೇಕಾಗುತ್ತದೆ ಆದ ಕಾರಣದಿಂದ ನಾವು ಆನ್ಲೈನ್ ಭೇಟಿ ನೀಡುವುದು ಅತ್ಯುತ್ತಮ ಆಯ್ಕೆ.

ಅರ್ಹತೆಯುಳ್ಳ ವ್ಯಕ್ತಿಗಳು ಸರ್ಕಾರದ ಯೋಜನೆಗಳ ಲಾಭವನ್ನು ಪಡೆದುಕೊಳ್ಳಬೇಕು ಆದ ಕಾರಣ ರೇಷನ್ ಕಾರ್ಡ್ ಇಲ್ಲದೆ ಇರುವರು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಬೇಕಾಗಿ ವಿನಂತಿ.